ANY DESK APP ಡೌನ್ಲೋಡ್ ಮಾಡಿಸಿ ಲಕ್ಷಾಂತರ ದೋಚಿದ ಕಳ್ಳರು!
- ಮೊಬೈಲ್ ನಲ್ಲಿ ಆಪ್ ಡೌನ್ ಲೋಡ್ ಮಾಡಿಸಿ ಲಕ್ಷಾಂತರ ದೋಚಿದ ಕಳ್ಳರು
- ಹೊಸ ರೀತಿಯಲ್ಲಿ ಆನ್ ಲೈನ್ ವಂಚನೆ
- ವೈದ್ಯೆಯನ್ನು ಟಾರ್ಗೆಟ್ ಮಾಡಿದ ಕಳ್ಳರು
ವರದಿ : ವರದರಾಜ್ , ಏಷ್ಯಾನೆಟ್ ಸುವರ್ಣನ್ಯೂಸ್
ದಾವಣಗೆರೆ (ಮೇ 18 ): ಅಪರಿಚಿತ ವ್ಯಕ್ತಿಯೊಬ್ಬ ನಗರದ ವೈದ್ಯೆಯೊಬ್ಬರಿಗೆ ಕಾಲ್ ಮಾಡಿ, ಬ್ಯಾಂಕ್ ಅಧಿಕಾರಿ ಎಂದು ಪರಿಚಯಿಸಿಕೊಂಡು ಮೊಬೈಗೆ ಎನಿ ಡೆಸ್ಕ್ ಆ್ಯಪ್ ಇನ್ ಸ್ಟಾಲ್ ಮಾಡಿಸಿ ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಪಾಸ್ ವರ್ಡ್ ಪಡೆದು 1.92 ಲಕ್ಷ ವಂಚನೆ ಮಾಡಿರುವ ಘಟನೆ ನಡೆದಿದೆ.
ANY DESK APP ಬಳಸಿ ಆನ್ ಲೈನ್ ವಂಚನೆ ಮಾಡಿದ ಕಳ್ಳರು: ಎಂಸಿಸಿ ಬಿ ಬ್ಲಾಕ್ ಸ್ವಪ್ನ ವಂಚನೆಗೆ ಒಳಗಾದ ವೈದ್ಯೆ.. ಸ್ವಪ್ನ ಅವರು ಆ್ಯಕ್ಸಿಸ್ ಬ್ಯಾಂಕ್ ನಲ್ಲಿ ಎಸ್ ಬಿ ಖಾತೆಯನ್ನು ಹೊಂದಿದ್ದು ಒಂದು ಡೆಬಿಟ್ ಕಾರ್ಡ್ ಎರಡು ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದರು. ಏ. 25 ರಂದು ಅವರ ಮೊಬೈಲ್ ಗೆ ಅಪರಿಚಿತ ವ್ಯಕ್ತಿಗಳು ಕರೆ ಮಾಡುತ್ತಾನೆ. 912262247700, 912262247800, 91917971561100, 912233778888 ಈ ನಂಬರ್ ಗಳಿಂದ ಕಾಲ್ ಮಾಡುತ್ತಾರೆ. ನಾವು ಆಕ್ಸಿಸ್ ಕ್ರೆಡಿಟ್ ಕಾರ್ಡ್ ಡಿಬಿಟ್ ಕಾರ್ಡ್ ಅಧಿಕಾರಿಗಳೆಂದು ಪರಿಚಯ ಮಾಡಿಕೊಂಡು ನಿಮ್ಮ ಹೊಸ ಕಾರ್ಡ್ ಆಕ್ಟಿವ್ ಮಾಡಬೇಕಿದೆ ಎಂದು ತಿಳಿಸಿದ್ದಾರೆ.
ತಕ್ಷಣ ವೈದ್ಯೆ ಸ್ವಪ್ನ ಅವರು ಒಂದು ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ನಂಬರ್ ಗಳನ್ನು ಅವರಿಗೆ ನೀಡಿದ್ದಾರೆ. ನಂತರ ನಾನು ಹೇಳಿದಂತೆ ಮಾಡಿ ಎಂದು ವೈದ್ಯರ ಮೊಬೈಲ್ ಗೆ ANY DESK APP ಎನಿ ಡೆಸ್ಕ್ ಆಪ್ ಇನ್ಸಟಾಲ್ ಮಾಡಿದ್ದಾರೆ. ಆ ಸಂದರ್ಭದಲ್ಲಿ ಬಂದ ಓಟಿಪಿಯನ್ನು ಪಡೆದುಕೊಂಡು ಕ್ರೆಡಿಟ್ ಕಾರ್ಡ್ ಆಕ್ಟೀವ್ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
HEAVY RAINFALL ಹಾಸನ ಶಾಲೆಗಳಿಗೆ ರಜೆ ಘೋಷಿಸಿದ ಜಿಲ್ಲಾಧಿಕಾರಿ
ನಂತರ ದಿನಾಂಕ ಏಪ್ರೀಲ್ 28 ರಂದು ಒಂದು ಕ್ರೆಡಿಟ್ ಕಾರ್ಡ್ ನಿಂದ 73063 ಹಣ, ಮತ್ತೊಂದು ಕ್ರೆಡಿಟ್ ಕಾರ್ಡ್ ನಿಂದ 49,999 ಹಣ ಕಡಿತವಾದ ಬಗ್ಗೆ ವೈದ್ಯರ ಮೊಬೈಲ್ ನಂಬರ್ ಗೆ ಮೇಸೆಜ್ ಬಂದಿದೆ. ನಂತರ ಏಪ್ರೀಲ್ 29 ರಂದು ಒಂದು ಬಾರಿ 24,745, ಇನ್ನೊಂದು ಬಾರಿ 24,745, ಮತ್ತೇ 20200 ರೂಪಾಯಿ ಕಡಿತವಾಗಿರುವ ಬಗ್ಗೆ ಮೇಸಜ್ ಗಳು ಬಂದಿವೆ.
ಈ ಬಗ್ಗೆ ಆಕ್ಸಿನ್ ಬ್ಯಾಂಕ್ ಗೆ ಕಾಲ್ ಮಾಡಿದ ವೈದ್ಯರು ಹಣ ಕಟ್ ಆದ ಮೇಸಜ್ ಗಳು ಬಂದಿವೆ ಎಂದಿದ್ದಾರೆ. ತಕ್ಷಣ ANY DESK APP ಅನ್ ಇನ್ಸ್ ಟಾಲ್ ಮಾಡಲು ತಿಳಿಸಿ ಕಾರ್ಡ್ ಬ್ಲಾಕ್ ಮಾಡಲು ತಿಳಿಸಿದ್ದಾರೆ. ಅದರಂತೆ ವೈದ್ಯರು ಆಪ್ ಅನ್ ಇನ್ಸಟಾಲ್ ಮಾಡಿ ಕಾರ್ಡ್ ಗಳನ್ನು ಬ್ಲಾಕ್ ಮಾಡಿ ದಾವಣಗೆರೆ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Ballari ಗೋವಿನ ಅಂತ್ಯಸಂಸ್ಕಾರಕ್ಕೆ ಸಾವಿರಾರು ಮಂದಿ, ಕಣ್ಣೀರಾದ ಜನತೆ
ಮೊಬೈಲ್ ನಲ್ಲಿ ಎನಿ ಡೆಸ್ಕ್ ಆ್ಯಪ್ ಇನ್ ಸ್ಟಾಲ್ ಮಾಡಿಸಿ, ಕ್ರೆಡಿಟ್ ಕಾರ್ಡ್ ಪಾಸ್ ವರ್ಡ್ ಪಡೆದುಕೊಂಡು ಎರಡು ಕಾರ್ಡ್ ಗಳಿಂದ 5 ಬಾರಿ ಹಣ ಒಟ್ಟು 1.92 ಲಕ್ಷ ಹಣ ವರ್ಗಾವಣೆಯಾಗಿದೆ. ಆನ್ ಲೈನ್ ವಂಚಕರ ವಿರುದ್ಧ ಕೇಸ್ ನಂಬರ್ 41/2022, 66 ಸಿ ಅಂಡ್ ಡಿ ಐ ಟಿ ಆಕ್ಟ್ 2000, 419, 420 ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿದ್ದು ಆರೋಪಿಗಳ ಪತ್ತೆಗೆ ಪೋಲೀಸರು ಬಲೆ ಬೀಸಿದ್ದಾರೆ.
ಹೊಸ ಹೊಸ ರೀತಿಯಲ್ಲಿ ಆನ್ ಲೈನ್ ವಂಚನೆ ಪ್ರಕರಣಗಳು ನಡೆಯುತ್ತಿದ್ದು ಬ್ಯಾಂಕ್ ಅಕೌಂಟ್ ಗಳಲ್ಲಿ ಹಣವಿಡುವುದಕ್ಕೆ ಸಾರ್ವಜನಿಕರು ಭಯಪಡುವಂತಾಗಿದೆ. ಒಂದಿಲ್ಲೊಂದು ರೀತಿಯಲ್ಲಿ ಅಮಾಯಕರನ್ನು ವಂಚಿಸುವ ಆನ್ ಲೈನ್ ಜಾಲದ ಬಗ್ಗೆ ಬ್ಯಾಂಕ್ ಗಳು , ಪೊಲೀಸರು ಎಚ್ಚರಿಸುತ್ತಲೇ ಇದ್ದಾರೆ. ಸಾರ್ವಜನಿಕ ಗ್ರಾಹಕರು ಯಾವುದೇ ಕಾರಣಕ್ಕು ಓಟಿಪಿಯನ್ನು ಶೇರ್ ಮಾಡಬೇಡಿ ಎಂದ್ರು ತಿಳಿಸಿದ್ರು ಆನ್ ಲೈನ್ ವಂಚಕರ ಮಾಯೆಗೆ ಸಿಲುಕದವರೇ ಇಲ್ಲದಂತಾಗಿದೆ.