Sexual harassment: ಶಾಲಾ ಬಾಲಕಿಗೆ ಲೈಂಗಿಕ ಕಿರುಕುಳ ಪ್ರಕರಣ: ಆರೋಪಿಗಳಿಗೆ ಪೊಲೀಸರ ರಕ್ಷಣೆ

ಇಲ್ಲಿ ಡಿಸಿ, ಎಸ್ಪಿ, ಸಿಇಒ, ಡಿವೈಎಸ್ಪಿ ಎಲ್ಲರೂ ಮಹಿಳೆಯರೇ! ಆದರೂ ನೊಂದ ಬಾಲಕಿಗೆ ನ್ಯಾಯ ಸಿಗಲಿಲ್ಲ. ಹೌದು! ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕು ಹೊಣಕನಪುರ ಬಳಿ ನಾಲ್ವರು ಶಾಲಾ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದರು. ಈ ಸಂಬಂಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ 25 ದಿನ ಕಳೆದರೂ ಆರೋಪಿಗಳನ್ನು ಪೊಲೀಸರು ಇನ್ನೂ ಬಂಧಿಸಿಲ್ಲ.

Sexual abuse of a school girl Police protection for accused gvd

ಚಾಮರಾಜನಗರ (ಜ. 1): ಇಲ್ಲಿ ಡಿಸಿ, ಎಸ್ಪಿ, ಸಿಇಒ, ಡಿವೈಎಸ್ಪಿ ಎಲ್ಲರೂ ಮಹಿಳೆಯರೇ! ಆದರೂ ನೊಂದ ಬಾಲಕಿಗೆ ನ್ಯಾಯ ಸಿಗಲಿಲ್ಲ. ಹೌದು! ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕು ಹೊಣಕನಪುರ ಬಳಿ ನಾಲ್ವರು ಶಾಲಾ ಬಾಲಕಿಗೆ ಲೈಂಗಿಕ ಕಿರುಕುಳ (Sexual harassment) ನೀಡಿದ್ದರು. ಈ ಸಂಬಂಧ ಪೋಕ್ಸೋ ಕಾಯ್ದೆಯಡಿ (Pocso Act) ಪ್ರಕರಣ ದಾಖಲಿಸಿ 25 ದಿನ ಕಳೆದರೂ ಆರೋಪಿಗಳನ್ನು ಪೊಲೀಸರು (Police) ಇನ್ನೂ ಬಂಧಿಸಿಲ್ಲ.

ಏನಿದು ಘಟನೆ: ಡಿಸೆಂಬರ್ 6ರಂದು ಬಾಲಕಿ ಶಾಲೆಗೆ ಹೋಗಿ ವಾಪಸ್ ಬರುವ ವೇಳೆ ಅರಣ್ಯ ಇಲಾಖೆಯ ಗಾರ್ಡ್ ಶಿವಣ್ಣ ನಾಯಕ, ಯಡವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಾವಲುಗಾರ ಜವರನಾಯಕ, ದೈಹಿಕ ಶಿಕ್ಷಣ ಶಿಕ್ಷಕ ಹರೀಶ್, ಹೊಣಕನಪುರದ ನಾಗರಾಜು ಎಂಬುವರರು ಲೈಂಗಿಕ ಕಿರುಕುಳ ನೀಡಿದ್ದರು. ಈ ಬಗ್ಗೆ ಚಾಮರಾಜನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಮಹಿಳಾ ಅಧಿಕಾರಿಗಳೇ ಜಿಲ್ಲೆಯ ಹಿಡಿತ ಹೊಂದಿದ್ದರೂ ನೊಂದ ಬಾಲಕಿಗೆ ಮಾತ್ರ ನ್ಯಾಯ ಸಿಗುತ್ತಿಲ್ಲ. 

ಜಿಲ್ಲೆಯ ಉನ್ನತ ಹುದ್ದೆಗಳನ್ನು ಸ್ತ್ರೀಯರೇ ಅಲಂಕರಿಸಿದ್ದರೂ ಬಾಲಕಿಗೆ ರಕ್ಷಣೆ ಸಿಗುತ್ತಿಲ್ಲ. ಲೈಂಗಿಕ ಕಿರುಕುಳ ನೀಡಿದ ಅರಣ್ಯ ಇಲಾಖೆ ಗಾರ್ಡ್ ಶಿವಣ್ಣ ನಾಯಕ, ಕಾವಲುಗಾರ ಜವರನಾಯಕ, ದೈಹಿಕ ಶಿಕ್ಷಣ ಶಿಕ್ಷಕ ಹರೀಶ್ ಕರ್ತವ್ಯಕ್ಕೆ ರಾಜಾರೋಷವಾಗಿ ಹಾಜರಾಗುತ್ತಿದ್ದು, ಆರೋಪಿಗಳನ್ನು ಬಂಧಿಸದೆ ಪೊಲೀಸರೇ ರಕ್ಷಣೆ ನೀಡುತ್ತಿದ್ದಾರೆಂದು ಬಾಲಕಿ ಪೋಷಕರು ಆರೋಪ ಮಾಡಿದ್ದಾರೆ.

ಶಾಲು ಎಳೆಯುವುದು, ಸಂತ್ರಸ್ತೆಯ ಕೈ ಹಿಡಿದು ಪ್ರೊಪೋಸ್ ಮಾಡೋದು ಲೈಂಗಿಕ ಕಿರುಕುಳವಲ್ಲ: ಹೈಕೋರ್ಟ್‌!

ವೈದ್ಯನಿಂದ ಲೈಂಗಿಕ ಕಿರುಕುಳ: ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ದುರ್ವತನೆಯಿಂದ ಬೇಸತ್ತ ‘ಡಿ’ ದರ್ಜೆ ನೌಕರರಾಗಿ  ಕೆಲಸ ನಿರ್ಹಿಸುತ್ತಿರುವ 31 ವರ್ಷದ ಮಹಿಳೆ ನಿದ್ದೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ನಡೆದಿದೆ. ಆರೋಗ್ಯ ಕೇಂದ್ರದ ದಂತ ವ್ಯೆದ್ಯ ಡಾ.ಮೋಹನ್‌ ಮಹಿಳೆ ಮೇಲೆ ಲೈಂಗಿಕ ಕಿರುಕುಳ, ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದು, ಇದರಿಂದ ಬೇಸತ್ತ ಮಹಿಳೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ. 

ತನಗೆ ಇಷ್ಟವಾದ ರೀತಿಯಲ್ಲಿ ಮಹಿಳೆಯನ್ನು ಕೆಸಲಕ್ಕೆ ನೇಮಿಸಿಕೊಂಡಿದ್ದಲ್ಲದೇ, ಲೈಂಗಿಕ ಕಿರುಕುಳ ನೀಡುವ ಸಲುವಾಗಿಯೇ ತನ್ನ ಛೇಂಬರ್‌ಗೆ ಕರೆಸಿಕೊಳ್ಳುತ್ತಿದ್ದರು. ಕೆಲಸದ ಸಮಯದಲ್ಲಿ ಮಹಿಳೆ ಹತ್ತಿರ ಅಸಭ್ಯವಾಗಿ ವರ್ತಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ದಂತ ವೈದ್ಯರು ಕಚೇರಿಯ ಎಲ್ಲ ಸ್ಟಾಪ್‌ಗಳನ್ನು ಮಹಿಳೆಯ ವಿರುದ್ಧ ಎತ್ತಿಕಟ್ಟಿ, ಇದಕ್ಕೆ ಪೂರಕವೆಂಬಂತೆ ಆರೋಗ್ಯ ಸಮಿತಿಯ ಸುಮ ಅವರನ್ನು ಬಳಸಿಕೊಂಡು, ವೈದ್ಯರು ಇಲ್ಲಸಲ್ಲದ ಆರೋಪ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ನ.12ರಂದು ಮಹಿಳೆ ಹಾಗೂ ವೈದ್ಯ ಸಿಬ್ಬಂದಿ ನಾಗರಾಜ್‌ ಛೇಂಬರ್‌ನಲ್ಲಿದ್ದಾಗ, ವೈದ್ಯರು ಹೊರಗಡೆ ಬಂದು ಮಹಿಳೆಯ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಇದರಿಂದ ಬೇಸತ್ತ ಮಹಿಳೆ ಆರೋಗ್ಯ ಕೇಂದ್ರದ ಸ್ಟೋರ್‌ನಲ್ಲಿ ಇದ್ದ ಸುಮಾರು 30 ನಿದ್ದೆ ಮಾತ್ರೆಗಳನ್ನು ತೆಗೆದುಕೊಂಡು ಅದರಲ್ಲಿ 25 ಮಾತ್ರೆಗಳನ್ನು ಸೇವಿಸಿ, ಆತ್ಮಹತ್ಯೆಗೆ ಯತ್ನಿಸಿದ್ದಾರೆ.

Crime Against Women: ಕೆಲಸ ಕೊಡಿಸುವ ನೆಪದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ

ವಿಷಯ ತಿಳಿದ ನಾಗರಾಜ್‌ ಮಹಿಳೆಯನ್ನು ಪೋಷಕರ ಸಹಾಯದಿಂದ 108 ಆ್ಯಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯ ಡಾ.ಮೋಹನ್‌ ಹಾಗೂ ಆರೋಗ್ಯ ಸಮಿತಿಯ ಸುಮ ವಿರುದ್ಧ ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಪತಿ ಮಲ್ಲಿಕಾರ್ಜುನಯ್ಯ ದೂರು ನೀಡಿದ್ದಾರೆ. ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ನ.13ರಂದು ಏಜೆಸ್ಸಿಯವರು ವೈದ್ಯ ಹಾಗೂ ಸುಮ ಅವರ ನಿರ್ದೇಶನದಂತೆ ದೌರ್ಜನ್ಯಕ್ಕೀಡಾದ ಮಹಿಳೆಯನ್ನು ಕೆಲಸದಿಂದ ವಜಾಗೊಳಿಸಿದ್ದಾರೆ.

Latest Videos
Follow Us:
Download App:
  • android
  • ios