ರಾಮ ಮಂದಿರ ಏಕೆ ಬೇಡ? ಕೃತಿ ವಿವಾದ: ಸಾಹಿತಿ ಭಗವಾನ್‌ಗೆ ಕೋರ್ಟ್‌ನಿಂದ ಸಮನ್ಸ್ ಜಾರಿ
ಭಗವಾನ್‌ರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಮೈಸೂರು ಎಸ್ಪಿಗೆ ಆದೇಶಿಸಿದ ಸಾಗರ JMFC ನ್ಯಾಯಾಲಯ
ಶಿವಮೊಗ್ಗ(ಆ.30): ವಿವಾದಿತ ಸಾಹಿತಿ ಕೆ.ಎಸ್. ಭಗವಾನ್‌ಗೆ ಸಾಗರ ಜೆಎಂಎಫ್‌ಸಿ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. ಭಗವಾನ್‌ರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಮೈಸೂರು ಎಸ್ಪಿಗೆ ಸಾಗರ JMFC ನ್ಯಾಯಾಲಯ ಆದೇಶಿಸಿದೆ. ಸಾಗರ ಪೇಟೆ ಪೋಲಿಸರು ನೋಟಿಸ್ ಜಾರಿ ಮಾಡದ ಹಿನ್ನೆಲೆಯಲ್ಲಿ ನ್ಯಾಯಾದೀಶರಾದ ಶ್ರೀಶೈಲ ಬೀಮಸೇನ್ ಭಗಾಡೆ ಅವರು ಮಹತ್ವದ ಆದೇಶ ನೀಡಿದ್ದಾರೆ. ಮೈಸೂರು ಎಸ್‌ಪಿ ಖುದ್ದು ಸಮನ್ಸ್ ಜಾರಿ ಮಾಡಿ ನ. 2 ರಂದು ನ್ಯಾಯಾಲಯಕ್ಕೆ ಆರೋಪಿ ಕೆ.ಎಸ್. ಭಗವಾನ್‌ರನ್ನು ಹಾಜರು ಪಡಿಸುವಂತೆ ಆದೇಶ ನೀಡಿದೆ.
ರಾಮ ಮಂದಿರ ಏಕೆ ಬೇಡ? ಕೃತಿ ವಿವಾದ
ರಾಮ ಮಂದಿರದ ಬಗ್ಗೆ ಮೈಸೂರಿನ ಸಾಹಿತಿ ಭಗವಾನ್ ಅವರು ವಿವಾದಾತ್ಮಕ ಕೃತಿ ಬರೆದಿದ್ದರು. ಈ ಸಂಬಂಧ ಭಗವಾನ್ ವಿರುದ್ಧ ಇಕ್ಕೇರಿಯ ಮಹಾಬಲೇಶ್ವರ ಎಂಬುವವರು ನ್ಯಾಯಾಲಯದಲ್ಲಿ ಖಾಸಗಿ ಪ್ರಕರಣ ದಾಖಲಿಸಿದ್ದರು. ಹೀಗಾಗಿ ಶಿವಮೊಗ್ಗ ಜಿಲ್ಲೆಯ ಸಾಗರ JMFC ನ್ಯಾಯಾಲಯದಲ್ಲಿ ವಿವಾದಾತ್ಮಕ ಸಾಹಿತಿ ಭಗವಾನ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು.
ಪ್ರೊ.ಭಗವಾನ್‌ಗೆ ಮಸಿ ಬಳಿದ ವಕೀಲೆಯ ಪತಿ ವಿರುದ್ಧವೂ FIR
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾಯಾಲಯ ಭಗವಾನ್ ವಿರುದ್ಧ IPC ಸೆಕ್ಷನ್ 295(a) ರಡಿಯಲ್ಲಿ ಧಾರ್ಮಿಕ ಭಾವನೆಗೆ ದಕ್ಕೆ ಸಂಬಂಧ ಪ್ರಕರಣ ದಾಖಲಿಸಿತ್ತು. ಆ. 30 ರ ಇಂದು(ಮಂಗಳವಾರ) ಖುದ್ದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿತ್ತು. ಆದರೆ, ಇಂದೂ ಕೂಡ ಸಾಹಿತಿ ಭಗವಾನ್ ಕೋರ್ಟ್‌ಗೆ ಹಾಜರಾಗಿಲ್ಲ. ಹೀಗಾಗಿ ಭಗವಾನ್‌ರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಮೈಸೂರು ಎಸ್ಪಿಗೆ ಸಾಗರ JMFC ನ್ಯಾಯಾಲಯ ಆದೇಶಿಸಿದೆ. ದೂರುದಾರರ ಪರ ವಕೀಲ ಕೆ.ವಿ.ಪ್ರವೀಣ ಕುಮಾರ್ ವಾದಿಸಿದ್ದರು.