ಮಂಗಳೂರು, (ಮಾ.25):  ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಗೆಲ್ಲದಿದ್ದರೆ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನಕ್ಕೆ ಹೋಗುವುದನ್ನೇ ಸ್ಟಾಪ್ ಮಾಡುತ್ತೇನೆ ಎಂದು ಕಾಂಗ್ರೆಸ್ ನಾಯಕ ಬಿ.ಜನಾರ್ದನ ಪೂಜಾರಿ ಶಪಥ ಮಾಡಿದ್ದಾರೆ.

ಮಂಗಳೂರಿನ ಪುರಭವನದಲ್ಲಿ ಸೋಮವಾರ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಪೂಜಾರಿ,  'ಇಷ್ಟರ ತನಕ ಉಳ್ಳಾಲ‌ ದರ್ಗಾ, ಚರ್ಚ್‌ಗೂ ಹೋಗುತ್ತಿದ್ದೆ. ಮಿಥುನ್ ಗೆಲ್ಲದಿದ್ದರೆ ಅಲ್ಲಿಗೆ ಹೋಗುವುದನ್ನೂ ನಿಲ್ಲಿಸುತ್ತೇನೆ' ಎಂದು ಹೇಳಿ ಆಶ್ಚರ್ಯ ಮೂಡಿಸಿದರು.

ಜನಾರ್ದನ ಪೂಜಾರಿ ಭೇಟಿಯಾದ ಬಿಜೆಪಿ ನಾಯಕ

ದೇವರು ಕನಸಲ್ಲಿ ಬಂದು ಗೆಲ್ಲಿಸೋದಾಗಿ ಹೇಳಿದ್ದಾನೆ. ಗೆಲ್ಲಿಸಿದ್ದರೆ ನಾನು ಕುದ್ರೋಳಿ ದೇವಸ್ಥಾನಕ್ಕೇ ಹೋಗಲ್ಲ ಎಂದಿರುವುದು ಜಿಲ್ಲೆಯಲ್ಲಿ ಭಾರಿ  ಸಂಚಲನಕ್ಕೆ ಕಾರಣವಾಗಿದೆ. 

ನಿನ್ನೆಯಷ್ಟೇ (ಭಾನುವಾರ) ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಅವರು ಕುದ್ರೋಳಿ ದೇವಸ್ಥಾನಕ್ಕೆ ಆಗಮಿಸಿದ್ದಾಗ, ಅವರಿಗೆ ಆಶೀರ್ವಾದ ಮಾಡಿದ್ದ , ಇನ್ನೆರಡು ಚುನಾವಣೆಗಳಲ್ಲಿ ನರೇಂದ್ರ ಮೋದಿಯೇ ಪ್ರಧಾನಿಯಾಗುತ್ತಾರೆ ಎಂದು ಹೇಳಿದ್ದರು.