ಡಿ.21ರಿಂದ ಸ್ಕೌಟ್ಸ್ ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ
- ಆಳ್ವಾಸ್: ಡಿ.21ರಿಂದ ಸ್ಕೌಟ್ಸ್ ಗೈಡ್‌್ಸ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ
- ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಪೂರ್ವಭಾವಿ ಸಮಾಲೋಚನಾ ಸಭೆ
ಬೆಳ್ತಂಗಡಿ (ಅ.22) ರಾಷ್ಟ್ರ ಮಟ್ಟದಲ್ಲಿ ಸ್ಕೌಟ್ಸ್ ಗೈಡ್‌್ಸನ 17 ಜಾಂಬೂರಿ ನಡೆದಿದ್ದು, ರಾಜ್ಯದಲ್ಲಿ 3, ಜಗತ್ತಿನಲ್ಲಿ 23 ಜಾಂಬೂರಿಗಳಾಗಿವೆ. ಡಿ.21 ರಿಂದ 28 ರವರೆಗೆ ಮೂಡುಬಿದಿರೆ ಆಳ್ವಾಸ್ ವಿದ್ಯಾಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಜಾಂಬೂರಿ ನಡೆಯಲಿದ್ದು, ಜಿಲ್ಲೆಗೆ 100 ವರ್ಷ ಸಂದಿರುವ ನೆಲೆಯಲ್ಲಿ ನನಗೆ ಜವಾಬ್ದಾರಿ ನೀಡಿದ್ದಾರೆ ಎಂದು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ, ಭಾರತ್ ಸ್ಕೌಟ್ಸ್ ಮತ್ತು ಗೆಟ್‌್ಡ$್ಸ ಜಿಲ್ಲಾ ಮುಖ್ಯ ಆಯುಕ್ತ ಡಾ.ಮೋಹನ್ ಆಳ್ವ ಹೇಳಿದ್ದಾರೆ.
ವಿದ್ಯಾರ್ಥಿಗಳಿಗೆ ಸ್ವದೇಶಿ ಚಿಂತನೆ, ಸಾಂಸ್ಕೃತಿಕ ಪ್ರಜ್ಞೆ ಅಗತ್ಯ: ಡಾ.ಆಳ್ವ
ಭಾರತ್ ಸ್ಕೌಟ್ಸ್ ಮತ್ತು ಗೈಡ್‌್ಸ ಸ್ಥಳೀಯ ಸಂಸ್ಥೆ ಬೆಳ್ತಂಗಡಿ ಹಾಗೂ ಮಡಂತ್ಯಾರ್‌ನ ಜಂಟಿ ಆಶ್ರಯದಲ್ಲಿ ಮೂಡುಬಿದಿರೆಯಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಸ್ಕೌಟ್ ಗೈಡ್ ಜಾಂಬೂರಿಯ ಪ್ರಯುಕ್ತ ಅ.21ರಂದು ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ನಡೆದ ಸಮಾಲೋಚನ ಸಭೆಯಲ್ಲಿ ಅವರು ಮಾತನಾಡಿದರು.
ಐದು ಮೇಳಗಳು:
ಇದೇ ಸಂದರ್ಭ ಜಂಬೂರಿ ಜೊತೆ 1) ಕೃಷಿ ಮೇಳ, 2) ವಿಜ್ಞಾನ ಮೇಳ, 3) ಆಹಾರೋತ್ಸವ, 4) ಕಲಾಮೇಳ, 5) ಪುಸ್ತಕ ಮೇಳ ನಡೆಯಲಿದೆ ಎಂದರು.
30-35 ಕೋಟಿ ರು. ವೆಚ್ಚ:
ಸೃಜನಶೀಲತೆಗಾಗಿ ಅಭಿನಯ, ಸಂಗೀತ, ಕ್ಲೇ ಮಾಡೆಲೆಂಗ್ ಸೇರಿ ನೂರು ಎಕ್ರೆ ಸ್ಥಳದಲ್ಲಿ ಜೀವನ ಉಲ್ಲಾಸ ಸೃಷ್ಟಿಮಾಡಲಿದ್ದೇವೆ. ಉದ್ಘಾಟನೆ, ಸಮಾರೋಪ ಸಮಾರಂಭ, ಮ್ಯಾರಥಾನ್, ಪಥಸಂಚಲನವಿರಲಿದೆ. ಒಟ್ಟು 30 ರಿಂದ 35 ಕೋಟಿ ರು. ಖರ್ಚಾಗಲಿದೆ ಎಂದು ಹೇಳಿದರು.
ಹೊರೆ ಕಾರಣಿಕೆ ನೆರವು:
ಶಾಸಕ ಹರೀಶ್ ಪೂಂಜ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯ ಎಲ್ಲರಿಗೂ ಹೆಮ್ಮೆ ತರುವ ವಿಚಾರ. ಆರ್ಥಿಕವಾಗಿ ಹಿಂದುಳಿದಿದ್ದರೂ ವಸ್ತು ರೂಪದಲ್ಲಿ ಇತರ ತಾಲೂಕಿಗಳಿಂದ ಅತಿ ಹೆಚ್ಚು ಹೊರೆಕಾಣಿಕೆ ಒದಗಿಸುವ ಭರವಸೆ ನಮಗಿದೆ. ತಾಲೂಕಿನಲ್ಲಿ 45 ಸಾವಿರ ವಿದ್ಯಾರ್ಥಿಗಳಿದ್ದಾರೆ. ಸಂಘ ಸಂಸ್ಥೆ, ಖಾಸಗಿ ಶಿಕ್ಷಣ ಸಂಸ್ಥೆಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಮ್ಮುಖದಲ್ಲಿ ಮತ್ತೊಮ್ಮೆ ಸಭೆ ಸೇರಿ ಯಾವ ರೂಪದಲ್ಲಿ ನೆರವಾಗಬಹುದೆಂದು ಚರ್ಚಿಸಲಾಗುವುದು ಎಂದು ಹೇಳಿದರು.
ರಸ್ತೆ ಅಪಘಾತ: ಯಕ್ಷಗಾನ ಕಲಾವಿದ ವಾಮನ ಕುಮಾರ್ ದಾರುಣ ಸಾವು
ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಸ್.ವಿರೂಪಾಕ್ಷಪ್ಪ, ಪ.ಪಂ. ಉಪಾಧ್ಯಕ್ಷ ಜಯಾನಂದ ಗೌಡ, ತಾ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್ ಬಿ., ಭಾರತ್ ಸ್ಕೌಟ್ಸ್ ಮತ್ತು ಗೈಡ್‌್ಸ ಸ್ಥಳೀಯ ಸಂಸ್ಥೆ ಅಧ್ಯಕ್ಷ ವಿಠಲ್ ಶೆಟ್ಟಿ, ರಾಜ್ಯ ಸಂಘಟನಾ ಮುಖ್ಯ ಆಯುಕ್ತ ಪ್ರಭಾಕರ್ ಭಟ್ ಮತ್ತಿತರರಿದ್ದರು.
ಮಡಂತ್ಯಾರು ಭಾರತ್ ಸ್ಕೌಟ್ಸ್ ಮತ್ತು ಗೈಡ್‌್ಸ ಸ್ಥಳೀಯ ಸಂಸ್ಥೆ ಜತೆ ಕಾರ್ಯದರ್ಶಿ ಧರಣೇಂದ್ರ ಕೆ. ಪ್ರಸ್ತಾವಿಸಿದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್‌್ಸ ಮಡಂತ್ಯಾರು ಸ್ಥಳೀಯ ಸಂಸ್ಥೆ ಕಾರ್ಯದರ್ಶಿ ಶಾಂತರಾಮ್ ಪ್ರಭು ಸ್ವಾಗತಿಸಿದರು.