ಮಂಗಳೂರು, [ಜೂ.30]: ಹಿರಿಯ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಅವರು ಲೋಕಸಭಾ ಚುನಾವಣೆ ವೇಳೆ ಮಾಡಿದ್ದ ಶಪಥವನ್ನು ಮುರಿದಿದ್ದಾರೆ.
 
ಲೋಕಸಭಾ ಚುನಾವಣೆ ವೇಳೆ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಗೆಲ್ಲದಿದ್ದರೆ ಕುದ್ರೋಳಿ ದೇವಾಲಯಕ್ಕೇ ಹೋಗಲ್ಲ ಎಂದು ಜನಾರ್ದನ ಪೂಜಾರಿ ಶಪಥ ಮಾಡಿದ್ದರು. ವಿಪರ್ಯಾಸ ಅಂದ್ರೆ ಆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ನಳೀನ್ ಕುಮಾರ್ ಕಟೀಲ್ ಗೆಲುವು ಸಾಧಿಸಿದ್ದರು.

 Next ಮೋದಿಯೇ ಪ್ರಧಾನಿ ಎಂದಿದ್ದ 'ಪೂಜಾರಿ' ಕಾಂಗ್ರೆಸ್ ಗೆಲ್ಲಿಸಲು ಮಹಾ ಶಪಥ..!

ಆದ್ರೆ, ಜನಾರ್ದನ ಪೂಜಾರಿ ಇಂದು [ಭಾನುವಾರ] ಕುದ್ರೋಳಿ ದೇಗುವ ಪ್ರವೇಶಿಸಿ ತಾವು ಮಾಡಿದ್ದ ಶಪಥವನ್ನು ಮುರಿದಿದ್ದಾರೆ. ಇದಕ್ಕೆ ಪ್ರತಿಯಾಗಿ ದೇವರ ಬಳಿ ಕ್ಷಮೆ ಯಾಚಿಸಿದ್ದಾರೆ. ನಾನು ಹಾಗೆ ಹೇಳಬಾರದಿತ್ತು. ಬಹುದೊಡ್ಡ ತಪ್ಪು ಮಾಡಿದೆ. ದೇವರು ಕ್ಷಮಿಸಬೇಕು ಎಂದು ದೇವರ ಬಳಿ ಕೇಳಿಕೊಂಡು ಪೂಜೆ ನೆರವೇರಿಸಿದರು. 

ಜನಾರ್ದನ ಪೂಜಾರಿ ಶಪಥ ಮುರಿದಿರುವುದು ಇದೇನು ಮೊದಲ ಸಲ ಅಲ್ಲ. ಈ ಶಪಥದಂತೆಯೇ ಹಿಂದೆಯೂ ಅನೇಕ ಬಾರಿ ಬೇರೆ-ಬೇರೆ ವಿಚಾರಗಳಿಗೆ ಮಾತು ಕೊಟ್ಟು ತಪ್ಪಿದ ಅನೇಕ ಉದಾಹರಣೆಗಳು ಸಹ ಉಂಟು.