ತುಂಬಿ ಹರಿಯುತ್ತಿದ್ದಾಳೆ ತುಂಗೆ, ಪ್ರವಾಹ ಭೀತಿಯಲ್ಲಿ ಜನ
ಮಂಗಳವಾರ ಬೆಳಗ್ಗೆ ಸುರಿದ ಆಶ್ಲೇಷಾ ಮಳೆಗೆ ತುಂಗೆ ಪ್ರವಾಹದ ಮಟ್ಟವಾದ ರಾಮ ಮಂಟಪ ಮುಳುಗಲು ಕೇವಲ 1 ಅಡಿ ಬಾಕಿ ಇದೆ. ಮಂಗಳವಾರ ಸಂಜೆ 5ರ ಹೊತ್ತಿಗೆ ಸುಮಾರು 84 ಅಡಿಗಳಿಗೂ ಮಿಕ್ಕಿ ಹರಿಯುತ್ತಿದೆ. ತೀರ್ಥಹಳ್ಳಿಯಲ್ಲಿಎಡೆಬಿಡದೆ ಸುರಿದ ಆಶ್ಲೇಷಾ ಮಳೆಯಿಂದ ತುಂಗೆ ತುಂಬಿ ಹರಿಯುತ್ತಿದ್ದು, ಪ್ರವಾಹದ ಭೀತಿಉಂಟುಮಾಡಿದೆ.
ಶಿವಮೊಗ್ಗ(ಆ.07): ತೀರ್ಥಹಳ್ಳಿಯಲ್ಲಿಎಡೆಬಿಡದೆ ಸುರಿದ ಆಶ್ಲೇಷಾ ಮಳೆಯಿಂದ ತುಂಗೆ ತುಂಬಿ ಹರಿಯುತ್ತಿದ್ದು, ಪ್ರವಾಹದ ಭೀತಿಉಂಟುಮಾಡಿದೆ.
ಮಂಗಳವಾರ ಬೆಳಗ್ಗೆ ಸುರಿದ ಆಶ್ಲೇಷಾ ಮಳೆಗೆ ತುಂಗೆ ಪ್ರವಾಹದ ಮಟ್ಟವಾದ ರಾಮ ಮಂಟಪ ಮುಳುಗಲು ಕೇವಲ 1 ಅಡಿ ಬಾಕಿ ಇದೆ. ಮಂಗಳವಾರ ಸಂಜೆ 5ರ ಹೊತ್ತಿಗೆ ಸುಮಾರು 84 ಅಡಿಗಳಿಗೂ ಮಿಕ್ಕಿ ಹರಿಯುತ್ತಿದೆ.
ತುಂಗಾ ಸೇತುವೆಯ ಪಕ್ಕದಲ್ಲಿ ಬಿಡಾರ ಕಟಿಕೊಂಡು ವಾಸಿಸುತ್ತಿದ್ದ 10ಕ್ಕೂ ಹೆಚ್ಚು ಕುಟುಂಬಗಳನ್ನು ಮುನ್ನೆಚ್ಚರಿಕೆಯ ದೃಷ್ಟಿಯಿಂದ ಸ್ಥಳಾಂತರಿಸಲಾಗುವುದು ಎಂದು ಕಂದಾಯ ಇಲಾಖೆಯ ಮೂಲಗಳು ತಿಳಿಸಿವೆ. ಕುಟುಂಬಸ್ಥರಿಗೆ ಗಂಜಿ ಕೇಂದ್ರ ತೆರೆಯಲಾಗಿದೆ.
ಆಗಸ್ಟ್‌ನಲ್ಲಿ ಅತಿ ಹೆಚ್ಚು ಮಳೆ:
ಕಳೆದ ವರ್ಷದ ಮಳೆಗಾಲಕ್ಕಿಂತ ಈ ಬಾರಿ ಆಗಸ್ಟ್ ತಿಂಗಳ ಮೊದಲವಾರದಲ್ಲಿ ಅತಿ ಹೆಚ್ಚು ಮಳೆ ದಾಖಲಾಗಿದೆ. ಮಂಗಳವಾರ ಬೆಳಗ್ಗೆ ಆಗುಂಬೆ 321 ಮಿ.ಮೀ, ತೀರ್ಥಹಳ್ಳಿ 148.6 ಮಿ.ಮೀ ಮಳೆ ದಾಖಲಾಗಿದೆ. ತಾಲೂಕಿನ ಕೆಲವು ಕಡೆ ಮಳೆ, ಗಾಳಿಯಿಂದ ಪ್ರಕೃತಿ ವಿಕೋಪಕ್ಕೆ ಸಣ್ಣ ಸೇತುವೆಗಳು ಜಖಂ ಆಗಿವೆ.
30ವರ್ಷ ಬಳಿಕ ಮುಳುಗಿದ ಸೇತುವೆ ಮೇಲೆ ಹರಿಯುತ್ತಿದೆ 5 ಅಡಿ ನೀರು..!
ದಿನವಿಡೀ ಕಂದಾಯ ಇಲಾಖೆ ಹಾಗೂ ಆರಕ್ಷಕ ಇಲಾಖೆ ಎಚ್ಚರಿಕೆಯಿಂದ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದು, ನದಿ ದಂಡೆಯ ಅಕ್ಕಪಕ್ಕದ ಗ್ರಾಮಸ್ಥರಿಗೆ ಹೊಳೆಗೆ ಇಳಿಯದಂತೆ ಎಚ್ಚರಿಸುತ್ತಿದ್ದಾರೆ.
ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ