ಸಾಹಿತಿ ಭಗವಾನ್ ಗೆ ಷರತ್ತು ಬದ್ದ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಶಿವಮೊಗ್ಗ ಕೋರ್ಟ್
ರಾಮ ಮಂದಿರ ಏಕೆ ಬೇಡ? ಕೃತಿ ವಿವಾದ 5 ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸಾಗರದಿಂದ ವಿವಾದಾತ್ಮಕ ಸಾಹಿತಿ ಭಗವಾನ್ ಗೆ ಷರತ್ತು ಬದ್ದ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಶಿವಮೊಗ್ಗ(ಡಿ.12): ರಾಮ ಮಂದಿರ ಏಕೆ ಬೇಡ? ಕೃತಿ ವಿವಾದ 5 ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸಾಗರದಿಂದ ವಿವಾದಾತ್ಮಕ ಸಾಹಿತಿ ಭಗವಾನ್ ಗೆ ಷರತ್ತು ಬದ್ದ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ವಿವಾದಾತ್ಮಕ ಸಾಹಿತಿ ಮೈಸೂರಿನ ಭಗವಾನ್ ವಿರುದ್ದ ಶಿವಮೊಗ್ಗ ಜಿಲ್ಲೆಯ ಸಾಗರದ ಜೆ ಎಂ ಎಪ್ ಸಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ರಾಮ ಮಂದಿರದ ಬಗ್ಗೆ ವಿವಾದಾತ್ಮಕ ಕೃತಿ ಬರೆದಿದ್ದ ಮೈಸೂರಿನ ಸಾಹಿತಿ ಭಗವಾನ್ ವಿರುದ್ದ ಇಕ್ಕೇರಿಯ ಮಹಾಬಲೇಶ್ವರ ಎಂಬ ಸಂಘ ಪರಿವಾದ ಕಾರ್ಯಕರ್ತ ಸಾಗರ JMFC ನ್ಯಾಯಾಲಯದಲ್ಲಿ ಖಾಸಗಿ ಪ್ರಕರಣ ದಾಖಲಿಸಿದ್ದರು. ಇದನ್ನ ದೀರ್ಘಕಾಲದ ವಿಚಾರಣೆ ನಡೆಸಿ ನ್ಯಾಯಾಲಯ ಭಗವಾನ್ ವಿರುದ್ದ IPC ಸೆಕ್ಷನ್ 295(a) ರಡಿಯಲ್ಲಿ ಧಾರ್ಮಿಕ ಬಾವನೆಗೆ ದಕ್ಕೆ ಸಂಬಂದ ಕ್ರಿಮಿನಲ್ ಪ್ರಕರಣ ದಾಖಲು ಮಾಡಿ ದಿನಾಂಕ 2/11/22 ರಂದು ಖುದ್ದು ನ್ಯಾಯಾಲಯಕ್ಕೆ ಹಾಜರಾಗುವಂತೆ ಮೈಸೂರ್ SP ಮೂಲಕ ಸಮನ್ಸ್ ಜಾರಿಮಾಡಿದ್ದು ಸಮನ್ಸ್ ಖುದ್ದು ಜಾರಿಯಾಗಿದ್ದರೂ ಭಗವಾನ್ ಆ ದಿನ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಇದರಿಂದ JMFC ನ್ಯಾಯಾಲಯ ಜಾಮೀನು ರಹಿತ ಬಂದನ ವಾರೆಂಟ್ ಆದೇಶ ಮಾಡಿದ್ದು ಪೇಟೆ ಪೋಲಿಸ್ ಠಾಣೆ ಸಾಗರ ಜಾರಿ ಮಾಡುವಂತೆ ನ್ಯಾಯಾಲಯ ಆದೇಶ ಮಾಡಿದೆ.
ರಾಮ ಮಂದಿರ ಏಕೆ ಬೇಡ? ಕೃತಿ ವಿವಾದ: ಸಾಹಿತಿ ಭಗವಾನ್‌ಗೆ ಕೋರ್ಟ್‌ನಿಂದ ಸಮನ್ಸ್ ಜಾರಿ
ಈ ಸಂಬಂಧ ಭಗವಾನ್ ನಿರೀಕ್ಷಣಾ ಜಾಮೀನು ಕೋರಿ 5 ನೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸಾಗರದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿ ಭಗವಾನ್ ಗೆ ಷರತ್ತು ಬದ್ದ ಜಾಮೀನು ಮಂಜೂರು ಮಾಡಿದ್ದು 10 ದಿನಗಳ ಒಳಗಾಗಿ ಪೋಲಿಸ್ ಮುಂದೆ ಹಾಜರಾಗುವಂತೆ, ₹100000/ ವೈಯಕ್ತಿಕ ಬಾಂಡ್ ನೀಡುವಂತೆ 5 ನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾದೀಶರಾದ ಶ್ರೀಮತಿ ಪ್ರಭಾವತಿ ಆದೇಶ ಮಾಡಿದ್ದು ಈಗ ಭಗವಾನ್ ಸಾಗರ ನ್ಯಾಯಾಲಯಕ್ಕೆ ಹಾಜರಾಗ ಬೇಕಾಗಿದೆ. ದೂರುದಾರರ ಪರ ಕೆ.ವಿ.ಪ್ರವೀಣ ಕುಮಾರ್ ವಕೀಲರು ವಾದಿಸಿದ್ದರು. ಆರೋಪಿ ಪರ H B ರಾಘವೇಂದ್ರ ಮತ್ತು ರಶೀದ್ ವಾದಿಸಿದ್ದರು.