Asianet Suvarna News Asianet Suvarna News

PSI Recruitment Scam: ಜೈಲಿಂದ ಹೊರಬಂದ ಕಿಂಗ್‌ಪಿನ್ ದಿವ್ಯಾ ಹಾಗರಗಿಗೆ ಭವ್ಯ ಸ್ವಾಗತ!

ಪಿಎಸ್‌ಐ ನೇಮಕಾತಿ ಪರೀಕ್ಷೆಯ ಅಕ್ರಮ ಪ್ರಕರಣದಲ್ಲಿ ತಿಂಗಳುಗಟ್ಟಲೆ ಸೆರೆವಾಸ ಅನುಭವಿಸಿ ಈಗ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಇಲ್ಲಿನ ಜ್ಞಾನಜ್ಯೋತಿ ಶಾಲೆಯ ಒಡತಿ ದಿವ್ಯಾ ಹಾಗರಗಿಗೆ ಅವರ ಪತಿ ರಾಜೇಶ್‌ ಹಾಗರಗಿ ಮತ್ತು ಅಭಿಮಾನಿ ಬಳಗದವರು ಅದ್ಧೂರಿ ಸ್ವಾಗತ ಕೋರಿದ್ದಾರೆ.

PSI recruitment scam  kingpin Divya Hagaragi  gets grand welcome after relesed from Jail gow
Author
First Published Jan 8, 2023, 1:26 PM IST

ಕಲಬುರಗಿ (ಜ.8): ಪಿಎಸ್‌ಐ ನೇಮಕಾತಿ ಪರೀಕ್ಷೆಯ ಅಕ್ರಮ ಪ್ರಕರಣದಲ್ಲಿ ತಿಂಗಳುಗಟ್ಟಲೆ ಸೆರೆವಾಸ ಅನುಭವಿಸಿ ಈಗ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಇಲ್ಲಿನ ಜ್ಞಾನಜ್ಯೋತಿ ಶಾಲೆಯ ಒಡತಿ ದಿವ್ಯಾ ಹಾಗರಗಿಗೆ ಅವರ ಪತಿ ರಾಜೇಶ್‌ ಹಾಗರಗಿ ಮತ್ತು ಅಭಿಮಾನಿ ಬಳಗದವರು ಅದ್ಧೂರಿ ಸ್ವಾಗತ ಕೋರಿದ್ದಾರೆ. ಜಾಮೀನು ಪ್ರಕ್ರಿಯೆಗಳೆಲ್ಲವೂ ಪೂರ್ಣಗೊಂಡು ದಿವ್ಯಾ ಹಾಗರಗಿ ಸೆರೆಮನೆಯಿಂದ ರಾತ್ರಿ ಹೊರಬಂದಾಗ ಅವರಿಗಾಗಿ ಕಾಯುತ್ತಿದ್ದ ಅಭಿಮಾನಿಗಳು, ಬಂಧುಗಳು, ಪತಿ ಎಲ್ಲರೂ ಸೇರಿಕೊಂಡು ಭಾರಿ ಗಾತ್ರದ ಗುಲಾಬಿ ಹಾರ ಹಾಕಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಜೈಲಿನಿಂದ ಬಿಡುಗಡೆಯಾದ ಬಳಿಕ ದಿವ್ಯಾ ಹಾಗರಗಿಗೆ ಬಿಜೆಪಿಯ ಉಚ್ಛಾಟಿತ ಕೆಲವು ನಾಯಕರು ಸಹ ಸ್ವಾಗತ ಕೋರಿದ್ದಾರೆ.

ಪಿಎಸ್‌ ಐ ನೇಮಕಾತಿ ಅಕ್ರಮದಲ್ಲಿ 9 ತಿಂಗಳಿನಿಂದ ಜೈಲಿನಲ್ಲಿದ್ದ ದಿವ್ಯಾ ಹಾಗರಗಿ ಸೇರಿ 26 ಜನರನ್ನು ಜ. 5 ರಂದು ಕಲಬುರಗಿ ಜಿಲ್ಲಾ ಸತ್ರ ನ್ಯಾಯಾಲಯ ಜಾಮೀನಿನ ಮೇಲೆ ಬಿಡುಗಡೆ ಮಾಡಿತ್ತು. ಈ ಹಿಂದೆ ಹಗರಣದ ಕಿಂಗ್‌ಪಿಎನ್‌ ಸಹೋದರರಾದ ಮಹಾಂತೇಶ ಪಾಟೀಲ್‌ ಜಾಮೀನು ಮೇಲೆ ಬಿಡುಗಡೆಆಗಿ ಹೊರಬಂದಾಗಲೂ ಅವರ ಅಭಿಮಾನಿಗಳು ಅದ್ದೂರಿ ಸ್ವಾಗತ ಕೋರಿದ್ದರು.

PSI Recruitment Scam: ಕಿಂಗ್‌ಪಿನ್‌ ದಿವ್ಯಾ ಹಾಗರಗಿ ಸೇರಿ 26 ಮಂದಿಗೆ ಬೇಲ್‌

ಹಗರಣದ ಕಿಂಗ್‌ಪಿನ್‌ ದಿವ್ಯಾ: ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮದ ವಿಶ್ವರೂಪ ಹೊರಬಿದ್ದಿದ್ದೆ ದಿವ್ಯಾ ಒಡೆತನದ ಶಿಕ್ಷಣ ಸಂಸ್ಥೆಯ ಜ್ಞಾನಜ್ಯೋತಿ ಹೈಸ್ಕೂಲ್‌ ಪರೀಕ್ಷಾ ಕೇಂದ್ರದಲ್ಲಿ. ಈ ಪರೀಕ್ಷಾ ಕೇಂದ್ರದಲ್ಲಿಯೇ ಅಕ್ರಮದ ಶೇ.70ರಷ್ಟುಡೀಲ್‌ಗಳು ನಡೆದಿರೋದು ಸಿಐಡಿ ತನಿಖೆಯಲ್ಲಿ ಬಹಿರಂಗಗೊಂಡಿತ್ತು. ಹಗರಣ ಬೆಳಕಿಗೆ ಬಂದ ನಂತರ ಸುಮಾರು 18 ದಿನಗಳವರೆಗೆ ಮರೆಸಿಕೊಂಡಿದ್ದ ದಿವ್ಯಾರನ್ನು ಏಪ್ರಿಲ್‌ನಲ್ಲಿ ಪುಣೆಯಲ್ಲಿ ಬಂಧಿಸಲಾಗಿತ್ತು. ಜ್ಞಾನಜ್ಯೋತಿ ಶಾಲೆಯ ಹೆಡ್‌ಮಾಸ್ಟರ್‌ ಕಾಶೀನಾಥ್‌, ಅಕ್ರಮ ಸುರಳಿತವಾಗಿ ನಡೆದಕೊಂಡು ಹೋಗಲು ಎಲ್ಲ ರೀತಿಯ ಸಹಕಾರ ನೀಡಿದ್ದ ಆರೋಪದಲ್ಲಿ ಬಂಧಿತರಾಗಿದ್ದರು.

 

ಪಿಎಸ್‌ಐ ಹಗರಣ ಆರೋಪಿಗಳಿಗೆ ಬೇಲ್‌: ಪ್ರಿಯಾಂಕ್‌ ಖರ್ಗೆ ಕಿಡಿ

ನೀರಾವರಿ ಇಲಾಖೆಯ ಕಿರಿಯ ಎಂಜಿನಿಯರ್‌ ಮಂಜುನಾಥ ಮೇಳಕುಂದಾ, ಬ್ಲೂಟೂತ್‌ ಉಪಕರಣ ಬಳಸಿ ಡೀಲ್‌ ಆದ ಅಭ್ಯರ್ಥಿಗಳಿಗೆ ಉತ್ತರ ಕಳುಹಿಸುವಲ್ಲಿ ಪಳಗಿದ್ದ. ಈತ ಕೂಡಾ ಹಗರಣದ ವಿಚಾರಣೆ ತೀವ್ರಗೊಳ್ಳುತ್ತಿದ್ದಂತೆಯೇ ತಲೆಮರೆಸಿಕೊಂಡಿದ್ದನಾದರೂ, ನಂತರ ತಾನೇ ಆಟೋದಲ್ಲಿ ಬಂದು ಶರಣಾಗಿದ್ದ. ಇನ್ನು, ಡಿವೈಎಸ್ಪಿ ಸಾಲಿ, ಹಗರಣ ನಡೆದ ಸಂಗತಿ ಗೊತ್ತಾದಾಗ ಅದನ್ನು ಮೇಲಧಿಕಾರಿಗಳ ಗಮನಕ್ಕೆ ತರದೆ ತಾನೇ ಫೀಲ್ಡಿಗಿಳಿದು ಹಗರಣದ ರೂವಾರಿ ಆರ್‌ಡಿ ಪಾಟೀಲ್‌ ಅಣತಿಯಂತೆ ದಿವ್ಯಾ ಹಾಗರಗಿ ತಂಡವನ್ನು ಬ್ಲ್ಯಾಕ್‌ಮೇಲ್‌ ಮಾಡಿ ಲಕ್ಷಾಂತರ ರು.ಹಣ ಪಡೆದಿದ್ದ. ಈ ಆರೋಪದಡಿ ಆತನನ್ನು ಜೈಲಿಗಟ್ಟಲಾಗಿತ್ತು.

Follow Us:
Download App:
  • android
  • ios