ಶಿವಮೊಗ್ಗ(ಆ.10): ಗುರುವಾರ ಬೆಳಗ್ಗೆ ಸುರಿದ ಮಳೆಯಿಂದ ಆನಂದಪುರ ಸುತ್ತಮುತ್ತ ಭಾರಿ ಅನಾಹುತ ಸಂಭವಿಸಿದೆ. ಧಾರಕಾರ ಮಳೆಯಿಂದಾಗಿ ಶಿಕಾರಿಪುರ-ಆನಂದಪುರ ಹೆದ್ದಾರಿಯಲ್ಲಿ 3 ಅಡಿಗೂ ಹೆಚ್ಚು ನೀರು ರಸ್ತೆ ಮೇಲೆ ನಿಂತಿದ್ದು ಜನರು ಹಾಗೂ ವಾಹನ ಸವಾರರು ಹರಸಾಹಸ ಪಡುವಂತಾಗಿದೆ.

ರಸ್ತೆ ಬದಿಯಲ್ಲಿನ ಕೆಂಚಪ್ಪ ಹಾಗೂ ಆಟೋ ಕೆಂಚಪ್ಪ ಎಂಬುವರ ಮನೆಗಳಿಗೆ ನೀರು ನುಗ್ಗಿದೆ. ಹೆದ್ದಾರಿಯಲ್ಲಿ 200 ಮೀಟರ್‌ ಉದ್ದ ನೀರು ನಿಂತಿದ್ದು ಸುಮಾರು 2-3 ತಾಸು ವಾಹನಗಳ ಸಂಚಾರ ಸಂಪೂರ್ಣ ಬಂದ್‌ ಆಗಿತ್ತು. ನಂತರ ಗ್ರಾಮಾಡಳಿತ, ಕಂದಾಯ ಇಲಾಖೆ ಮತ್ತು ಪೋಲೀಸರು ಸ್ಥಳಕ್ಕೆ ಆಗಮಿಸಿದ್ದು, ನೀರು ಹೋರ ಹಾಕುವುದಕ್ಕೆ ಹರ ಸಾಹಸ ಮಾಡುತ್ತಿದ್ದಾರೆ. ಸಂಜೆಯಾದರೂ ನೀರಿನ ಪ್ರಮಾಣ ಕಡಿಮೆಯಾಗಿರಲಿಲ್ಲ.

ಕರುನಾಡ ನೆರೆ ಸಂತ್ರಸ್ತರ ನೋಡಿ ಮಿಡಿದ ಅಣ್ಣಾಮಲೈ

ಹೊಸಕೊಪ್ಪದ ಅಲೆಮನೆ ಕೆರೆ ಒಡೆದು ನೂರಾರು ಎಕರೆ ಭತ್ತದ ಬೇಳೆ ನಾಶವಾಗಿದೆ. ಗುಂಡಿ ಬೈಲು ಬತ್ತದ ಗದ್ದೆಗೆ ಅಂಬ್ಲೀಗೋಳ ಡ್ಯಾಂ ಹಿನ್ನೀರು ಪ್ರದೇಶವಾಗಿದ್ದರಿಂದ ಗೌತಮಪುರ, ಕಣ್ಣೂರು, ಮದ್ಯಕಣ್ಣೂರು, ನರಸಿಪುರ, ತಳಗೆರಿ ಭಾಗದಿಂದ ಆನಂದಪುರ-ಮಲಂದೂರು, ಮುರುಘಾಮಠ, ದಾಸಕೊಪ್ಪ, ಯಡೇಹಳ್ಳಿ. ಆಚಾಪುರ ಈ ಭಾಗದ 2-3 ಸಾವಿರ ಎಕರೆ ಬತ್ತದ ಗದ್ದೆಯಲ್ಲಿ ಹೀನ್ನಿರು ನಿಂತಿದೆ.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸಮೀಪದ ಬಳ್ಳಿ ಬೈಲುನಲ್ಲಿ ನಂದಿ ಹೊಳೆಯ ನೀರು 25ಕ್ಕೂ ಹೆಚ್ಚು ಎಕರೆ ಪ್ರದೇಶಕ್ಕೆ ನುಗ್ಗಿದ್ದು ಶುಂಠಿಬೆಳೆ ಸಂಪೂರ್ಣ ಕೂಚ್ಚಿ ಹೋಗಿದೆ. ಹಾಗೆ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಗೀಳಾಲಗುಂಡಿ ಕ್ರಾಸ್‌ನಲ್ಲಿ ಇಲ್ಲಿಯ ಅಮ್ಮನಕೆರೆ ತುಂಬಿ ಬಾರಿ ಪ್ರಮಾಣದಲ್ಲಿ ಹೆದ್ದಾರಿಯಲ್ಲಿ ನೀರು ಹರಿಯುತ್ತಿದೆ. ಆಚಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಕ್ಕವಳ್ಳಿಯಲ್ಲಿನ ಭತ್ತದ ಗದ್ದೆ ಮತ್ತು ಶುಂಠಿ ಬೆಳಯ ಮೇಲೆ ಸಂಪೂರ್ಣ ನೀರು ನಿಂತು ಕೊಳೆಯುವ ಸ್ಥತಿ ನಿಮಾರ್ಣವಾಗಿದೆ. ಎಲ್ಲಿ ನೋಡಿದರು ನೀರು ಕಾಣುವಂತಾಗಿತ್ತು.