ಶಿವಮೊಗ್ಗ(ಆ.07): ನಗರದಲ್ಲಿ ಸೋಮವಾರದಿಂದ ಸುರಿಯುತ್ತಿರುವ ಮಳೆಗೆ ನಗರದ ಕೆಲ ಬಡಾವಣೆಗಳಲ್ಲಿನ ಮನೆಗಳಿಗೆ ನೀರು ನುಗ್ಗಿ, ಕೆಲವು ಕಡೆ ಮನೆ ಗೋಡೆಗಳು ಕುಸಿದು ಜನರನ್ನು ಸಂಕಷ್ಟಕ್ಕೀಡು ಮಾಡಿದೆ.

ಮನೆಗಳಿಗೆ ನೀರು ನುಗ್ಗಿದ ಕೆಲ ಪ್ರದೇಶಗಳಿಗೆ ಭೇಟಿ ನೀಡಿದ ತಹಸೀಲ್ದಾರ್‌ ಗಿರೀಶ್‌ ಹಲವು ಎಚ್ಚರಿಕೆಯ ಕ್ರಮತೆಗೆದುಕೊಳ್ಳಲು ಸಂಬಂಧಪಟ್ಟಅಧಿಕಾರಿಗಳಿಗೆ ಸೂಚಿಸಿದ್ದು, ಅಗತ್ಯ ಬಿದ್ದಲ್ಲಿ ಗಂಜೀಕೇಂದ್ರ ತೆರೆಯಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮನೆಯೊಳಗೂ ನೀರು:

ನಗರದ ವೆಂಕಟೇಶ್‌ ನಗರದಲ್ಲಿ ಸುಮಾರು 20 ಮನೆಗಳು ಜಲಾವೃತಗೊಂಡಿದೆ. ಜಗದಾಂಬಾ ಬಡಾವಣೆಗಳಲ್ಲಿ 4 ಮನೆ, ಟ್ಯಾಂಕ್‌ ಮಹೊಲ್ಲಾದಲ್ಲಿ 12 ಮನೆಗಳಿಗೆ ನೀರು ನುಗ್ಗಿದೆ. ಕೆಲ ಚರಂಡಿಗಳು ಬ್ಲಾಕ್‌ ಆಗಿರುವುದರಿಂದ ರಸ್ತೆಯ ಮೇಲೆ ನೀರು ಹರಿದು ಮನೆಗಳಿಗೆ ನುಗ್ಗುತ್ತಿವೆ. ಕೂಡ್ಲಿಯಲ್ಲಿ ನಾಟಿ ಮಾಡಲಾದ ಗದ್ದೆಯಲ್ಲಿ 5 ಅಡಿ ನೀರು ನಿಂತು ಸಂಪೂರ್ಣ ಜಲಾವೃತಗೊಂಡಿದೆ.

ಶಿವಮೊಗ್ಗದ ಪ್ರತಿ ಹೋಬಳಿಗಳಲ್ಲೂ ಗಂಜೀಕೇಂದ್ರ ತೆರೆಯಲಾಗುತ್ತಿದೆ. ಜನರಿಗೆ ಅವಶ್ಯಕವಾಗಿರುವ ಊಟ ವಸತಿ ಮತ್ತು ಬಟ್ಟೆಗಳನ್ನೂ ನೀಡಲು ಸೂಚಿಸಿದ್ದಾರೆ.

ತುಂಬಿ ಹರಿಯುತ್ತಿದ್ದಾಳೆ ತುಂಗೆ, ಪ್ರವಾಹ ಭೀತಿಯಲ್ಲಿ ಜನ

ಮಳೆಯಿಂದ ತೊಂದರೆಗೊಳಗಾದವರು ಈ ಕೂಡಲೇ ಸಹಾಯವಾಣಿಗೆ ಸಂಪರ್ಕಿಸಬಹುದಾಗಿದೆ. ಜಿಲ್ಲಾಧಿಕಾರಿಗಳ ಕಚೇರಿ ಸಂಖ್ಯೆ 08182261413, ಅಥವಾ 100, ಶಿವಮೊಗ್ಗ ತಹಸೀಲ್ದಾರ್‌ ಕಚೇರಿ ಸಂಖ್ಯೆ 081882-279312, ಭದ್ರಾವತಿ ತಹಸೀಲ್ದಾರ್‌ ಕಚೇರಿ 08282-267283, ತೀರ್ಥಹಳ್ಳಿ ತಹಸೀಲ್ದಾರ್‌ ಕಚೇರಿ 08181 228239, ಸೊರಬ ತಹಸೀಲ್ದಾರ್‌ ಕಚೇರಿ 08184-272241, ಹೊಸನಗರ ತಹಸೀಲ್ದಾರ್‌ ಕಚೇರಿ 08185-221235, ಶಿಕಾರಿಪುರ ತಹಸೀಲ್ದಾರ್‌ ಕಚೇರಿ 08187-222239 ಹಾಗೂ ಸಾಗರ ತಹಸೀಲ್ದಾರ್‌ ಕಚೇರಿ 08183-226074 ಇಲ್ಲಿ ಸಂಪರ್ಕಿಸಬಹುದಾಗಿದೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ