Asianet Suvarna News Asianet Suvarna News

ಮಾರಿಕಾಂಬಾ ಜಾತ್ರೆ: ಒಂದು ಕೋಮಿಗೆ ಮಳಿಗೆ ನೀಡದಂತೆ ನಿರ್ಧಾರ

ಹಿಜಾಬ್ ಬಳಿಕ ಇನ್ನೊಂದು ವಿವಾದಕ್ಕೆ ಶಿವಮೊಗ್ಗವೂ ಸಾಕ್ಷಿಯಾಗುವ ಲಕ್ಷಣ ಕಾಣಿಸುತ್ತಿದ್ದು, ಸೌಹಾರ್ದತೆಯ ಪ್ರತೀಕಕಾಗಿದ್ದ ಊರ ಹಬ್ಬ ಮಾರಿಜಾತ್ರೆಯಲ್ಲಿ ಈ ವಿವಾದದ ಕರಿನೆರಳು ಬೀಳುವ ಲಕ್ಷಣ ಕಾಣುತ್ತಿದೆ.

Shivamogga Marikamba Temple Pooja Programme Not Allowed for Muslim Vendors gvd
Author
Bangalore, First Published Mar 20, 2022, 1:34 PM IST

ಶಿವಮೊಗ್ಗ (ಮಾ.20): ಹಿಜಾಬ್ (Hijab) ಬಳಿಕ ಇನ್ನೊಂದು ವಿವಾದಕ್ಕೆ ಶಿವಮೊಗ್ಗವೂ ಸಾಕ್ಷಿಯಾಗುವ ಲಕ್ಷಣ ಕಾಣಿಸುತ್ತಿದ್ದು, ಸೌಹಾರ್ದತೆಯ ಪ್ರತೀಕಕಾಗಿದ್ದ ಊರ ಹಬ್ಬ ಮಾರಿಜಾತ್ರೆಯಲ್ಲಿ ಈ ವಿವಾದದ ಕರಿನೆರಳು ಬೀಳುವ ಲಕ್ಷಣ ಕಾಣುತ್ತಿದೆ. ದಕ್ಷಿಣ ಕನ್ನಡದ ಕೆಲವು ಕಡೆ ಹಿಂದೂ ಜಾತ್ರಾ ಸಂದರ್ಭದಲ್ಲಿ ಮುಸ್ಲಿಂ (Muslim) ಪಂಗಡದ ವ್ಯಾಪಾರಸ್ಥರಿಗೆ (Vendors) ಅವಕಾಶ ಮಾಡಿಕೊಡದೆ ಇರುವ ಕುರಿತ ವಿವಾದ (Controversy) ಸೃಷ್ಟಿಯಾಗುತ್ತಲೇ ಇತ್ತ ಶಿವಮೊಗ್ಗದಲ್ಲಿಯೂ ಹಿಂದೂಪರ ಸಂಘಟನೆಗಳು ಇದೇ ರೀತಿಯ ನಿಲುವಿಗೆ ಬರುವಂತೆ ಒತ್ತಡ ಹೇರಲಾರಂಭಿಸಿದೆ.

ಊರ ಹಬ್ಬವಾದ ಶ್ರೀ ಮಾರಿಕಾಂಬಾ ಜಾತ್ರೆಯು (Sri Marikamba Festival) ಮಾ. 22 ರಿಂದ ಆರಂಭಗೊಳ್ಳಲಿದ್ದು, ಮೂರು ದಿನಗಳ ಕಾಲ ನಡೆಯುವ ಈ ಹಬ್ಬದಲ್ಲಿ ನೂರಾರು ಅಂಗಡಿ ಮುಂಗಟ್ಟುಗಳು ಜಾತ್ರೆಯ ಆಕರ್ಷಣೆಯನ್ನು ಸಹಜವಾಗಿಯೇ ಹೆಚ್ಚಿಸುತ್ತದೆ. ಈ ಅಂಗಡಿ ಮುಂಗಟ್ಟುಗಳಲ್ಲಿ ಯಾರು ವ್ಯಾಪಾರ ಮಾಡುತ್ತಾರೆ ಎಂದು ಇದುವರೆಗೆ ಯಾರೂ ಗಮನಿಸಿರಲೂ ಇಲ್ಲ. ಅಮ್ಮನವರ ದರ್ಶನಕ್ಕೆ ಕೂಡ ಹಿಂದೂಗಳಂತೆ ಸಾಕಷ್ಟು ಸಂಖ್ಯೆಯಲ್ಲಿ ಮುಸ್ಲಿಂರು ಮತ್ತು ಕ್ರೈಸ್ತರು ಕೂಡ ಆಗಮಿಸಿ ಹರಕ್ಕೆ ಸಲ್ಲಿಸುವುದನ್ನು ಇಲ್ಲಿ ನೋಡಬಹುದು. 

ಆದರೆ ಈ ಬಾರಿ ಜಾತ್ರೆಯಲ್ಲಿನ ಅಂಗಡಿಗಳನ್ನು ಕೇವಲ ಹಿಂದೂಗಳು ಮಾತ್ರ ನಡೆಸಬೇಕು, ಮುಸ್ಲಿಂರಿಗೆ ನೀಡಬಾರದು ಎಂಬುದು ಹಿಂದೂಪರ ಸಂಘಟನೆಗಳ ಆಗ್ರಹವಾಗಿದೆ. ಜಾತ್ರೆಯಲ್ಲಿ ಎಲ್ಲ ವ್ಯವಸ್ಥೆಗೂ ಪ್ರತ್ಯೇಕ ಸಮಿತಿ ರಚಿಸಿದ್ದು, ಸಿದ್ಧತೆಗಳು ಬಹುತೇಕ ಪೂರ್ಣಗೊಳ್ಳುತ್ತಿವೆ. ಪ್ರತಿ ಬಾರಿಯೂ ಮಳಿಗೆಗಳನ್ನು ಹಾಕುವುದು ಮತ್ತು ಅದನ್ನು ಹಂಚುವ ಕುರಿತ ಗುತ್ತಿಗೆಯನ್ನು ಹರಾಜು ಹಾಕಲಾಗುತ್ತದೆ. ಈ ಬಾರಿ ಇದನ್ನು ಚಿನ್ನಯ್ಯ ಎಂಬುವವರು ಪಡೆದಿದ್ದರು. ಈ ಹಂತದಲ್ಲಿ  ಬಿಜೆಪಿ, ಬಜರಂಗ ದಳ ಸೇರಿದಂತೆ ಹಿಂದೂಪರ  ಮುಖಂಡರು ಮುಸ್ಲಿಮರಿಗೆ ಜಾತ್ರೆಯಲ್ಲಿ ಮಳಿಗೆ ಹಾಕಲು ಅವಕಾಶ ನೀಡದಂತೆ ಒತ್ತಾಯಿಸಿದ್ದಾರೆ. 

World Sparrow Day: ಕಣ್ಮರೆಯಾಗುತ್ತಿರುವ ಗುಬ್ಬಚ್ಚಿಗಳಿಗೆ ಆಶ್ರಯ ನೀಡಿದ ಶಿವಪ್ರಸಾದ್ ಫ್ಯಾಮಿಲಿ

ಏಕಾಏಕಿ ಇಂತಹ ಬೆಳವಣಿಗೆಯಿಂದ ಕಂಗಾಲಾದ ಗುತ್ತಿಗೆದಾರರು ತಮ್ಮ ಜವಾಬ್ದಾರಿಯಿಂದ ಹಿಂದೆ ಸರಿದಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ  ಮಾರಿಕಾಂಬಾ ದೇವಸ್ಥಾನ ಸಮಿತಿಯ ಅಧ್ಯಕ್ಷ ಎಸ್.ಕೆ.ಮರಿಯಪ್ಪ ತುರ್ತು ಸಭೆ ನಡೆಸಿದರು. ಭಜರಂಗ ದಳದ ಜಿಲ್ಲಾ ಸಂಚಾಲಕ ದೀನ ದಯಾಳ್, ಪ್ರಸಾದ್, ಅರ್ಚಕ ರಾಜು, ಬಿಜೆಪಿ ಮುಖಂಡ ಎಸ್.ಎನ್.ಚನ್ನಬಸಪ್ಪ ಅವರ ಜೊತೆ ಚರ್ಚಿಸಿದರು. ಈ ಸಮಯದಲ್ಲಿ ಹಿಂದೂಪರ ಸಂಘಟನೆಯ ಮುಖಂಡರು ಮುಸ್ಲಿ0ಮರಿಗೆ ಮಳಿಗೆ ಕೊಡಬಾರದು ಎಂದು ಪಟ್ಟು ಹಿಡಿದರು. 

ಜಾತ್ರೆಗೆ ಅಗತ್ಯವಾದ ಹಣ ಸಂಗ್ರಹಿಸಿ ಕೊಡುವ ಭರವಸೆಯನ್ನು ನೀಡಿದರಲ್ಲದೆ, ಮಳಿಗೆಯ ಟೆಂಡರ್ ಹಣವಾದ 9 ಲಕ್ಷವನ್ನು ತಾವೇ ಭರಿಸಿ, ಗುತ್ತಿಗೆಯನ್ನು ತಾವೇ ಹಿಡಿಯುವುದಾಗಿ ಪ್ರಕಟಿಸಿದರು. ಟೆಂಡರ್ ಹಣ ಬಂದರೆ ಸರಿ. ಆದರೆ ದೇವಸ್ಥಾನ ಸಮಿತಿಯು ಈ ರೀತಿಯ ತಾರತಮ್ಯಕ್ಕೆ ಒಪ್ಪುವುದಿಲ್ಲ. ದೇವಸ್ಥಾನಕ್ಕೆ ಮತ್ತು ದರ್ಶನಕ್ಕೆ ಎಲ್ಲ ಧರ್ಮಿಯರಿಗೂ ಅವಕಾಶ  ಮಾಡಿಕೊಡುವುದಾಗಿ ಆಡಳಿತ ಮಂಡಳಿಯವರು ಪ್ರಕಟಿಸಿದರು. ಒಟ್ಟಾರೆ ಇದೀಗ ಶಿವಮೊಗ್ಗದ ಮಾರಿಜಾತ್ರೆಯಲ್ಲಿಯೂ ಕೋಮು ದ್ವೇಷದ ಛಾಯೆ ದಟ್ಟವಾಗಿ ಆವರಿಸತೊಡಗಿದೆ.

ಸಿಡಿ ಕೇಸ್ ಕ್ಲಿಯರ್ ಆಗಿದೆ, ರಮೇಶ್​​ಗೆ ಮತ್ತೆ ಸಚಿವ ಸ್ಥಾನ ಸಿಗಲಿ: ಬಾಲಚಂದ್ರ ಜಾರಕಿಹೊಳಿ

ಕೋಟೆ ಶ್ರೀ ಮಾರಿಕಾಂಬಾ ಸಮಿತಿಯು ಎಲ್ಲ ಧರ್ಮಿಯರಿಗೂ ಸಮಾನ ಅವಕಾಶವನ್ನು ಕೊಡುತ್ತದೆ. ಲಾಗಾಯ್ತಿನಿಂದಲೂ ಇಲ್ಲಿ ಎಲ್ಲ ಕೋಮಿನವರೂ ಬಂದು ದರ್ಶನ ಪಡೆದು ಹರಕೆ ಒಪ್ಪಿಸುತ್ತಾರೆ. ಈ ಬಾರಿ ಮಳಿಗೆ ಟೆಂಡರ್ ಪಡೆದವರು ಹಿಂದೂಗಳಿಗೆ ಮಾತ್ರ ಹಂಚುತ್ತಾರೆ ಎಂದು ತಿಳಿದು ಬಂದಿದೆ. ಆದರೆ ಅವರು ಪೂರ್ಣ ಹಣ ಪಾವತಿಸಿದ್ದು, ಸಂಪ್ರದಾಯದಂತೆ ಅದು ಅವರ ವಿವೇಚನೆ. ಆದರೆ ಈ ರೀತಿ ಒಂದು ಕೋಮನ್ನು ದೂರ ಇಡುವ ನಿರ್ಧಾರದ ಕುರಿತು ಮಾರಿಕಾಂಬಾ ಸಮಿತಿ ಇನ್ನೊಮ್ಮೆ ಸಭೆ ಸೇರಿ ಚರ್ಚಿಸಲಿದೆ. ಸಚಿವರೂ, ಈ ಭಾಗದ ಶಾಸಕರೂ ಆಗಿರುವ ಈಶ್ವರಪ್ಪನವರ ಗಮನಕ್ಕೆ ತರಲಾಗುವುದು.
-ಎನ್. ಮಂಜುನಾಥ್, ಕಾರ್ಯದರ್ಶಿ, ಕೋಟೆ ಶ್ರೀ ಮಾರಿಕಾಂಬಾ ಸಮಿತಿ

Follow Us:
Download App:
  • android
  • ios