ಜೆಡಿಎಸ್ ನಂಬಿಕೆಗೆ ಅರ್ಹ ಅಲ್ಲ; ಈ ಬಾರಿ ಹೊಂದಾಣಿಕೆ ಇಲ್ಲ: ಯೋಗೇಶ್ವರ್
ಜೆಡಿಎಸ್‌ನವರು ಎರಡೂ ರಾಷ್ಟ್ರೀಯ ಪಕ್ಷಗಳ ಜತೆ ಹೊಂದಾಣಿಕೆ ಮಾಡುತ್ತಾರೆ. ಈ ವಿಚಾರ ಬಿಜೆಪಿ ಹೈಕಮಾಂಡ್‌ಗೆ ಗೊತ್ತಿದ್ದು, ಹಳೇ ಮೈಸೂರು ಭಾಗದಲ್ಲಿ ಈ ಬಾರಿ ಯಾವುದೇ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಸ್ಪಷ್ಟಪಡಿಸಿದರು.
ಚನ್ನಪಟ್ಟಣ (ಮಾ.29) : ಜೆಡಿಎಸ್‌ನವರು ಎರಡೂ ರಾಷ್ಟ್ರೀಯ ಪಕ್ಷಗಳ ಜತೆ ಹೊಂದಾಣಿಕೆ ಮಾಡುತ್ತಾರೆ. ಈ ವಿಚಾರ ಬಿಜೆಪಿ ಹೈಕಮಾಂಡ್‌ಗೆ ಗೊತ್ತಿದ್ದು, ಹಳೇ ಮೈಸೂರು ಭಾಗದಲ್ಲಿ ಈ ಬಾರಿ ಯಾವುದೇ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್(CP Yogeshwar) ಸ್ಪಷ್ಟಪಡಿಸಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಬಾರಿ ಚುನಾವಣಾ ಪೂರ್ವ ಬಿಜೆಪಿ(BJP) ಬೆಂಬಲ ಪಡೆದಿದ್ದ ಜೆಡಿಎಸ್(JDS)ನವರು ಚುನಾವಣೆ ಮುಗಿದು ಕೆಲ ಕಡೆ ಗೆಲ್ಲುತ್ತಿದ್ದಂತೆ ಕಾಂಗ್ರೆಸ್(Congress) ಜತೆಗೆ ಹೋಗಿ ಮುಖ್ಯಮಂತ್ರಿ ಆದರು. ಜೆಡಿಎಸ್‌ನವರು ನಂಬಿಕೆಗೆ ಅರ್ಹರಲ್ಲ ಎಂಬುದು ನಮ್ಮ ವರಿಷ್ಠರಿಗೆ ಗೊತ್ತಾಗಿದ್ದು, ಈ ಬಾರಿ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಯಾವುದೇ ಹೊಂದಾಣಿಕೆಗೂ ಮುಂದಾಗುವುದಿಲ್ಲ ಎಂದರು.
ತಮ್ಮ ಅವಧಿಯಲ್ಲಿ ಕೆಲಸ ಮಾಡಿದ್ದರೆ ಏಕೆ ಆತಂಕ ಪಡಬೇಕಿತ್ತು: ಯೋಗೇಶ್ವರ್ ವಿರುದ್ಧ ನಿಖಿಲ್ ವಾಗ್ದಾಳಿ
ಜೆಡಿಎಸ್ ಅನ್ನು ನಂಬುವ ಸ್ಥಿತಿಯಲ್ಲಿ ನಮ್ಮ ಪಕ್ಷ ವರಿಷ್ಠರು ಇಲ್ಲ. ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಶಕ್ತಿ ವೃದ್ಧಿಸುತ್ತಿದ್ದು. ಈ ಬಾರಿ ಈ ಭಾಗದಲ್ಲಿ ಪಕ್ಷ ಹೆಚ್ಚು ಸ್ಥಾನಗಳನ್ನು ಗಳಿಸಲಿದೆ. ಈ ಬಾರಿ ಬಹುಮತದೊಂದಿಗೆ ಬಿಜೆಪಿ ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹೊಂದಾಣಿಕೆ ಆಗಿರಲಿಲ್ಲ: ಸಿ.ಟಿ.ರವಿ
ಚಿಕ್ಕಮಗಳೂರು: ನಮ್ಮ ನಾಯಕರಾದ ಅಮಿತ್ ಶಾ(Amit shah) ಅವರೇ ನಮ್ಮ ಮೊದಲ ರಾಜಕೀಯ ವಿರೋಧಿ ಜೆಡಿಎಸ್(JDS) ಎಂದು ಹೇಳಿದ್ದಾರೆ. ಹೀಗಾಗಿ ಜೆಡಿಎಸ್ ಜತೆಗೆ ಹೊಂದಾಣಿಕೆ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ(CT Ravi) ಹೇಳಿದರು. ಕಳೆದ ಬಾರಿಯೂ ಯಾವುದೇ ಹೊಂದಾಣಿಕೆ ಮಾಡಿಕೊಂಡಿರಲಿಲ್ಲ.
ಮದಗಜಗಳ ರಾಜಕೀಯ ಕಾದಾಟ: ಚನ್ನಪಟ್ಟಣಕ್ಕಾಗಿ ಕುಮಾರಸ್ವಾಮಿ, ಯೋಗೇಶ್ವರ್ ಕಾದಾಟ..!
ಈ ಬಾರಿಯೂ ಅದು ಸಾಧ್ಯವಿಲ್ಲ. ಯೋಗೇಶ್ವರ್ ವಿರುದ್ಧ ಕುಮಾರಸ್ವಾಮಿ ಸ್ಪರ್ಧಿಸಿದ್ದರು. ಹೊಂದಾಣಿಕೆ ಆಗಿದ್ದರೆ ಅವರಿಬ್ಬರು ಸ್ಪರ್ಧೆ ಮಾಡುತ್ತಿದ್ದರಾ? ಚಿಕ್ಕಮಗಳೂರಿನಲ್ಲಿ ನನ್ನ ವಿರುದ್ಧ ಜೆಡಿಎಸ್ ಅಭ್ಯರ್ಥಿ 32 ಸಾವಿರ ಮತಗಳನ್ನು ಗಳಿಸಿದರು. ಹೊಂದಾಣಿಕೆ ಮಾಡಿಕೊಂಡಿದ್ದರೆ ಅಷ್ಟುಮತ ಗಳಿಸಲು ಹೇಗೆ ಸಾಧ್ಯವಾಗುತ್ತಿತ್ತು?. ಬಿಜೆಪಿ ಸ್ವತಂತ್ರವಾಗಿ ಸ್ಪರ್ಧಿಸುತ್ತದೆ ಎಂದರು.