Asianet Suvarna News Asianet Suvarna News

Covid Crisis: ಕೊರೋನಾ ರೂಪಾಂತರಿ ಪತ್ತೆಗೆ ಕೊಳಚೆ ನೀರಿನ ಜೀನೋಮಿಕ್‌ ಸೀಕ್ವೆನ್ಸಿಂಗ್‌ ಟೆಸ್ಟ್‌

*   34 ಎಸ್‌ಟಿಪಿಗಳ ಕೊಳಚೆ ನೀರನ್ನು ಪರೀಕ್ಷೆ ಒಳಪಡಿಸಲು ಬಿಬಿಎಂಪಿ ನಿರ್ಧಾರ
*  ಶೇ.70 ಒಮಿಕ್ರಾನ್‌ ಪತ್ತೆ
* ಈ ಪರೀಕ್ಷೆಯಿಂದ ಕೋವಿಡ್‌ ಸೋಂಕು ರೂಪಾಂತರವಾದ ಬಗ್ಗೆ 15 ದಿನಗಳ ಮೊದಲೇ ತಿಳಿದುಕೊಳ್ಳಲು ಸಾಧ್ಯ

Sewage Water Genomic Sequencing Test for Corona Mutant Detection in Bengaluru grg
Author
Bengaluru, First Published May 5, 2022, 4:41 AM IST

ಬೆಂಗಳೂರು(ಮೇ.05): ಕೊರೋನಾ(Coronavirus) ರೂಪಾಂತರಿ ಸೋಂಕು ಪತ್ತೆ ಹಚ್ಚಲು ನಗರದ 34 ತ್ಯಾಜ್ಯ ನೀರಿನ ಸಂಸ್ಕರಣಾ ಘಟಕ(STP)ಗಳ ಕೊಳಚೆ ನೀರನ್ನು ಮೇ 5ರಿಂದ ಜೀನೋಮಿಕ್‌ ಸೀಕ್ವೆನ್ಸಿಂಗ್‌ ಪರೀಕ್ಷೆಗೆ(Genomic Sequencing Test) ಒಳಪಡಿಸಲು ಬಿಬಿಎಂಪಿ(BBMP) ಆರೋಗ್ಯ ವಿಭಾಗದ ಅಧಿಕಾರಿಗಳು ಮುಂದಾಗಿದ್ದಾರೆ.

ಈ ಕುರಿತು ಬುಧವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಾ.  ಕೆ.ವಿ.ತ್ರಿಲೋಕ್‌ಚಂದ್ರ ನೇತೃತ್ವದಲ್ಲಿ ಜಲಮಂಡಳಿ, ಖಾಸಗಿ ಪ್ರಯೋಗಾಲಯಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಲಾಯಿತು. ಕೊಳಚೆ ನೀರಿನ ಜೀನೋಮಿಕ್‌ ಪರೀಕ್ಷೆ ಬಗ್ಗೆ ಚರ್ಚಿಸಲಾಯಿತು.

Covid Crisis in Karnataka: ಇಡೀ ಏಪ್ರಿಲ್‌ನಲ್ಲಿ ಕೋವಿಡ್‌ಗೆ ಕೇವಲ 5 ಬಲಿ..!

ಈ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ(South Africa) ಕೋವಿಡ್‌ 3ನೇ ಅಲೆಯ ಬಗ್ಗೆ ಕೊಳಚೆ ನೀರಿನ ಪರೀಕ್ಷೆಯಿಂದ 15 ದಿನ ಮೊದಲೇ ಪತ್ತೆ ಮಾಡಲಾಗಿತ್ತು. ಹೀಗಾಗಿ, ಇದೇ ಮಾದರಿ ಅನುಸರಿಸಿ ನಗರದಲ್ಲಿ ಜನರು ಬಳಸಿದ ನೀರನ್ನು ಕೋವಿಡ್‌ (RTPCR and Rapid Test) ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಈ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟ ರಿನ ಮಾದರಿಗಳಲ್ಲಿ ಹೊಸ ರೂಪಾಂತರಿ ಪ್ರಬೇಧದ ಪತ್ತೆಗಾಗಿ ಜೀನೋಮಿಕ್‌ ಸೀಕ್ವೆನ್ಸಿಂಗ್‌ ಪರೀಕ್ಷೆ ಮಾಡುವ ಬಗ್ಗೆ ತೀರ್ಮಾನಿಸಲಾಯಿತು ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ಎಲ್ಲಾ ವಾರ್ಡ್‌ಗಳಲ್ಲಿ ಪರೀಕ್ಷೆ

ಕೋವಿಡ್‌(Covid-19) ಗಂಭೀರ ರೋಗ ಲಕ್ಷಣಗಳಿಲ್ಲದ ವ್ಯಕ್ತಿಯು ಬಳಸಿದ ನೀರಿನಲ್ಲಿಯೂ ಸೋಂಕು ಪತ್ತೆಯಾಗುತ್ತದೆ. ಹೀಗಾಗಿ, ಪಾಲಿಕೆಯ 198 ವಾರ್ಡ್‌ಗಳಲ್ಲಿನ ಕೊಳಚೆ ನೀರನ್ನು ಕೂಡ ಪರೀಕ್ಷೆ ಮಾಡಲಾಗುತ್ತಿದೆ. ಇದಕ್ಕೆ ಪಾಲಿಕೆಯ ಎಲ್ಲ ವಾರ್ಡ್‌ಗಳ ಎಂಜಿನಿಯರ್‌ಗಳು, ಆರೋಗ್ಯ ವೈದ್ಯಾಧಿಕಾರಿಗಳು, ಆರೋಗ್ಯ ಪರಿವೀಕ್ಷಕರು ಹಾಗೂ ಜಲಮಂಡಳಿಯ ಅಧಿಕಾರಿಗಳು ಅಗತ್ಯ ಸಹಕಾರ ನೀಡಬೇಕು. ಈ ಪರೀಕ್ಷೆಯಿಂದ ಕೋವಿಡ್‌ ಸೋಂಕು ರೂಪಾಂತರವಾದ ಬಗ್ಗೆ 15 ದಿನಗಳ ಮೊದಲೇ ತಿಳಿದುಕೊಳ್ಳಲು ಸಾಧ್ಯ.

Covid Crisis: ಕರ್ನಾಟಕದಲ್ಲಿ ಕೊರೋನಾ ಪಾಸಿಟಿವಿಟಿ ದರ ದಿನದಿಂದ ದಿನಕ್ಕೆ ಏರಿಕೆ..!

ಉಚಿತವಾಗಿ ಪರೀಕ್ಷೆ

ಮಾಲಿಕ್ಯೂಲರ್‌ ಸಲೂಷನ್ಸ್‌, ಟಾಟಾ ಇನ್‌ಸ್ಟಿಟ್ಯೂಟ್‌ ಆಫ್‌ ಜೀನೋಮಿಕ್‌ ಸೀಕ್ವೆನ್ಸಿಂಗ್‌ (ಟಿಐಜಿಎಸ್‌) ಹಾಗೂ ಶ್ರಾ್ಯಂಡ್‌ ಲ್ಯಾಬರೋಟರೀಸ್‌ ಎಂಬ ಖಾಸಗಿ ಪ್ರಯೋಗಾಲಯಗಳು ಕೊಳಚೆ ನೀರನ್ನು ಜೀನೋಮಿಕ್‌ ಪರೀಕ್ಷೆ ಮಾಡುತ್ತಿವೆ. ಪಾಲಿಕೆಯಿಂದ ಹಣ ಪಡೆಯದೇ ಉಚಿತವಾಗಿ ಪರೀಕ್ಷೆ ಮಾಡಲಿವೆ.

ಶೇ.70 ಒಮಿಕ್ರಾನ್‌ ಪತ್ತೆ

ಈಗಾಗಲೇ ಬೊಮ್ಮನಹಳ್ಳಿ, ಮಹದೇವಪುರ ಹಾಗೂ ಪೂರ್ವ ವಲಯ ಜೀನೋಮಿಕ್‌ ಪರೀಕ್ಷೆ ನಡೆಸಲಾಗುತ್ತಿದೆ. ಅದರಲ್ಲಿ ಶೇ.70 ಒಮಿಕ್ರಾನ್‌(Omicron) ಹಾಗೂ ಉಳಿದಂತೆ ಶೇ.30ರಷ್ಟು ಹಳೆಯ ಕೊರೋನಾ ಪ್ರಬೇಧಗಳಾದ ಡೆಲ್ಟಾವೈರಸ್‌ ಪತ್ತೆಯಾಗುತ್ತಿವೆ. ಹೊಸ ಪ್ರಬೇಧ ಪತ್ತೆಯ ಬಗ್ಗೆ ನಿಗಾವಹಿಸಲಾಗುತ್ತಿದೆ. ಈ ಹಿಂದೆ 15 ದಿನಗಳಿಗೆ ಒಂದು ಬಾರಿ ಪರೀಕ್ಷೆ ನಡೆಸಲಾಗುತ್ತಿತ್ತು. ಆದರೀಗ 7 ದಿನಗಳಿಗೆ ನಡೆಸಲು ಸೂಚನೆ ನೀಡಲಾಗಿದೆ.
 

Follow Us:
Download App:
  • android
  • ios