Asianet Suvarna News Asianet Suvarna News

ಸೇವಾ ನ್ಯೂನತೆ; ನಗರದ ಇಬ್ಬರು ವೈದ್ಯರಿಗೆ 8 ಲಕ್ಷ ರು. ದಂಡ!

ವೈದ್ಯಕೀಯ ನಿರ್ಲಕ್ಷ್ಯ ಹಾಗೂ ಸೇವಾ ನ್ಯೂನತೆ ಎಸಗಿದ ಮೈಸೂರಿನ ವಿಕ್ರಮ… ಜ್ಯೋತ್‌ ಆಸ್ಪತ್ರೆ ಹಾಗೂ ವಿಕ್ರಮ… ಹಾಸ್ಪಿಟಲ… (ಪ್ರೈವೇಚ್‌) ಲಿಮಿಟೆಡ್‌ನ ವೈದ್ಯರಾದ ಡಾ. ರಾಜ…ಕುಮಾರ್‌ ವಾಧ್ವಾ ಮತ್ತು ಡಾ.ಎನ್‌. ರಾಘವೇಂದ್ರ ಅವರಿಗೆ 8 ಲಕ್ಷ ರು. ದಂಡ ವಿಧಿಸಿ ಮೈಸೂರು ಜಿಲ್ಲೆಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಆದೇಶಿಸಿದೆ.

service defect 8 lakhs Penalty  for two doctors in the city. at mysuru rav
Author
First Published Jan 17, 2023, 12:26 PM IST

ಮೈಸೂರು (ಜ.17) : ವೈದ್ಯಕೀಯ ನಿರ್ಲಕ್ಷ್ಯ ಹಾಗೂ ಸೇವಾ ನ್ಯೂನತೆ ಎಸಗಿದ ಮೈಸೂರಿನ ವಿಕ್ರಮ… ಜ್ಯೋತ್‌ ಆಸ್ಪತ್ರೆ ಹಾಗೂ ವಿಕ್ರಮ… ಹಾಸ್ಪಿಟಲ… (ಪ್ರೈವೇಚ್‌) ಲಿಮಿಟೆಡ್‌ನ ವೈದ್ಯರಾದ ಡಾ. ರಾಜ…ಕುಮಾರ್‌ ವಾಧ್ವಾ ಮತ್ತು ಡಾ.ಎನ್‌. ರಾಘವೇಂದ್ರ ಅವರಿಗೆ 8 ಲಕ್ಷ ರು. ದಂಡ ವಿಧಿಸಿ ಮೈಸೂರು ಜಿಲ್ಲೆಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಆದೇಶಿಸಿದೆ. ವೈದ್ಯಕೀಯ ನಿರ್ಲಕ್ಷ ಎಸಗಿ ಮೈಸೂರಿನ ಕೆ.ಶಂಕರ ನಾರಾಯಣ ಅವರ ಸಾವಿಗೆ ಕಾರಣವಾದ ಆರೋಪದ ಮೇರೆಗೆ ಈ ತೀರ್ಪು ನೀಡಲಾಗಿದೆ.

ಪ್ರಕರಣದ ವಿವರ: ಮೈಸೂರಿನ ಕುವೆಂಪು ನಗರದ ನಿವಾಸಿ ಎಚ್‌.ಜೆ. ವನಜಾಕ್ಷಿಯವರ ಪತಿ ಕೆ.ಶಂಕರ ನಾರಾಯಣ ಅವರು 2015 ರಲ್ಲಿ ಅನಾರೋಗ್ಯದ ಕಾರಣ ಯಾದವಗಿರಿಯಲ್ಲಿರುವ ವಿಕ್ರಮ… ಜ್ಯೋತ್‌ ಆಸ್ಪತ್ರೆಯಲ್ಲಿ ದಾಖಲಾಗಿ ಮೂರು ದಿನಗಳು ಚಿಕಿತ್ಸೆ ಪಡೆದಿದ್ದರು.ಆ ಸಮಯದಲ್ಲಿ ಡಾ.ರಾಜ… ಕುಮಾರ್‌ ವಾಧ್ವಾ ಅವರು ಶಂಕರ ನಾರಾಯಣ ಅವರಿಗೆ ಚಿಕಿತ್ಸೆ ನೀಡಿದ್ದಲ್ಲದೆ ಮಾತ್ರೆಯನ್ನು ಸೇವಿಸುವಂತೆ ಸಲಹೆ ನೀಡಿದ್ದರು.ಅಗ ಶಂಕರ ನಾರಾಯಣ ಮಧುಮೇಹದಿಂದ ಬಳಲುತ್ತಿದ್ದರೂ ಸಹ ಸೂಕ್ತ ವ್ಯಾಯಾಮ ಮಾಡುತ್ತಿದ್ದರಿಂದ ಮಧುಮೇಹವು ನಿಯಂತ್ರಣದಲ್ಲಿತ್ತು.

ಬೆಂಗಳೂರಿನಲ್ಲಿ 'ಆಪರೇಷನ್‌' ಆಗಿದ್ದ ಯುವಕ ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ

ತದನಂತರ 28.07.2015 ರಂದು ಹೊಟ್ಟೆನೋವಿನ ಕಾರಣ ಶಂಕರ ನಾರಾಯಣ ಅವರು ಹೆಚ್ಚಿನ ಚಿಕಿತ್ಸೆಗಾಗಿ ವಿಕ್ರಮ… ಜ್ಯೋತ… ಆಸ್ಪತ್ರೆಗೆ ದಾಖಲಾದರು.ಆ ಸಮಯದಲ್ಲಿ ಆಸ್ಪತ್ರೆಯ ಖರ್ಚು ಅಂದಾಜು 32 ಸಾವಿರ ಆಗಬಹುದೆಂದು ಆಸ್ಪತ್ರೆಯ ಸಿಬ್ಬಂದಿ ಹೇಳಿದ್ದರು.

30.07.2015 ರಂದು ಎಂಐಆರ್‌ ಸ್ಕ್ಯಾ‌ನ್‌ ಮಾಡಿಸಲಾಗಿ ಯಾವುದೇ ಸಮಸ್ಯೆ ಕಂಡುಬರಲಿಲ್ಲ. ವಿಕ್ರಮ… ಜ್ಯೋತ್‌ ಆಸ್ಪತ್ರೆಯ ವೈದ್ಯರು ಶಂಕರ ನಾರಾಯಣ ಅವರಿಗೆ ಚಿಕಿತ್ಸೆ ನೀಡುವಂತೆ ಡಾ.ಎನ್‌.ರಾಘವೇಂದ್ರ ಅವರಿಗೆ ಸೂಚಿಸಿದರು. ಶಂಕರ ನಾರಾಯಣ ಅವರು ಕ್ಯಾನ್ಸರ್‌ ಅಲ್ಸರ್‌ ಅಥವಾ ಟಿ ಬಿ ಖಾಯಿಲೆಯಿಂದ ಬಳಲುತ್ತಿರಬಹುದೆಂಬ ಶಂಕೆಯಿಂದ ಅವರ ಪತ್ನಿ ವನಜಾಕ್ಷಿಯವರ ಗಮನಕ್ಕೆ ತಾರದೇ 1.08.2015ರಂದು ಶಂಕರ ನಾರಾಯಣ ಅವರಿಗೆ ಲೆಪರಾಸ್ಕೋಪಿಕ್‌ ಶಸ್ತ್ರಚಿಕಿತ್ಸೆ ನಡೆಸಿದರು.

ಶಸ್ತ್ರಚಿಕಿತ್ಸೆ ಸಮಯದಲ್ಲಿ ಸೂಕ್ತ ಎಚ್ಚರಿಕೆ ವಹಿಸದೇ ನಿರ್ಲಕ್ಷ್ಯ ತೋರಿದ್ದರಿಂದ ರೋಗಿಯ ಹೊಟ್ಟೆಯಲ್ಲಿ ಮಲ-ಮೂತ್ರಾದಿಗಳು ತುಂಬಿಕೊಂಡು ರೋಗಿಯ ಸ್ಥಿತಿ ಗಂಭೀರವಾಗಿ ರೋಗಿಯು ಪ್ರಜ್ಞಾಹೀನ ಸ್ಥಿತಿಗೆ ಹೋಗುವಂತಾಯಿತು. ಅವರ ವಿವಿಧ ಅಂಗಗಳ ವೈಫಲ್ಯ ಉಂಟಾಗಿ ರೋಗಿಯ ಆರೋಗ್ಯ ತೀರಾ ಹದಗೆಟ್ಟಿತು. ವೈದ್ಯರ ಸಲಹೆಯಂತೆ ಡಾ.ರಾಜ… ಕುಮಾರ್‌ ವಾಧ್ವಾ ಅವರ ಮಾಲೀಕತ್ವದ ಅಕ್ಯೂರಾ ಡಯೋಗ್ನಾಸ್ಟಿಕ್‌ ಸೆಂಟರಿನಲ್ಲಿ ಕ್ಯಾನ್ಸರ್‌ ಪರೀಕ್ಷೆ(ಬಯಾಪ್ಸಿ) ನಡೆಸಲಾಯಿತು. 06.08.2015 ರ ಮಧ್ಯರಾತ್ರಿ ಡಾ.ಎನ್‌. ರಾಘವೇಂದ್ರ ಅವರು ರೋಗಿಗೆ ಎರಡನೇ ಬಾರಿ ಶಸ್ತ್ರಚಿಕಿತ್ಸೆ ನಡೆಸಿದರೂ ಸಹ ರೋಗಿಯು ಚೇತರಿಸಿಕೊಳ್ಳುವ ಬದಲಾಗಿ ಉಸಿರಾಟದ ತೊಂದರೆಯಿಂದ ಬಳಲುವಂತಾಯಿತು. ತಾತ್ಕಾಲಿಕ ವೆಂಟಿಲೇಟರ್‌ ಅಳವಡಿಸಿ ತೀವ್ರನಿಗಾ ಘಟಕಕ್ಕೆ ರೋಗಿಯನ್ನು ದಾಖಲಿಸಲಾಯಿತು.ರೋಗಿಯು 14 ದಿನ ಪ್ರಜ್ಞಾಹೀನ ಸ್ಥಿತಿ ತಲುಪಲಾಗಿ

ಮೂರು ತಿಂಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಇರುವಂತಾಯಿತು.ಆಗಲೂ ಸಹ ಆಸ್ಪತ್ರೆಯ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದರು.ಆ ಸಮಯದಲ್ಲಿ ಆಸ್ಪತ್ರೆಯವರು 25,000 ರೂ.ಪಾವತಿಸಿಕೊಳ್ಳುವ ಜೊತೆಗೆ ವಿಮಾ ಕಂಪನಿಯಿಂದ 6 ಲಕ್ಷ ರು.ಗಳನ್ನೂ ಪಡೆದಿದ್ದರು. ಆ ಮೂಲಕ ಆಸ್ಪತ್ರೆಯವರು ಒಟ್ಟು 25 ಲಕ್ಷ ರೂಪಾಯಿಗಳನ್ನು ಶಂಕರ ನಾರಾಯಣರ ಪತ್ನಿ ವನಜಾಕ್ಷಿ ಅವರ ಕಡೆಯಿಂದ ಪಡೆದಿದ್ದರು. ಅದಲ್ಲದೇ ಡಾ.ಲೋಕೇಶ್‌ ಮತ್ತು ಡಾ.ಶ್ರೀಧರ್‌ ಅವರಿಗೆ ತಲಾ 5 ಸಾವಿರ ರುಪಾಯಿಗಳನ್ನು ನೀಡಲಾಗಿತ್ತು.

ಹೆಚ್ಚಿನ ಮೊತ್ತವನ್ನು ಪಾವತಿಸಲು ಸಾಧ್ಯವಾಗುವುದಿಲ್ಲ ಎಂದು ವನಜಾಕ್ಷಿ ಅವರು ತನ್ನ ಅಸಹಾಯಕತೆಯನ್ನು ವ್ಯಕ್ತಪಡಿಸಿದಾಗ ಡಾ.ಎನ್‌. ರಾಘವೇಂದ್ರ ಅವರು ಎಲ್ಲಾ ನಿಮ್ಮ ಹಣೆಬರಹ, ರೋಗಿಯನ್ನು ಕರೆದುಕೊಂಡು ಹೋಗಿ, ಇನ್ನು ಉಳಿಯುವುದು ಕಷ್ಟಎಂದು ಹೇಳಿ ಕೇಸ್‌ ಹಿಸ್ಟರಿಯನ್ನೂ ನೀಡದೇ ರೋಗಿಯನ್ನು 26.11.2015 ರಂದು ಡಿಸ್ಚಾಜ್‌ರ್‍ ಮಾಡಿದರು. 9.12.2015ರಂದು ಪುನಃ ರೋಗಿಯು ವಿಕ್ರಮ… ಜ್ಯೋತ್‌ ಆಸ್ಪತ್ರೆಗೆ ದಾಖಲಾಗಿ ಎರಡು ದಿನ ಚಿಕಿತ್ಸೆ ಪಡೆದು ಚಿಕಿತ್ಸೆ ಫಲಕಾರಿಯಾಗದೇ ನಂತರ ಅಪೋಲೋ ಆಸ್ಪತ್ರೆಗೆ ದಾಖಲಾಗಿ 18.12.2015 ರಂದು ಮೃತರಾದರು.

ಶಂಕರ ನಾರಾಯಣ್‌ ಚಿಕಿತ್ಸೆ ಪಡೆಯುವ ಸಮಯದಲ್ಲಿ ವನಜಾಕ್ಷಿ ಅವರ ತಾಯಿ ಸಣ್ಣಮ್ಮ, ತಂಗಿ ಗಿರಿಜಾ ಅನಾರೋಗ್ಯದಿಂದ ಮೃತಪಟ್ಟಿದ್ದರು.ಅಲ್ಲದೆ ಈ ಪ್ರಕರಣ ವಿಚಾರಣೆಯ ಹಂತದಲ್ಲಿರುವಾಗ 21.5.2021ರಂದು ಶಂಕರ ನಾರಾಯಣ ಅವರ ಪತ್ನಿ ವನಜಾಕ್ಷಿಯವರೂ ಸಹ ಮೃತರಾದರು.

ಪ್ರಕರಣದ ವಿಚಾರಣೆ ನಡೆಸಿದ ಮೈಸೂರು ಜಿಲ್ಲಾ ಗ್ರಾಹಕರ ಆಯೋಗವು ವಿಕ್ರಮ… ಜ್ಯೋತ್‌ ಆಸ್ಪತ್ರೆ ಹಾಗೂ ವೈದ್ಯರಾದ ಡಾ.ರಾಜ… ಕುಮಾರ್‌ ವಾಧ್ವಾ ಮತ್ತು ಡಾ.ಎನ… ರಾಘವೇಂದ್ರ ಅವರು ವೈದ್ಯಕೀಯ ನಿರ್ಲಕ್ಷ್ಯತೆ ಹಾಗೂ ಸೇವಾ ನ್ಯೂನತೆ ಎಸಗಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಶಿವಾನಿ ಶಂಕರ್‌ ಗೆ 8 ಲಕ್ಷ ರೂಪಾಯಿಗಳ ಪರಿಹಾರ/ನಷ್ಟಪರಿಹಾರವನ್ನು ಎರಡು ತಿಂಗಳೊಳಗೆ ವಾರ್ಷಿಕ ಶೇ.6 ಬಡ್ಡಿಯೊಂದಿಗೆ ಪಾವತಿಸುವಂತೆ ಜ.11 ರಂದು ಆದೇಶಿಸುವುದರ ಜೊತೆಗೆ ಪ್ರಕರಣದ ಖರ್ಚಿನ ಬಾಬ್ತು 5000 ರೂಪಾಯಿಗಳನ್ನು ಎರಡು ತಿಂಗಳೊಳಗೆ ಭರಿಸುವಂತೆಯೂ ಆದೇಶಿಸಿದೆ. ಮೃತ ಶಂಕರ ನಾರಾಯ… ಅವರ ಪತ್ನಿ ಮತ್ತು ಮಗಳ ಪರವಾಗಿ ವಕೀಲ ಕೆ.ಈಶ್ವರ ಭಟ್‌ ವಕಾಲತ್ತು ವಹಿಸಿದ್ದರು.

Mandya: ಖಾಸಗಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಬಲಿ: ಮಾನವೀಯತೆ ಮರೆತು ಶವ ಹೊರಗೆಸೆದ ಸಿಬ್ಬಂದಿ

ಪತ್ನಿ, ಪುತ್ರಿಯಿಂದ ದೂರು

ಶಂಕರ ನಾರಾಯಣ್‌ ಅವರ ಸಾವಿಗೆ ವಿಕ್ರಮ… ಜ್ಯೋತ್‌ ಆಸ್ಪತ್ರೆ ಹಾಗೂ ಅದರ ವೈದ್ಯರಾದ ಡಾ.ರಾಜ… ಕುಮಾರ್‌ ವಾಧ್ವಾ ಮತ್ತು ಡಾ.ಎನ್‌. ರಾಘವೇಂದ್ರ ಅವರ ವೈದ್ಯಕೀಯ ನಿರ್ಲಕ್ಷ್ಯ ಹಾಗೂ ಸೇವಾ ನ್ಯೂನತೆಯೇ ಕಾರಣ ಎಂದು ಆರೋಪಿಸಿ ಮೃತರ ಪತ್ನಿ ಎಚ್‌.ಜೆ. ವನಜಾಕ್ಷಿ ಮತ್ತು ಅವರ ಮಗಳಾದ 11 ವರ್ಷ ವಯಸ್ಸಿನ ಶಿವಾನಿ ಶಂಕರ್‌ ಅವರು ಪರಿಹಾರ ಕೋರಿ 14.12.2017 ರಂದು ಮೈಸೂರು ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ನೀಡಿದ್ದರು.

Follow Us:
Download App:
  • android
  • ios