*   ಮಹಿಳೆಗೆ ಕೆಲಸ ಕೊಡಿಸುವುದಾಗಿ ನಂಬಿಸಿದ್ದ ಆರೋಪಿ *   ಚರ್ಚ್‌ವೊಂದರಲ್ಲಿ ಪಾದ್ರಿಯಾಗಿರುವ ಆರೋಪಿ *   ಸೋಲದೇವನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌

ಬೆಂಗಳೂರು(ನ.28): ಉದ್ಯೋಗ(Job) ಕೊಡಿಸುವ ನೆಪ​ದಲ್ಲಿ ವ್ಯಕ್ತಿ​ಯೊ​ಬ್ಬ ಮಹಿ​ಳೆ​ಯೊ​ಬ್ಬ​ರಿಗೆ ಲೈಂಗಿಕ ಕಿರು​ಕುಳ(Sexual Harassment) ನೀಡಿ​ರುವ ಆರೋಪದ ಸಂಬಂಧ ಸೋಲದೇವನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌(FIR) ದಾಖಲಾಗಿದೆ.

ಚಾಮ​ರಾ​ಜ​ಪೇಟೆ ನಿವಾಸಿ 38 ವರ್ಷದ ಮಹಿಳೆ(Woman) ನೀಡಿದ ದೂರಿನ ಮೇರೆಗೆ ಮಾದ​ನಾ​ಯ​ಕ​ನ​ಹಳ್ಳಿ ನಿವಾಸಿ ಆಲ್ಬರ್ಟ್‌ ಎಂಬಾ​ತನ ವಿರುದ್ಧ ಪೊಲೀಸರು ಎಫ್‌​ಐ​ಆರ್‌ ದಾಖ​ಲಿ​ಸಿ​ದ್ದಾ​ರೆ. ಐದು ವರ್ಷದ ಹಿಂದೆ ಸಂತ್ರಸ್ತೆಗೆ ಆರೋಪಿ ಪರಿಚಯವಾಗಿದ್ದು, ಬಳಿಕ ಆಕೆಗೆ ಕೆಲಸ ಕೊಡಿಸುವುದಾಗಿ ನಂಬಿಸಿದ್ದ. ಅದರಂತೆ ಜೆ.ಸಿ. ರಸ್ತೆಯ ವಕೀಲರೊಬ್ಬರ ಕಚೇರಿಯಲ್ಲಿ ಸಂತ್ರಸ್ತೆಗೆ ಕೆಲಸ ಕೊಡಿಸಿದ್ದ. ಹೀಗಾಗಿ ಇಬ್ಬರ ನಡುವೆ ಸಲುಗೆ ಬೆಳೆದಿತ್ತು. ಈ ನಡುವೆ ಆರೋಪಿಯು(Accused) ಹೆಸರಘಟ್ಟದಲ್ಲಿ ಚರ್ಚ್‌ವೊಂದನ್ನು(Church) ನಿರ್ಮಿಸಿದ್ದೇನೆ. ಅಲ್ಲಿಗೆ ಬಂದು ಪ್ರಾರ್ಥನೆ ಮಾಡಿದರೆ ಒಳ್ಳೆಯದಾಗುತ್ತದೆ ಎಂದು ನಂಬಿಸಿ ಸಂತ್ರಸ್ತೆಯನ್ನು ರಾತ್ರಿ ವೇಳೆ ಕರೆದೊಯ್ಯುತ್ತಿದ್ದ. ಎರಡು ವರ್ಷಗಳ ಹಿಂದೆ ಹೆಸರಘಟ್ಟ ಕೆರೆ ಬಳಿ ಕರೆದೊಯ್ದಿದ್ದ ಆರೋಪಿಯು ಜಿಸಸ್‌ ರಕ್ತ ಕುಡಿ ಎಂದು ದ್ರವವನ್ನು ಕುಡಿಸಿ ಬಳಿಕ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸೆಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಆರೋಪಿ ಚರ್ಚ್‌ವೊಂದರಲ್ಲಿ ಪಾದ್ರಿಯಾಗಿದ್ದಾನೆ(Pastor) ಎನ್ನಲಾಗಿದೆ.

Murder Case | ಲೈಂಗಿಕ ದೌರ್ಜನ್ಯ ನೀಡಿದ ಸ್ವಂತ ತಂದೆ : ಸ್ನೇಹಿತರಿಂದ ಅಪ್ಪನ ಕೊಲ್ಲಿಸಿದ ಮಗಳು

7 ತಿಂಗಳ ಬಳಿಕ ಮಹಿಳೆ ಕೊಲೆ ಪ್ರಕರಣ ಬೆಳಕಿಗೆ

ಏಳು ತಿಂಗಳ ಹಿಂದೆ ನಡೆದ ಮಹಿಳೆಯೊಬ್ಬರ ಕೊಲೆ(Murder) ಪ್ರಕರಣ ಬೇಧಿಸಿರುವ ಸುಬ್ರಮಣ್ಯನಗರ ಠಾಣೆ ಪೊಲೀಸರು(Police) ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ(Arrest).

ಕರ್ನೂಲ್‌ ಮೂಲದ ನೂರ್‌ ಅಹಮ್ಮದ್‌ (43), ಸತ್ಯ (48) ಬಂಧಿತರು. ಈ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳಾದ ಕುಮಾರ್‌, ಮೆಂಟಲ್‌ ರಘು ಅನಾರೋಗ್ಯದಿಂದ ಮೃತಪಟ್ಟಿದ್ದಾರೆ(Death). ರಾಜಾಜಿನಗರ ನಿವಾಸಿ ಸೀತಾ (47) ಕೊಲೆಯಾಗಿದ್ದ ದುರ್ದೈವಿ.

ಮೃತ ಸೀತಾ ಅವರ ಪತಿ ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದರು. ಹೀಗಾಗಿ ಸೋದರ ಸಂಬಂಧಿ ಮನೆಯಲ್ಲಿ ವಾಸಿಸುತ್ತಿದ್ದರು. ಕೆಲಸದ ಮೇಲೆ ಹೊರಹೋಗಿ ಬರುವುದಾಗಿ ಮನೆಯಲ್ಲಿ ಹೇಳಿ ಹೋಗಿದ್ದ ಸಂಜೆಯದರೂ ಮನೆಗೆ ಬಂದಿರಲಿಲ್ಲ. ಹೀಗಾಗಿ ಮಂತ್ರಾಲಯ ದೇವಾಲಯದಲ್ಲಿ ಅರ್ಚಕನಾಗಿರುವ ಸೀತಾ ಸಹೋದರ ವೆಂಕಟೇಶ್‌ ಆಚಾರ್‌ ಅಕ್ಕ ಸೀತಾ ನಾಪತ್ತೆಯಾಗಿರುವ ಬಗ್ಗೆ ಮಾ.26ರಂದು ಸುಬ್ರಮಣ್ಯನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ತನಿಖೆ(Investigation) ಕೈಗೊಂಡಾಗ ಪ್ರಕರಣ ಬೆಳಕಿಗೆ ಬಂದಿದೆ.

ಬಳಿಕ ತನಿಖೆ ಕೈಗೆತ್ತಿಕೊಂಡ ಪೊಲೀಸರು ಸಿಡಿಆರ್‌ ಸಹಾಯದಿಂದ ಸೀತಾ ಅವರ ಮೊಬೈಲ್‌ ಕರೆಗಳ ವಿವರ ಪರಿಶೀಲಿಸಿದಾಗ, ಸೀತಾ ಅವರು ಆರೋಪಿಗಳಾದ ನೂರ್‌ ಅಹಮದ್‌, ಸತ್ಯ, ಕುಮಾರ್‌, ಮೆಂಟಲ್‌ ರಘು ಸಂಪರ್ಕದಲ್ಲಿದ್ದ ಸುಳಿವು ಸಿಕ್ಕಿದೆ. ಬಳಿಕ ಪೊಲೀಸರು ವೆಂಕಟೇಶ್‌ ಆಚಾರ್‌ ಬಳಿ ವಿಚಾರಿಸಿದಾಗ, ನೂರ್‌ ಅಹಮ್ಮದ್‌, ಉದಯ್‌ ಕಿರಣ್‌ ರೆಡ್ಡಿ, ಅಮೀನ್‌ ಬಾಷಾ ಎಂಬುವವರು ತಮ್ಮನ್ನು ಬೆದರಿಸಿ ಮಂತ್ರಾಲಯದ ತಮ್ಮ ಜಮೀನನ್ನು ಅವರ ಹೆಸರಿಗೆ ಬರೆಸಿಕೊಂಡಿದ್ದರು ಎಂಬ ವಿಚಾರವನ್ನು ಹೇಳಿದ್ದರು.

ವೈದ್ಯನಿಂದ ಲೈಂಗಿಕ ಕಿರುಕುಳ: ಆಸ್ಪತ್ರೆ ಮಹಿಳೆ ಸಿಬ್ಬಂದಿ ಆತ್ಮಹತ್ಯೆಗೆ ಯತ್ನ

ಈ ಮಾಹಿತಿ ಆಧರಿಸಿ ಮಂತ್ರಾಲಯಕ್ಕೆ(Mantralayam) ತೆರಳಿದ್ದ ಪೊಲೀಸರು, ನೂರ್‌ ಅಹಮದ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ವೇಳೆ ವೆಂಕಟೇಶ್‌ ಆಚಾರ್‌ ಅವರ ಪಿತ್ರಾರ್ಜಿತ ಆಸ್ತಿಯಲ್ಲಿ 2 ಎಕರೆ ಜಮೀನನ್ನು 53 ಲಕ್ಷ ರು.ಗೆ ಖರೀದಿಸಿದ್ದೆವು. ಮಾ.8ರಂದು ಸೀತಾ ಅವರಿಗೆ ತಿಳಿಯದಂತೆ ವೆಂಕಟೇಶ್‌ ಆಚಾರ್‌ ಕಡೆಯಿಂದ ನೋಂದಣಿ ಮಾಡಿಸಿಕೊಂಡಿದ್ದೆವು. ಬಳಿಕ ಆ ಜಮೀನನ್ನು ಆನಂದ್‌ ಎಂಬಾತನಿಗೆ 80 ಲಕ್ಷ ರು.ಗೆ ಮಾರಾಟ ಮಾಡಲು ಅಗ್ರಿಮೆಂಟ್‌ ಮಾಡಿ, ನಂತರ ನೋಂದಣಿಗೆ ಹೋದಾಗ ಸೀತಾ ಅವರ ಸಹಿ ಬೇಕು ಎಂದು ಆನಂದ್‌ ಹೇಳಿದ್ದರು. ಹೀಗಾಗಿ ಸೀತಾ ಸಹಿ ಪಡೆಯುವ ಜವಾಬ್ದಾರಿಯನ್ನು ಕುಮಾರ್‌ಗೆ ವಹಿಸಿದ್ದೆವು. ಸಹಿ ಮಾಡಿಸಿದರೆ 2.50 ಲಕ್ಷ ರು. ಕೊಡುವುದಾಗಿ ಹೇಳಿದ್ದೆವು ಎಂದು ಆರೋಪಿ ನೂರ್‌ ಅಹಮದ್‌ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.

ಮಾತ್ರೆಗೆ ಸೈನೆಡ್‌ ಹಾಕಿ ಕೊಲೆ:

ಕಳೆದ ಮಾರ್ಚ್‌ 25ರಂದು ನೂರ್‌ ಮಹಮದ್‌, ಕುಮಾರ್‌ ಹಾಗೂ ಸ್ನೇಹಿತರಾದ ಸತ್ಯ ಹಾಗೂ ರಘು ಚಿನ್ನ ಖರೀದಿಸುವ ನೆಪದಲ್ಲಿ ಸೀತಾ ಅವರನ್ನು ಕಾರಿನಲ್ಲಿ ಮೆಜೆಸ್ಟಿಕ್‌ಗೆ ಕರೆದುಕೊಂಡು ಹೋಗಿದ್ದರು. ಬಳಿಕ ಅವರನ್ನು ಕೊಲೆ ಮಾಡುವ ಉದ್ದೇಶದಿಂದ ನೆಲಮಂಗಲ, ಕುಣಿಗಲ್‌, ಹಾಸನದಲ್ಲಿ ಸುತ್ತಾಡಿಸಿ ಬಳಿಕ ಹಾಸನ-ಹೊಸಪೇಟೆ ಮಾರ್ಗದ ನಡುವೆ ತಲೆನೋವಿನ ಮಾತ್ರೆಗೆ ಸೈನೈಡ್‌ ಸವರಿ ಒತ್ತಾಯಪೂರ್ವಕವಾಗಿ ಸೀತಾಗೆ ನುಂಗಿಸಿ ಕೊಲೆ ಮಾಡಿದ್ದರು. ಬಳಿಕ ಸೀತಾ ಶವವನ್ನು ಹೊಸಪೇಟೆಯ ಹುಲಿಗೆಮ್ಮ ದೇವಿ ನೀರಿನ ಕಾಲುವೆಗೆ ಎಸೆದು ಬಂದಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ಹೇಳಿದ್ದಾರೆ ಎಂಬುದು ತಿಳಿದು ಬಂದಿದೆ.