ಮೈಸೂರು(ಮೇ 26): ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ(ಮೈಮುಲ್) ನೇಮಕಾತಿಗೆ ಸಂಬಂಧಿಸಿದಂತೆ ನಡೆದಿರುವ ಅಕ್ರಮ ನೋಡಿ ಜಿಲ್ಲೆಯ ಶಾಸಕನಾಗಿ ಧ್ವನಿ ಎತ್ತಿದ್ದೇನೆ. ಈ ಹೋರಾಟವನ್ನು ಯಾವ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಮಾಜಿ ಸಚಿವರೂ ಆದ ಸಾ.ರಾ. ಮಹೇಶ್‌ ಹೇಳಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಹೇಳಿದಂತೆ ನೇಮಕಾತಿ ಮಾಡಿ ಎಂದು ಹೇಳಿಲ್ಲ. ಈ ಪ್ರಕ್ರಿಯೆ ನಿಲ್ಲಿಸಿ ಕಾನೂನು ಪ್ರಕಾರ ಪಾರದರ್ಶಕವಾಗಿ ಮಾಡಿ ಎಂದು ಹೇಳಿದ್ದೆ. ನಾನು ಯಾರನ್ನು ಬ್ಲಾಕ್‌ಮೇಲ್‌ ಮಾಡುತ್ತಿಲ್ಲ. ಅವರು ಸಚಿವರು, ಎಚ್ಚರಿಕೆ, ಬೆದರಿಕೆ ತಂತ್ರದ ಬಗ್ಗೆ ಅವರಿಗೆ ಗೊತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಅವರಿಗೆ ತಿರುಗೇಟು ನೀಡಿದರು.

ರಾಜ್ಯದಲ್ಲಿ ಕೊರೋನಾರಹಿತ ಏಕೈಕ ಜಿಲ್ಲೆ, ಸೋಷಿಯಲ್ ಮೀಡಿಯಾ ಸ್ಟೇಟಸ್‌ಗಳು ವೈರಲ್

ನೇಮಕಾತಿ ಕುರಿತು ನಡೆಯುತ್ತಿರುವ ತನಿಖೆಯ ರೀತಿ ಸರಿಯಾಗಿಲ್ಲ. ನಿಬಂಧಕರ ಕೈಯಲ್ಲಿ ತನಿಖೆ ಮಾಡಿಸಿದರೆ ಸತ್ಯ ಹೊರಗೆ ಬರುವುದಿಲ್ಲ. ಸಚಿವರ ಹೇಳಿಕೆಯಲ್ಲಿ ಗೊಂದಲವಿದೆ. ಒಂದು ಕಡೆ ತನಿಖೆ ನಡೆಯುತ್ತಿದೆ ಎನ್ನುತ್ತಾರೆ, ಮತ್ತೊಂದು ಕಡೆ ನೇಮಕಾತಿ ಪ್ರಕ್ರಿಯೆ ಮುಂದುವರಿಸುತ್ತೇವೆ ಎಂದು ಹೇಳುತ್ತಾರೆ ಎಂದು ಅವರು ಟೀಕಿಸಿದರು.

ನೀವು ಒತ್ತಡಕ್ಕೆ ಮಣಿಯುತ್ತಿದ್ದೀರಾ? ಯಾರನ್ನು ಸಮಾಧಾನ ಮಾಡಲು ಹೊರಟಿದ್ದೀರಿ. ಸಹಕಾರಿ ಕ್ಷೇತ್ರ ಉಳಿಯಬೇಕಿದ್ದರೆ ನೇಮಕಾತಿ ಪಾರದರ್ಶಕವಾಗಿರಲಿ. ಮೈಮುಲ್ ಆಡಳಿತ ಮಂಡಳಿ ಅವಧಿಯು 2020 ಸೆಪ್ಟೆಂಬರ್‌ 13ಕ್ಕೆ ಅಂತ್ಯಗೊಳ್ಳಲಿದೆ. ಈ ಸಂಬಂಧ ಚುನಾವಣಾಧಿಕಾರಿ ನೇಮಿಸಲು ಜಿಲ್ಲಾಧಿಕಾರಿ ಅಭಿರಾಮ… ಜಿ. ಶಂಕರ್‌ ಅವರು ಸಹಕಾರ ಸಂಘಗಳ ಉಪನಿಬಂಧಕರಿಗೆ ಪತ್ರ ಬರೆದಿದ್ದಾರೆ. ಆಡಳಿತಾವಧಿ ಮುಗಿಯುವ ಕೊನೆಯ ಮೂರು ತಿಂಗಳು ನೇಮಕಾತಿ ಪ್ರಕ್ರಿಯೆ ಮಾಡುವಂತಿಲ್ಲ. ಕರ್ನಾಟಕ ಸಹಕಾರ ಸಂಘಗಳ ನಿಯಮ 1960ರ ಅನ್ವಯ ಇದು ಸಾಧ್ಯವಿಲ್ಲ. ನಾವು ಮಾಡಿದ್ದೇ ಸರಿ ಅನ್ನುವುದಾದರೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಹೋರಾಟ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

ಸರಿಯಾಗಿದ್ದರೆ ಜಿಟಿಡಿ ಹೇಳಲಿ:

ಮೈಮುಲ್ ನೇಮಕಾತಿ ವಿಷಯದಲ್ಲಿ ಮಾಜಿ ಸಚಿವ ಜಿ.ಟಿ. ದೇವೇಗೌಡರು ಎಲ್ಲವೂ ಪಾರದರ್ಶಕವಾಗಿದೆ ಎಂದು ಹೇಳಲಿ. ಎಲ್ಲ ನೇಮಕಾತಿ ಅರ್ಹರಿಗೆ ಸಿಗುತ್ತಿದೆ ಅಂತಾ ಹೇಳಲಿ. ಸಾರ್ವಜನಿಕವಾಗಿ ಅವರು ಮೈಮುಲ…

ಆಯ್ಕೆ ಪ್ರಕ್ರಿಯೆ ಸರಿ ಇದೆ ಎಂದು ಹೇಳಲಿ. ಅವರು ನಮ್ಮ ನಾಯಕರು ಅವರು ಹೇಳಿದನ್ನು ಕುಮಾರಸ್ವಾಮಿ, ರೇವಣ್ಣ ಅವರಿಗೆ ತಿಳಿಸುತ್ತೇನೆ ಎಂದು ಅವರು ಸವಾಲು ಹಾಕಿದರು.