ಶಿವಮೊಗ್ಗ (ಜ.18):  ಶಿವಮೊಗ್ಗ - ರಾಣೆಬೆನ್ನೂರು ರೈಲ್ವೆ ಮಾರ್ಗಕ್ಕೆ ರಾಜ್ಯ ಸರ್ಕಾರ ಭೂಮಿ ನೀಡಿದ್ದು ಶೀಘ್ರವಾಗಿ ಕಾಮಗಾರಿ ನಡೆಯಲಿದೆ  ಎಂದು ಸಂಸದ ಬಿ ವೈ ರಾಘವೇಂದ್ರ ಹೇಳಿದ್ದಾರೆ. 

ಭದ್ರಾವತಿ ಯಲ್ಲಿ RAF ಘಟಕ ಆರಂಭದಿಂದ ಅಲ್ಲಿ ಟೌನ್ ಶಿಫ್ ನಿರ್ಮಾಣ ಆಗಲಿದೆ ಎಂದು ಶಿವಮೊಗ್ಗದಲ್ಲಿಂದು  ಸಂಸದ ರಾಘವೇಂದ್ರ ಹೇಳಿದರು. 

ಬೆಂಗ್ಳೂರು ಸಬರ್ಬನ್‌ ರೈಲು ಯೋಜನೆ: ಮಾರ್ಗ ನಿರ್ಮಾಣ ಅಂತಿಮ .

ಅಲ್ಲದೇ ಶಿವಮೊಗ್ಗದ ಕೋಟೆಗಂಗೂರಿನಲ್ಲಿ ರೈಲ್ವೆ ಕೋಚಿಂಗ್ ಕೇಂದ್ರ ತೆರೆಯಲಾಗುತ್ತದೆ. ಅಲ್ಲದೇ ಕುವೆಂಪು ವಿಶ್ವವಿದ್ಯಾಲಯದಲ್ಲಿ ಡಿಆರ್ ಡಿಒ ಕೇಂದ್ರ ಆರಂಭವಾಗಲಿದೆ ಎಂದು ರಾಘವೇಂದ್ರ ಮಾಹಿತಿ ನೀಡಿದರು. 

ಈ ಹಿನ್ನೆಲೆಯಲ್ಲಿ ಮತ್ತೊಂದು ಕೇಂದ್ರೀಯ ವಿದ್ಯಾಲಯ ಆರಂಭಿಸಲಾಗುತ್ತಿದ್ದು ತ್ಯಾವರೆ ಚಟ್ನಳ್ಳಿಯಲ್ಲಿ  ಐದು ಏಕರೆ ಜಾಗ ಗುರುತಿಸಲಾಗಿದೆ ಎಂದೂ ಸಂಸದರು ಮಾಹಿತಿ ನೀಡಿದರು.