ರಾಯಣ್ಣನ ಪ್ರತಿಮೆ ಇರುವ ಸ್ಥಳಕ್ಕೆ ಶಿವಾಜಿ ಚೌಕ ಎಂದು ಹೆಸರು ಇಡಲಾಗಿದೆ. ಈ ಮೂಲಕ ಸಾಮರಸ್ಯದ ಸಂದೇಶ ಸಾರಲಾಯಿತು.

ಬೆಳಗಾವಿ (ಸೆ.04): ತೀವ್ರ ವಿವಾದಕ್ಕೊಳಗಾಗಿ ರಾಜ್ಯದ ಗಮನ ಸೆಳೆದಿದ್ದ ಬೆಳಗಾವಿ ತಾಲೂಕಿನ ಪೀರನವಾಡಿ ಗ್ರಾಮದಲ್ಲಿ ಪ್ರತಿಷ್ಠಾಪಿಸಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಇರುವ ವೃತ್ತಕ್ಕೆ ಸಂಧಾನ ಸೂತ್ರದಂತೆ ‘ಶ್ರೀ ಛತ್ರಪತಿ ಶಿವಾಜಿ ಮಹಾರಾಜ ಚೌಕ’ ಎಂದು ನಾಮಫಲಕ ಅನಾವರಣಗೊಳಿಸುವ ಮೂಲಕ ಈ ವೃತ್ತಕ್ಕೆ ಅಧಿಕೃತವಾಗಿ ನಾಮಕರಣ ಮಾಡಲಾಯಿತು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕನ್ನಡ ಮತ್ತು ಮರಾಠಿ ಎರಡೂ ಭಾಷೆಯಲ್ಲಿ ನಾಮಫಲಕದ ಮೇಲೆ ಬರೆಸುವ ಮೂಲಕ ಸಾಮರಸ್ಯದ ಸಂದೇಶನ್ನೂ ಸಾರಲಾಯಿತು.

ರಾಯಣ್ಣ, ಚನ್ನಮ್ಮ, ಕನಕರ ಭಾವಚಿತ್ರಕ್ಕೆ ರಾಡಿ ಎರಚಿ ಅವಮಾನ : ಪ್ರಕ್ಷುಬ್ದ ..

ಗುರುವಾರ ಗ್ರಾಮದ ಮರಾಠಿ ಭಾಷಿಕ ಪ್ರಮುಖರು 9/15 ಅಡಿಯ ಬೃಹತ್‌ ನಾಮಫಲಕ ಅನಾವರಣಗೊಳಿಸಿದರು. ಇದಕ್ಕೂ ಮೊದಲು ಛತ್ರಪತಿ ಶಿವಾಜಿ ಹಾಗೂ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವಿಸಲಾಯಿತು. ಈ ಇಬ್ಬರೂ ಮಹಾಪುರುಷರ ಪರವಾಗಿ ಘೋಷಣೆಗಳು ಮೊಳಗಿದವು. ಶಿವಾಜಿ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು.