Asianet Suvarna News Asianet Suvarna News

ಹಗುರವಾಗಿ ಮಾತಾಡಿದ್ರೆ ಹಲ್ಲು ಉದುರಿಸ್ತೀವಿ: ಅಧಿಕಾರಿಗಳ ವಿರುದ್ಧ ಶಾಸಕ ತೇಲ್ಕೂರ್‌ ಕೆಂಡಾಮಂಡಲ

ಸಭೆಯಲ್ಲಿ ಸೇಡಂ ಮತಕ್ಷೇತ್ರದಡಿ ಬರುವ ಚಿಂಚೋಳಿ ತಾಲೂಕಿನ ಕೆಲವು ಖಾಸಗಿ ಶಾಲೆಗಳ ಅನುಮತಿ ರದ್ದು ಮಾಡಿರುವ ಶಿಕ್ಷಣ ಇಲಾಖೆ ಅಧಿಕಾರಿಗಳ ಕ್ರಮವನ್ನು ಪ್ರಶ್ನಿಸುತ್ತಲೇ ಕೆಂಡಾಮಂಡಲರಾದ ತೇಲ್ಕೂರ್‌ ಮೊದಲು ಶಿಕ್ಷಣ ಇಲಾಖೆ ಅಧಿಕಾರಿಗಳ ಕಾರ್ಯವೈಖರಿಯನ್ನೇ ಜಾಲಾಡಿದರು. 

Sedam MLA Rajkumar Telkur Slams Government Officials grg
Author
First Published Jan 8, 2023, 10:00 PM IST

ಕಲಬುರಗಿ(ಜ.08):  ನಮ್ಮ ಬಗ್ಗೆ ಹಗುರವಾಗಿ ಮಾತಾಡ್ತೀರಾ? ಹಲ್ಲು ಉದುರಿಸಿ ಬಿಡ್ತೀನಿ ಹುಶಾರ್‌... ಜನರ ಸಣ್ಣ ಪುಟ್ಟ ಕೆಲ್ಸಕ್ಕೆಲ್ಲಾ ಕೈ ಚಾಚಿ ಮಾಮೂಲು ತಗೊಳ್ಳೋರು ನೀವು ಹಣ ಪಡೆದೂ ಕೆಲ್ಸ ಮಾಡ್ಲಿಕ್ಕಿ ಸತಾಯಿಸ್ತೀರಿ. ನಿಮ್ಮಂಥೋರಿಂದ ಸಚಿವರು, ಶಾಸಕರು, ಸಂಸದರೆಲ್ಲಾ ಹಗುರ ಮಾತು ಕೇಳಬೇಕಾ? ನಾವು ಎಲ್ಲಾ ಆಟ ಆಡೀನೆ ಇಲ್ಲಿ ಬಂದೀವಿ, ನೀವು ನಿಮ್ಮ ಕೆಲ್ಸ ಸರಿಯಾಗಿ ಮಾಡಿದ್ರೆ ಜನ ನಮ್ಮ ಹತ್ರ ಯಾಕೆ ಬರ್ತಿದ್ರು? ಮೊದ್ಲು ಜನಪರವಾಗಿರೋದನ್ನ ರೂಢಿಸಿಕೊಳ್ಳಿ, ಇಲ್ಲಾಂದ್ರೆ ನಿಮ್ಮ ಹಲ್ಲು ಆ ಜಾಗದಲ್ಲಿ ಇರೋದಿಲ್ಲ’. ಹೀಗೆ ಅಧಿಕಾರಿಗಳ ವಿರುದ್ಧ ಒಂದೇ ಸವನೇ ಅರ್ಧ ಗಂಟೆಕಾಲ ವಾಗ್ದಾಳಿ ನಡೆಸಿದವರು ಸೇಡಂ ಶಾಸಕ, ಡಿಸಿಸಿ ಬ್ಯಾಂಕ್‌, ಕೆಕೆಆರ್‌ಟಿಸಿ ಅಧ್ಯಕ್ಷ ರಾಜಕುಮಾರ್‌ ಪಾಟೀಲ್‌ ತೇಲ್ಕೂರ್‌.

ಕಲಬುರಗಿ ಮಟ್ಟಿಗೆ ಅಪರೂಪವಾಗಿದ್ದ ಹಾಗೂ ಶನಿವಾರ ಡಿಸಿ ಕಚೇರಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ, ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ, ಡಿಸಿ ಗರುಕರ್‌, ಸಿಇಓ ಗಿರೀಶ ಬದೋಲೆ, ಎಸ್ಪಿ ಇಶಾ ಪಂತ್‌ ಸಮ್ಮುಖಲ್ಲೇ ಶಾಸಕ ತೇಲ್ಕೂರ್‌ ಅಧಿಕಾರಿಗಳು, ಅವರ ಧೋರಣೆಗಳು, ಅವರ ನಡೆ- ನುಡಿ, ಜನಪ್ರತಿನಿಧಿಗಳ ಬಗ್ಗೆ ಅವರಾಡುವ ಹಗುರ ಮಾತುಗಳನ್ನು ಒಂದೊಂದಾಗಿ ಪ್ರಸ್ತಾಪಿಸುತ್ತ ಕೆಂಡ ಕಾರಿದರು.

ಬಿಜೆಪಿಯಿಂದ ಬಿಎಸ್‌ವೈ ಕಡೆಗಣನೆ ವದಂತಿ ನಂಬಬೇಡಿ: ವಿಜಯೇಂದ್ರ

ಸಭೆಯಲ್ಲಿ ಸೇಡಂ ಮತಕ್ಷೇತ್ರದಡಿ ಬರುವ ಚಿಂಚೋಳಿ ತಾಲೂಕಿನ ಕೆಲವು ಖಾಸಗಿ ಶಾಲೆಗಳ ಅನುಮತಿ ರದ್ದು ಮಾಡಿರುವ ಶಿಕ್ಷಣ ಇಲಾಖೆ ಅಧಿಕಾರಿಗಳ ಕ್ರಮವನ್ನು ಪ್ರಶ್ನಿಸುತ್ತಲೇ ಕೆಂಡಾಮಂಡಲರಾದ ತೇಲ್ಕೂರ್‌ ಮೊದಲು ಶಿಕ್ಷಣ ಇಲಾಖೆ ಅಧಿಕಾರಿಗಳ ಕಾರ್ಯವೈಖರಿಯನ್ನೇ ಜಾಲಾಡಿದರು. ಹಾಗೇ ಮುಂದುವರಿದ ವಾಗ್ದಾಳಿಯಲ್ಲಿ ಇತರೆಲ್ಲ ಇಲಾಖೆ ಅಧಿಕಾರಿಗಳತ್ತ ಕೈ ಮಾಡುತ್ತ ಜನಪರವಾಗಿರದಿದ್ರೆ, ಜನನಾಯರ ಬಗ್ಗೆ ಹಗುರ ಮಾತನ್ನಾಡಿದರೆ ಸುಮ್ನೆ ಬಿಡೋದಿಲ್ಲ ಎಂದು ಖಡಕ್ಕಾಗಿ ತಾಕೀತು ಮಾಡಿದರು.

ಶಿಕ್ಷಣ ಇಲಾಖೆಯವರು ಇಂತಹದ್ದನ್ನೆಲ್ಲ ಮುಂದಿಟ್ಟುಕೊಂಡು ಮಾಮೂಲಿ ಪಡೆಯಲು, ಎಂಜಲು ಕಾಸಿಗೆ ಜೊಲ್ಲು ಸುರಿಸುತ್ತೀರಿ? ಇದೆಲ್ಲ ನಡೆಯೋದಿಲ್ಲ. ನಮ್ಮ ಮುಂದೆ ಶಾಲೆಯವರು ಗೋಳು ಹೇಳಿದರೆ ನೀವು ನಮ್ಮ ಬಗ್ಗೆ ಹಗುರ ಮಾತಾಡ್ತೀರಿ, ಯಾರು ಮಾತನಾಡಿದಾರೆ? ಯಾಕೆ ಎಲ್ಲವೂ ಗೊತ್ತಿದೆ. ಇದೆಲ್ಲ ಆಟ ನಡೆಯೋಲ್ಲ. ಇಲೆಕ್ಷನ್‌ದಾಗಿ ಜನರ ಬಳಿ ಹೋಗಿ ನಾವು ಗೆದ್ದು ಬಂದವರು. ನಿಮ್ಮಂತಹವರಿಂದ ಹಗುರ ಮಾತನ್ನು ಕೇಳಲು ಅಲ್ಲ. ನಿಮ್ಮ ಅಂಜಿಕೆ ನಮಗಿಲ್ಲ, ಎಲಿಗೂ ಹೋಗಲೂ ಸಿದ್ಧ. ಮೊದ್ಲು ಜನರ ಕೆಲ್ಸ ಮಾಡಿ, ಇಲ್ಲಾಂದ್ರೆ ನಾವು ಸಮ್ಮನಿರಲ್ಲವೆಂದು ಎಲ್ಲಾ ಇಲಾಖೆ ಅಧಿಕಾರಿಗಳನ್ನುದ್ದೇಶಿಸಿ ಗುಡುಗಿದರು

ಬಿಇಒ ನನ್ನ ಬಗ್ಗೆನೂ ಕೆಟ್ಟದಾಗಿ ಮಾತಾಡ್ಯಾರ

ಸಭೆಯಲ್ಲಿ ಶಾಸಕ ತೇಲ್ಕೂರ್‌ ಪ್ರಸ್ತಾಪಿಸಿದ ವಿಷಯಕ್ಕೆ ಸಹಮತ ವ್ಯಕ್ತಪಡಿಸಿದ ಎಂಎಲ್‌ಸಿ ಶಶಿಲ್‌ ನಮೋಶಿ ಮಕ್ಕಳು, ಶಿಕ್ಷಕರ ಅನುಕೂಲಕ್ಕಾಗಿ ಕೆಲಸಗಳನ್ನು ಮಾಡುವಂತೆ ಅಧಿಕಾರಗಳ ಗಮನಕ್ಕೆ ತಂದರೆ ತಮಗೂ ಜಿಲ್ಲೆಯ ಓರ್ವ ಬಿಇಓ ಹಗುರ ಮಾತನ್ನಾಡಿರುವ ಬಗ್ಗೆ ಹೇಳುತ್ತ ಅಧಿಕಾರಿಗಳ ವಿರುದ್ಧ ಕೆಂಡ ಕಾರಿದರು. ಇವೆಲ್ಲ ನಡೆಯೋದಿಲ್ಲ ನರ ಕೆಲಸ ಮಾಡ್ರಿ, ಇಲ್ಲಾಂದ್ರೆ ಜಾಗ ಕಾಲಿ ಮಾಡಿ. ಇದೆಲ್ಲಾ ಬಿಟ್ಟು ನಮ್ಮನ್ನೇ ನಿಂದಿಸಿದ್ರೆ ನೆಟ್ಟಗಿರಲ್ಲ ಎಂದು ಎಚ್ಚರಿಸಿದರು.

PSI Recruitment Scam: ಜೈಲಿಂದ ಹೊರಬಂದ ಕಿಂಗ್‌ಪಿನ್ ದಿವ್ಯಾ ಹಾಗರಗಿಗೆ ಭವ್ಯ ಸ್ವಾಗತ!

ಡಿಸಿ ಗುರುಕರ್‌ ಮಾತನಾಡುತ್ತ ಚಿಂಚೋಳಿ ಶಾಲೆಗಳ ಪರವಾನಿಗೆ ರದ್ದು ಮಾಡಿರುವ ಪ್ರಕರಣದಲ್ಲಿ ಸಂಪೂರ್ಣ ಮಾಹಿತಿ ಕೊಡಬೇಕು ಎಂದು ಡಿಡಿಪಿಐ ಸಕ್ರೆಪ್ಪಗೌಡರಿಗೆ ಸೂಚಿಸಿದರಲ್ಲದೆ ಪಕ್ಷಪಾತಿತನ ಕಂಡು ಬಂದಲ್ಲಿ ಸಂಬಂಧಿಸಿತ ಬಿಇಓ ವಿರುದ್ಧ ತಾವೇ ಎಫ್‌ಐಆರ್‌ ದಾಖಲಿಸೋದಾಗಿ ಎಚ್ಚರಿಸಿದರು. ಕಾನೂನು ಪಾಲಿಸಬೇಕು, ಅದನ್ನೇ ಮುಂದಿಟ್ಟುಕೊಂಡು ಸತಾಯಿಸೋದನ್ನ, ಪಕ್ಷಪಾತ ಮಾಡೋದನ್ನ ಸಹಿಸಲಾಗದು ಎಂದರು.

ಅನಿರೀಕ್ಷಿತವಾಗಿದ್ದ ಶಾಸಕ ತೇಲ್ಕೂರ್‌ ರೌದ್ರಾವತಾರಕ್ಕೆ ಸಚಿವ ನಿರಾಣಿ, ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ರೇವೂರ್‌, ಶಾಸಕರಾದ ಎಂವೈ ಪಾಟೀಲ್‌, ಸುಭಾಸ ಗುತ್ತೇದಾರ್‌, ಬಿಜಿ ಪಾಟೀಲ್‌, ಎಂಎಲ್ಸಿ ಡಾ. ಚಂದ್ರಶೇರ ಹುಮ್ನಾಬಾದ್‌ ಸೇರಿದಂತೆ ಯಾರೂ ಮರು ಮಾತನಾಡದೆ ಮೌನನಾಗಿದ್ದೇ ಸಾಕ್ಷಿಯಾದರು.

Follow Us:
Download App:
  • android
  • ios