ಶಿವಮೊಗ್ಗ ದಸರಾದಲ್ಲಿ ವಿಘ್ನ ಎದುರಾಗಿದೆ. ಅದ್ಧೂರಿಯಾಗಿ ನಡೆಯಬೇಕಿದ್ದ ದಸರಾದ ವಿಘ್ನ ಅಪಶಕುನ ನುಡಿದಿದೆ. ಆನೆ ದಿಕ್ಕಾಪಾಲಾಗಿ ಓಡಿ ಅಂಬಾರಿ ಕಳತಿ ಬಿದ್ದಿದೆ. ಪರಿಣಾಮ ದೇವಿ ಚಾಮಂಡೇಶ್ವರಿ ಕೈ ಮುರಿದು ಹಾನಿಯಾಗಿದೆ.
ಶಿವಮೊಗ್ಗ (ಅ.21) ಶಿವಮೊಗ್ಗ ದಸರಾದಲ್ಲಿ ಅಂಬಾರಿ ಕಳಚಿ ಬಿದ್ದು ದೇವಿ ಚಾಮುಂಡೇಶ್ವರಿ ದೇವಿ ಕೈ ಮುರಿದ ಘಟನೆ ನಡೆದಿದೆ. ಇದು ಶಿವಮೊಗ್ಗ ಸೇರಿದಂತೆ ನಾಡಿನ ಜನತೆಯಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಸಾಲು ಸಾಲು ವಿಘ್ನಗಳು ಅಪಶಕುನ ನುಡಿದಿದೆ ಅನ್ನೋ ಮಾತಗಳು ಕೇಳಿಬರುತ್ತಿದೆ. ಶಿವಮೊಗ್ಗ ದಸರಾದಲ್ಲಿ ಅಂಬಾರಿ ಹೊತ್ತ ಆನೆ ಸೋಮಣ್ಣ ದಿಕ್ಕಾಪಾಲಾಗಿ ಓಡಿದ ಪರಿಣಾಮ ಅಂಬಾರಿ ಕಳಚಿ ಬಿದ್ದಿದೆ. ಅಂಬಾರಿಯಲ್ಲಿ ಮೆರವಣಿಗೆ ಮೂಲಕ ಸಾಗಬೇಕಿದ್ದ ದೇವಿ ಚಾಮಂಡೇಶ್ವರಿ ವಿಗ್ರಹವೂ ಬಿದ್ದಿದೆ. ಕೈ ಮುರಿದು ವಿಗ್ರಹಕ್ಕೆ ಹಾನಿಯಾಗಿದೆ. ಇತ್ತ ಆನೆಯ ಮಾವುತನೂ ಬಿದ್ದು ಗಾಯಗೊಂಡಿದ್ದಾನೆ. ಇದು ಅಪಶಕುನದ ಸಂಕೇತ ಎಂಬ ಮಾತುಗಳು ಕೇಳಿಬರುತ್ತಿದೆ.
ದೊಡ್ಡ ಅಪಶಕುನದ ಮುನ್ಸೂಚನೆ
ಶಿವಮೊಗ್ಗದ ದಸರಾ ಪ್ರತಿ ವರ್ಷದಿಂದ ಈ ವರ್ಷವೂ ಅದ್ದೂರಿಯಾಗಿ ಆರಂಭಗೊಂಡಿತ್ತು. ಕಳೆದ ಆರು ವರ್ಷಗಳಿಂದ ಸಾಗರ್ ಆನೆ ಶಿವಮೊಗ್ಗ ದಸರಾದ ಅಂಬಾರಿ ಜವಾಬ್ದಾರಿ ಹೊತ್ತಿತ್ತು.ಆದರೆ ಈ ಬಾರಿ ಕಾಲು ನೋವಿನ ಪರಿಣಾಮ ಸೋಮಣ್ಣ ಆನೆಗೆ ಜವಾಬ್ದಾರಿ ನೀಡಲಾಗಿತ್ತು. ಆನೆಯ ಅಂಬಾರಿ ಮೆರವಣಿಗೆ ಚಾಲನೆ ಸಿಕ್ಕ ಕೆಲವೇ ಹೊತ್ತಲ್ಲಿ ಅವಘಡ ಸಂಭವಿಸಿದೆ.
ಕಳಚಿ ಬಿತ್ತು ಅಂಬಾರಿ
ಅಂಬಾರಿ ಹೊತ್ತ ಸೋಮಣ್ಣ ಆನೆ ಭಯದಿಂದ ದಿಕ್ಕಾಪಾಲಾಗಿ ಓಡಲು ಆರಂಭಿಸಿದೆ. ಆನೆಯನ್ನು ನಿಯಂತ್ರಿಸಲು ಮಾವುತ ಇನ್ನಿಲ್ಲದ ಪ್ರಯತ್ನ ಮಾಡಿದ್ದಾನೆ. ಆದರೆ ಸಾಧ್ಯವಾಗಿಲ್ಲ. ಆನೆ ಒಂದೇ ಸಮನೇ ಒಡಲು ಆರಂಭಿಸಿದಾಗ ಕಟ್ಟಿದ್ದ ಅಂಬಾನಿ ಕಳಚಿ ಬಿದ್ದಿದೆ.ಅಂಬಾರಿ ಕಳಚಿ ಬೀಳುತ್ತಿದ್ದಂತೆ ಮಾವುತ ಕೂಡ ಆನೆಯಿಂದ ಬಿದ್ದಿದ್ದಾನೆ. ಅಂಬಾರಿಯಲ್ಲಿ ಮೆರವಣಿಗೆ ಮೂಲಕ ಸಾಗಬೇಕಿದ್ದ ದೇವಿ ಚಾಮಂಡೇಶ್ವರಿ ವಿಗ್ರಹವೂ ಕೆಳಕ್ಕೆ ಬಿದ್ದಿದೆ.
ದೇವಿ ವಿಗ್ರಹದ ಕೈಮುರಿತ
ಚಾಮಂಡೇಶ್ವರಿ ದೇವಿ ವಿಗ್ರಹ ಅಂಬಾರಿ ಜೊತೆ ಕಳಕ್ಕೆ ಬಿದ್ದಿದೆ. ಆನೆ ಮೇಲಿಂದ ಬಿದ್ದ ರಭಸಕ್ಕೆ ಚಾಮಂಡೇಶ್ವರಿ ದೇವಿಯ ವಿಗ್ರಹದ ಕೈ ಮುರಿದಿದೆ. ಇತ್ತ ಅಂಬಾರಿ ಬಿದ್ದು ಕೆಲ ವಾಹನಗಳು ಜಖಂಗೊಂಡಿದೆ. ಇತ್ತ ಆನೆ ಹೋದ ರಭಸಕ್ಕೂ ಕೆಲ ವಾಹನ ಜಖಂಗೊಂಡಿದೆ. ದೇವಿ ವಿಗ್ರಹ ಹಾಗೂ ಮುರಿದ ಕೈಗಳನ್ನು ಸ್ಥಳೀಯರು ಹಾಗೂ ಸಿಬ್ಬಂದಿಗಳು ವಶಕ್ಕೆ ಪಡೆದಿದ್ದಾರೆ. ಅಂಬಾರಿ ಕಳಚಿ ಬಿದ್ದಿದ್ದು ಮಾತ್ರವಲ್ಲ, ಚಾಮುಂಡೇಶ್ವರಿ ವಿಗ್ರಹಕ್ಕೆ ಹಾನಿ, ಮಾವುತನಿಗೆ ಗಾಯ ಘಟನೆಗಳು ಅಪಶಕುನ ಹೇಳುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿದೆ.


