ಮಾಜಿ ಶಾಸಕ ಸೋಮ್ಲನಾಯಕ್‌, ಬೆಂಬಲಿಗರಿಂದ ರಹಸ್ಯ ಸಭೆ

ಶಾಸಕ ವೆಂಕಟರಮಣಪ್ಪ ಪುತ್ರ ಎಚ್‌.ವಿ.ವೆಂಕಟೇಶ್‌ರಿಗೆ ಕಾಂಗ್ರೆಸ್‌ ಟಿಕೆಟ್‌ ಘೋಷಣೆಯಾದ ಹಿನ್ನೆಲೆಯಲ್ಲಿ ಹಿರಿಯ ಕಾಂಗ್ರೆಸ್‌ ಮುಖಂಡ ಹಾಗೂ ಮಾಜಿ ಶಾಸಕ ಸೋಮ್ಲನಾಯಕ್‌ ಹಾಗೂ ಕೆಲ ಬೆಂಬಲಿಗ ಮುಖಂಡರಿಂದ ಅಸಮಾಧಾನ ಸ್ಪೋಟವಾಗಿದ್ದು, ನಗರದ ಕನ್ವೆನ್ಷನ್‌ ಹಾಲ್‌ನಲ್ಲಿ ರಹಸ್ಯ ಸಭೆ ನಡೆಸಿದರು.

Secret meeting by former MLA Somlanayak, supporters snr

ಪಾವಗಡ: ಶಾಸಕ ವೆಂಕಟರಮಣಪ್ಪ ಪುತ್ರ ಎಚ್‌.ವಿ.ವೆಂಕಟೇಶ್‌ರಿಗೆ ಕಾಂಗ್ರೆಸ್‌ ಟಿಕೆಟ್‌ ಘೋಷಣೆಯಾದ ಹಿನ್ನೆಲೆಯಲ್ಲಿ ಹಿರಿಯ ಕಾಂಗ್ರೆಸ್‌ ಮುಖಂಡ ಹಾಗೂ ಮಾಜಿ ಶಾಸಕ ಸೋಮ್ಲನಾಯಕ್‌ ಹಾಗೂ ಕೆಲ ಬೆಂಬಲಿಗ ಮುಖಂಡರಿಂದ ಅಸಮಾಧಾನ ಸ್ಪೋಟವಾಗಿದ್ದು, ನಗರದ ಕನ್ವೆನ್ಷನ್‌ ಹಾಲ್‌ನಲ್ಲಿ ರಹಸ್ಯ ಸಭೆ ನಡೆಸಿದರು.

ಇತ್ತೀಚೆಗೆ ಮಹಿಳಾ ಮೀಸಲು ಅನ್ವಯ ಮಾಜಿ ಶಾಸಕ ಸೋಮ್ಲನಾಯಕ್‌ ಅವರ ಪುತ್ರಿ, ಜಿಪಂ ಮಾಜಿ ಸದಸ್ಯೆ ಗಾಯಿತ್ರಿ ಬಾಯಿ ಅವರಿಗೆ ಕೈ ಟಿಕೆಟ್‌ ನೀಡುವಂತೆ ರಾಜ್ಯ ಕಾಂಗ್ರೆಸ್‌ ಸಮಿತಿಗೆ ಒತ್ತಡವೇರಿದ್ದರು. ಅಂತಿಮ ಹಂತದಲ್ಲಿ ಎಚ್‌.ವಿ.ವೆಂಕಟೇಶ್‌ ಅವರಿಗೆ ಇಲ್ಲಿನ ಕಾಂಗ್ರೆಸ್‌ ಟಿಕೆಟ್‌ ಅಧಿಕೃತವಾಗಿ ಘೋಷಣೆ ಆಗಿದ್ದು ಇದರಿಂದ ಸೋಮ್ಲನಾಯಕ್‌ ಬೆಂಬಲಿಗರಿಂದ ಆಕ್ಷೇಪ ವ್ಯಕ್ತವಾಗಿದೆ.

ಈ ಸಂಬಂಧ ಗೌಪ್ಯವಾಗಿ ಸಭೆ ನಡೆಸಿ ಹಲವು ಪ್ರಮುಖ ವಿಚಾರಗಳ ಬಗ್ಗೆ ನಿರ್ಣಯ ಕೈಗೊಂಡಿರುವುದಾಗಿ ತಿಳಿದಿದ್ದು, ಈ ವಿಚಾರ ತಾಲೂಕಿನ ರಾಜಕೀಯ ವಲಯಗಳಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಗಾಯಿತ್ರಿಬಾಯಿ ಸ್ವತಂತ್ರ ಹಾಗೂ ಇತರೆ ಪಕ್ಷದಿಂದ ಸ್ಪರ್ಧೆ ಮಾಡುವ ಚಿಂತನೆಯಲ್ಲಿ ತೊಡಗಿದ್ದು, ಈ ವಿಚಾರವಾಗಿ ಮುಂದಿನ ವಾರ ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಸೋಮ್ಲನಾಯಕ್‌ ಅವರು ತಿಳಿಸಿದ್ದಾರೆ.

ಕೈ ಹೈ ಕಮಾಂಡ್ ಜೊತೆ ಯಾರೂ ಮಾತಾಡಿಲ್ಲ

ಮೈಸೂರು (ಮಾ.29) : ಕಾಂಗ್ರೆಸ್‌ ಹೈಕಮಾಂಡ್‌ ಜೊತೆ ಮಾತನಾಡಿದ್ದೇನೆ ಎಂಬ ಎಚ್‌.ಡಿ.ಕುಮಾರಸ್ವಾಮಿ ಹೇಳಿಕೆ ಸತ್ಯಕ್ಕೆ ದೂರವಾದದ್ದು. ನಮ್ಮ ಹೈಕಮಾಂಡ್‌ ಜೊತೆ ಯಾರೂ ಮಾತನಾಡಿಲ್ಲ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಸ್ಪಷ್ಟಪಡಿಸಿದ್ದಾರೆ.

ಎಚ್‌.ಡಿ.ಕೋಟೆ(HD Kote)ಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕಾಂಗ್ರೆಸ್‌ ಹೈಕಮಾಂಡ್‌ ಜೊತೆ ಮಾತನಾಡಿದ್ದೇನೆ ಎಂಬ ಕುಮಾರಸ್ವಾಮಿ(Kumaraswamy) ಹೇಳಿಕೆಗೆ ತಿರುಗೇಟು ನೀಡಿದ ಅವರು, ನಮ್ಮ ಹೈಕಮಾಂಡ್‌ ಜೊತೆ ಯಾರೂ ಮಾತನಾಡಿಲ್ಲ. ಈ ಬಾರಿ ನಾವು ಯಾರ ಜೊತೆಯೂ ಮಾತುಕತೆ ಮಾಡಲ್ಲ. ಯಾವ ಪಕ್ಷದ ಜೊತೆಯೂ ಮೈತ್ರಿ ಮಾಡಿಕೊಳ್ಳುವುದಿಲ್ಲ. ಕಾಂಗ್ರೆಸ್‌ ಏಕಾಂಗಿಯಾಗಿ ಸ್ಪರ್ಧಿಸಿ, ಅಧಿಕಾರಕ್ಕೆ ಬರುತ್ತದೆ ಎಂದು ತಿರುಗೇಟು ನೀಡಿದರು. ಕಳೆದ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ನಡುವೆ ಮ್ಯಾಚ್‌ ಫಿಕ್ಸಿಂಗ್‌ ನಡೆದಿತ್ತು. ಹೀಗಾಗಿ, ಮುಂದಿನ ಚುನಾವಣೆಯಲ್ಲಿ ಮತ್ತೆ ಮೈತ್ರಿ ಮಾಡಿಕೊಂಡರೂ ಆಶ್ಚರ್ಯ ಇಲ್ಲ ಎಂದು ಆರೋಪಿಸಿದರು.

Breaking news: ಬಿಜೆಪಿ, ಕಾಂಗ್ರೆಸ್‌ ಎರಡೂ ಪಕ್ಷಗಳ ವರಿಷ್ಠರು ಸಂಪರ್ಕದಲ್ಲಿದ್ದಾರೆ: ಎಚ್‌ಡಿಕೆ ಬಾಂಬ್‌!

ಬಿಎಸ್‌ವೈ ಮನೆ ಮೇಲೆ ಕಲ್ಲು ತೂರಾಟ:

ಸಿದ್ದರಾಮಯ್ಯ ಜೊತೆ ಫೋಟೊ ತೆಗೆಸಿಕೊಂಡ ವ್ಯಕ್ತಿ ಶಿಕಾರಿಪುರದ ಕಲ್ಲು ತೂರಾಟದಲ್ಲಿ ಭಾಗಿಯಾಗಿದ್ದಾನೆ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿ, ಶಿಕಾರಿಪುರದಲ್ಲಿ ಯಡಿಯೂರಪ್ಪನವರ ಮನೆ ಮೇಲೆ ಕಲ್ಲು ತೂರಿರುವುದು ಕಾಂಗ್ರೆಸ್‌ನವರು ಅಲ್ಲ ಎಂದು ಸ್ವತ: ಯಡಿಯೂರಪ್ಪನವರೇ ಹೇಳಿದ್ದಾರೆ. ಯಡಿಯೂರಪ್ಪಗಿಂತ ಬೊಮ್ಮಾಯಿ(CM Basavaraj bommai)ಗೆ ಹೆಚ್ಚು ಗೊತ್ತಾ?. ಬೊಮ್ಮಾಯಿ ಅವರಿಗಿಂತ ಹೆಚ್ಚಿನ ಮಾಹಿತಿ ಯಡಿಯೂರಪ್ಪನವರಿಗೆ ಹೋಗಿರುತ್ತದೆ. ಯಾರೋ ಬರುತ್ತಾರೆ, ನಮ್ಮ ಜೊತೆ ಫೋಟೋ ತೆಗೆಸಿಕೊಳ್ಳುತ್ತಾರೆ. ಅವರು ಒಳ್ಳೆಯವರೋ, ಕೆಟ್ಟವರೋ ಯಾರಿಗೆ ಗೊತ್ತಿರುತ್ತದೆ. ರಾಜಕೀಯಕ್ಕಾಗಿ ಏನೇನೋ ಹೇಳಬಾರದು ಎಂದು ಸಿಎಂ ವಿರುದ್ಧ ಕಿಡಿಕಾರಿದರು.

ಜೆಡಿಎಸ್ ನಂಬಿಕೆಗೆ ಅರ್ಹ ಅಲ್ಲ; ಈ ಬಾರಿ ಹೊಂದಾಣಿಕೆ ಇಲ್ಲ: ಯೋಗೇಶ್ವರ್

ಮೀಸಲಾತಿಗೆ ಕಾಂಗ್ರೆಸ್‌ ವಿರೋಧ ಇರಲಿಲ್ಲ. ಆದರೆ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕಿತ್ತು. ಮೂರೂವರೆ ವರ್ಷ ಬಿಜೆಪಿ ಏನು ಮಾಡುತ್ತಿತ್ತು? ಒಳ ಮೀಸಲಾತಿಗೆ ಕಾಂಗ್ರೆಸ್‌ ಒಲವು ತೋರಿಸಿತ್ತು ಎಂದರು.

Latest Videos
Follow Us:
Download App:
  • android
  • ios