Asianet Suvarna News Asianet Suvarna News

Udupi Rain ಆರೆಂಜ್ ಅಲರ್ಟ್, ವ್ಯಾಪಕ ಮಳೆಹಾನಿ

ಉಡುಪಿ ಜಿಲ್ಲೆಯಾದ್ಯಂತ  ಗುರುವಾರಕ್ಕೆ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಕಳೆದ ಮೂರು ದಿನ ಸುರಿದ ಮಳೆಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

severe rainfall alert in udupi district gow
Author
First Published May 18, 2022, 4:49 PM IST

ವರದಿ: ಶಶಿಧರ ಮಾಸ್ತಿಬೈಲು ಏಷಿಯಾನೆಟ್ ಸುವರ್ಣ ಸ್ಯೂಸ್

ಉಡುಪಿ (ಮೇ.18) ಕರಾವಳಿ ಜಿಲ್ಲೆಗಳಿಗೆ ಈ ಬಾರಿ ಮುಂಗಾರು ಅವಧಿಗೂ ಮುನ್ನ ಅಪ್ಪಳಿಸುವ ಸೂಚನೆ ಇದೆ. ಜಿಲ್ಲೆಯಾದ್ಯಂತ ಮುಂಗಾರು ಪೂರ್ವ ಮಳೆ ಉತ್ತಮವಾಗಿ ಬೀಸುತ್ತಿದೆ. ಜಿಲ್ಲೆಯಾದ್ಯಂತ ಬುಧವಾರ ಯಲ್ಲೋ ಅಲರ್ಟ್ ಇತ್ತು. ಗುರುವಾರಕ್ಕೆ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಕಳೆದ ಮೂರು ದಿನ ಸುರಿದ ಮಳೆಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

ಜಿಲ್ಲೆಯಲ್ಲಿ ಬುಧವಾರ ಸಾಧಾರಣ ಮಳೆಯಾಗಿದೆ. ಐದು ದಿನಗಳ ಕಾಲ ಕಡಲಿಗೆ ಇಳಿಯದಂತೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೀನುಗಾರಿಕೆ ಸ್ಥಗಿತಗೊಳಿಸುವಂತೆ ಆದೇಶ ಮಾಡಿದೆ. ಮೀನುಗಾರಿಕಾ ಅವಧಿ ಮುಗಿಯುತ್ತಿರುವುದು ರಿಂದ ಬಹುತೇಕ ಬೋಟುಗಳು ಮಲ್ಪೆ ಬಂದರಿಗೆ ಆಗಮಿಸುತ್ತಿವೆ. ತೀರ ಪ್ರದೇಶದಲ್ಲಿ ನಡೆಯುವ ಕೈರಂಪಣಿ ಮತ್ತು ನಾಡದೋಣಿ ಮೀನುಗಾರಿಕೆ ಚುರುಕಾಗಿದೆ.

ANY DESK APP ಡೌನ್ಲೋಡ್ ಮಾಡಿಸಿ ಲಕ್ಷಾಂತರ ದೋಚಿದ ಕಳ್ಳರು!

ಅದೃಷ್ಟವಶಾತ್ ಪಾರಾದ ಮಕ್ಕಳು: ಸೋಮವಾರ ರಾತ್ರಿ ಸುರಿದ ಮಳೆಗೆ ಕುಂದಾಪುರ ತಾಲೂಕಿನ ಸಾಂತಾವರ ಎಂಬಲ್ಲಿ ಎರಡು ಮನೆಗಳಿಗೆ ಹಾನಿಯಾಗಿದೆ. ಶಾರದಾ ದೇವಾಡಿಗ, ಬಾಬಿ ದೇವಾಡಿಗ ಎಂಬವರ ಮನೆಯ ಮೇಲೆ ಮರ ಬಿದ್ದಿದೆ. ಈ ವೇಳೆ ಮನೆಯೊಳಗಿದ್ದ ಗೃಹಪಯೋಗಿ ವಸ್ತುಗಳಿಗೆ ಸಂಪೂರ್ಣ ಹಾನಿಯಾಗಿದ್ದು, ಅದೃಷ್ಟವಶಾತ್ ಬಾಬಿ ಅವರ ಮನೆಯಲ್ಲಿದ್ದ 9 ತಿಂಗಳ ಗಂಡು ಮಗು ಮತ್ತು ಆರು ವರ್ಷದ ಗಂಡುಮಗು ಪಾರಾಗಿದೆ. ಇದೇ ವೇಳೆ ಶಾರದಾ ಅವರ ಮನೆಯಲ್ಲಿದ್ದ ಮೂರು ವರ್ಷದ ಮಗು ಮತ್ತು ಎಂಟು ವರ್ಷದ ಬಾಲಕಿ ಕೂಡ ಅಪಾಯದಿಂದ ಪಾರಾಗಿದ್ದಾರೆ. ಎರಡು ಮನೆಗಳ ಅಂದಾಜು ನಷ್ಟ ಏಳು ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

ಜಿಲ್ಲೆಯಲ್ಲಿ ಹಾನಿಗಳ ವಿವರ: ಕಾಪು ತಾಲೂಕಿನ ಕೋಟೆ ಗ್ರಾಮದ ಸರೋಜ ಸುಬೋದ್‌ ಇವರ ಮನೆಗೆ ಸಿಡಿಲು ಬಡಿದ ಎಡಗೈನಲ್ಲಿ ಬಲ ಇಲ್ಲದಂತಾಗಿದೆ. ಕಾಪು ತಾಲೂಕಿನ ಕೋಟೆ ಗ್ರಾಮದ  ಸುಬೋದ್ ಕುಮಾರ್  ಇವರ ಮನೆಗೆ ಸಿಡಿಲು ಬಡಿದು ಮನೆ ಗೋಡೆ ಮತ್ತು ವಿದ್ಯುತ್ ವೈರಿಂಗ್‌ ಭಾಗಶಃ ಹಾನಿಯಾಗಿ 40,000 ರೂ ನಷ್ಟವಾಗಿದೆ.

ಕುಂದಾಪುರ ತಾಲೂಕಿನ ಕಾವ್ರಾಡಿ ಗ್ರಾಮದ ಬಾಬಿ ಕುಲಾಲ್ತಿ ಇವರ ಮನೆಯ ಜಾನುವಾರು ಕೊಟ್ಟಿಗೆ ಭಾಗಶಃ ಹಾನಿಯಾಗಿ 30,000 ರೂ, ಕಾವ್ರಾಡಿ ಗ್ರಾಮದ ಸಣ್ಣಮ್ಮ ಮೊಗೇರ್ತಿ ಇವರ ಮನೆಯ ಜಾನುವಾರು ಕೊಟ್ಟಿಗೆ ಭಾಗಶಃ ಹಾನಿಯಾಗಿ 25,000 ರೂ, ವಂಡ್ಸೆ ಗ್ರಾಮದ ಮೂಕಾಂಬು ಇವರ ವಾಸ್ತವ್ಯದ ಮನೆ ಭಾಗಶ ಹಾನಿಯಾಗಿ 30,000 ರೂ, ಕುಳಂಜೆ ಗ್ರಾಮದ ಶ್ರೀಮತಿ ಪ್ರಭು ಇವರ ವಾಸ್ತವ್ಯದ ಮನೆ ಹಾಗೂ ಜಾನುವಾರು ಕೊಟ್ಟಿಗೆ ಭಾಗಶಃ ಹಾನಿಯಾಗಿ 65,000 ರೂ, 74 ಉಳ್ಳೂರು ಗ್ರಾಮದ ರತ್ನ ದೇವಾಡಿಗ ಇವರ ವಾಸ್ತವ್ಯದ ಮನೆ ಭಾಗಶಃ ಹಾನಿಯಾಗಿ 50,000 ರೂ, 74 ಉಳ್ಳೂರು ಗ್ರಾಮದ ಬುಡ್ಡು ದೇವಾಡಿಗ ಇವರ ವಾಸ್ತವ್ಯದ ಮನೆ ಭಾಗಶಃ ಹಾನಿಯಾಗಿ  30,000 ರೂ,ಹೆಸ್ಕತ್ತೂರು ಗ್ರಾಮದ ಹೇಮ ಮೊಗೇರ್ತಿ ಇವರ ವಾಸ್ತವ್ಯದ ಮನೆ ಭಾಗಶಃ ಹಾನಿಯಾಗಿ 30,000 ರೂ,ವಕ್ವಾಡಿ ಗ್ರಾಮದ ಕನಕ ಇವರ ವಾಸ್ತವ್ಯದ ಮನೆ  ಭಾಗಶಃ ಹಾನಿಯಾಗಿ 30,000 ರೂ, ಹೆಸ್ಕತ್ತೂರು ಗ್ರಾಮದ ಸಾಧು ಪೂಜಾರ್ತಿ ಇವರ ವಾಸ್ತವ್ಯದ ಮನೆ ಭಾಗಶಃ ಹಾನಿಯಾಗಿ 25,000 ರೂ ನಷ್ಟವಾಗಿದೆ.

Heavy Rainfall ಹಾಸನ ಶಾಲೆಗಳಿಗೆ ರಜೆ ಘೋಷಿಸಿದ ಜಿಲ್ಲಾಧಿಕಾರಿ

 ಅಸೋಡು ಗ್ರಾಮದ ಗುಲಾಬಿ ಪೂಜಾರ್ತಿ ಇವರ ವಾಸ್ತವ್ಯದ ಮನೆ ಭಾಗಶಃ ಹಾನಿಯಾಗಿ 25,000 ರೂ, ಕಂದಾವರ ಗ್ರಾಮದ ಬಾಬಿ ದೇವಾಡಿಗ ಇವರ ವಾಸ್ತವ್ಯದ ಮನೆ ಭಾಗಶಃ ಹಾನಿಯಾಗಿ 30,000 ರೂ, ಕಂದಾವರ ಗ್ರಾಮದ ನಾರಾಯಣ ದೇವಾಡಿಗ ಇವರ ವಾಸ್ತವ್ಯದ ಮನೆ ಭಾಗಶಃ ಹಾನಿಯಾಗಿ 40,000 ರೂ, ವಕ್ವಾಡಿ ಗ್ರಾಮದ ಗುಲಾಬಿ ಆಚಾರ್ತಿ ಇವರ ವಾಸ್ತವ್ಯದ ಮನೆ ಭಾಗಶಃ ಹಾನಿಯಾಗಿ 40,000 ರೂ ನಷ್ಟವಾಗಿದೆ. ಕಾರ್ಕಳ ತಾಲೂಕಿನ ಪಳ್ಳಿ ಗ್ರಾಮದ ಗಿರಿಜಾ ಇವರ ವಾಸದ ಮನೆಯ ಮೇಲೆ ಗಾಳಿ ಮಳೆಯಿಂದ ಮರಬಿದ್ದು ಭಾಗಶಃ ಹಾನಿಯಾಗಿ  20,000 ರೂ, ಪಳ್ಳಿ ಗ್ರಾಮದ ರಮೇಶ್‌ ಸಾಲ್ಯಾನ್‌ ಇವರ ವಾಸದ ಮನೆಯ ಮೇಲೆ ಗಾಳಿ ಮಳೆಯಿಂದ ಮರಬಿದ್ದು ಭಾಗಶಃ ಹಾನಿಯಾಗಿ 10,000 ರೂ ನಷ್ಟವಾಗಿದೆ.

ಉಡುಪಿ ತಾಲೂಕಿನ ಆತ್ರಾಡಿ ಗ್ರಾಮದ ಮಹಾದೇವ ಕಾಮತ್‌ ಇವರ ಮನೆಯ ಮೇಲೆ ಗಾಳಿ ಮಳೆಯಿಂದ ಮರಬಿದ್ದು ಭಾಗಶಃ ಹಾನಿಯಾಗಿ 50,000 ರೂ ನಷ್ಟವಾಗಿದೆ. ಬ್ರಹ್ಮಾವರ ತಾಲೂಕಿನ ಚೇರ್ಕಾಡಿ ಗ್ರಾಮದ ಶೀನ ನಾಯ್ಕ ಇವರ ವಾಸ್ತವ್ಯದ ಪಕ್ಕಾ ಮನೆಯ ಮೇಲೆ  ಮರಬಿದ್ದು ಸಂಪೂರ್ಣ ಹಾನಿಯಾಗಿ 100,000 ರೂ ಹಾನಿಯಾಗಿದೆ. ಅಚ್ಲಾಡಿ ಗ್ರಾಮದ ಗೋಪಾಲ ಗಾಣಿಗ ಇವರ ವಾಸ್ತವ್ಯದ ಪಕ್ಕಾ ಮನೆಯ ಮೇಲೆ ಮರಬಿದ್ದು ಭಾಗಶಃ ಹಾನಿಯಾಗಿ 35,000 ರೂ ನಷ್ಟವಾಗಿದೆ.

ಜಿಲ್ಲೆಯ ಮಳೆವಿವರ
ಉಡುಪಿಯಲ್ಲಿ 69.5, ಬ್ರಹ್ಮಾವರ - 40.5, ಕಾಪು - 74.9, ಕುಂದಾಪುರ - 21.6, ಬೈಂದೂರು - 36.2  ಕಾರ್ಕಳ - 62.8,  ಹೆಬ್ರಿ - 44.2, ಮೀ ಆಗಿರುತ್ತದೆ. ಜಿಲ್ಲೆಯಲ್ಲಿ ಸರಾಸರಿ 44.7 ಮಿ.ಮೀ ಮಳೆಯಾಗಿರುತ್ತದೆ.

Follow Us:
Download App:
  • android
  • ios