ಕೊಡಚಾದ್ರಿಗೆ ತೆರಳುತ್ತಿದ್ದ ಕೇರಳ ಭಕ್ತರ ಜೀಪ್ ಪಲ್ಟಿ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು. ಚಾಲಕನ ಅತಿವೇಗ ಅಪಘಾತಕ್ಕೆ ಕಾರಣ.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೊಡಚಾದ್ರಿ ಬೆಟ್ಟಕ್ಕೆ ತೆರಳುತ್ತಿದ್ದ ಜೀಪ್ ಒಂದು ಇಂದು ಬೆಳಿಗ್ಗೆ ಪಲ್ಟಿಯಾದ ಘಟನೆ ನಡೆದಿದೆ. ಕೊಲ್ಲೂರಿನಿಂದ ಕೊಡಚಾದ್ರಿಯ ಕಡೆಗೆ ಪ್ರಯಾಣಿಸುತ್ತಿದ್ದ ಕೇರಳ ಮೂಲದ ಎಂಟು ಮಂದಿ ಭಕ್ತರನ್ನು ಹೊತ್ತ ಜೀಪ್, ಚಾಲಕನ ಅತಿ ವೇಗದ ಹಿನ್ನೆಲೆಯಲ್ಲಿ ನಿಯಂತ್ರಣ ತಪ್ಪಿ ಪಲ್ಟಿಯಾದ ಜೀಪ್ ನಿಟ್ಟೂರು–ಕಟ್ಟಿನಹೊಳೆ ಮಾರ್ಗದ ಕುಂಬಳೆ ಗ್ರಾಮದ ಬಳಿ ಅವಘಡಕ್ಕೀಡಾಯಿತು. ಅಪಘಾತದಲ್ಲಿ ಭಕ್ತರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಯಾರಿಗೂ ಗಂಭೀರ ಗಾಯಗಳಾಗಿಲ್ಲ. ಜೀಪ್ ಭಾಗಶಃ ಜಖಂಗೊಂಡಿದ್ದು, ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಕೊಡಚಾದ್ರಿ ಇತಿಹಾಸ
ಕೊಡಚಾದ್ರಿ ಬೆಟ್ಟವು ದಕ್ಷಿಣ ಭಾರತದ ಪಶ್ಚಿಮ ಘಟ್ಟದ ಶಿವಮೊಗ್ಗ ಜಿಲ್ಲೆಯಲ್ಲಿರುವ ಒಂದು ಸುಂದರವಾದ ಪರ್ವತ ಶಿಖರ. ಸಮುದ್ರ ಮಟ್ಟದಿಂದ 1343 ಮೀಟರ್ ಎತ್ತರದಲ್ಲಿದೆ. ಕೊಡಚಾದ್ರಿ ತನ್ನ ದಟ್ಟವಾದ ಅರಣ್ಯ, ಅದ್ಭುತ ಸೂರ್ಯೋದಯ ಮತ್ತು ಸೂರ್ಯಾಸ್ತಗಳಿಗೆ ಹೆಸರುವಾಸಿಯಾಗಿದೆ. ಕೊಡಚಾದ್ರಿ ಚಾರಣಿಗರಿಗೆ ಒಂದು ಉತ್ತಮ ಸ್ಥಳವಾಗಿದೆ. ಜೊತೆಗೆ ಕೊಲ್ಲೂರು ಮೂಕಾಂಬಿಕೆ ನೆಲೆಸಿರುವ ಪುಣ್ಯ ಕ್ಷೇತ್ರ ಮತ್ತು ಸರ್ವಜ್ಞ ಪೀಠವೂ ಇದೆ. ಕೊಡಚಾದ್ರಿ ಬೆಟ್ಟವು ಪ್ರಕೃತಿ ಆಸಕ್ತರಿಗೆ ಸ್ವರ್ಗ. ಕೊಡಚಾದ್ರಿ ಬೆಟ್ಟದ ಮೇಲೂ ಸಾಕಷ್ಟು ದೇವಾಲಯಗಳಿವೆ. ಶ್ರೀಶಂಕರಾಚಾರ್ಯರು ಮೂಕಾಂಬಿಕೆಯ ಧ್ಯಾನ ಮಾಡಿದ್ದರು ಎನ್ನಲಾಗುವ ಸರ್ವಜ್ಞ ಪೀಠ, ಚಿತ್ರಮೂಲ ಸ್ಥಳ, ಚಿಕ್ಕಪುಟ್ಟ ದೇವಾಲಯಗಳು ಮಾತ್ರವಲ್ಲ, ಗುಹೆಗಳು ಕೂಡ ಇವೆ.
