ವಿದ್ಯಾರ್ಥಿಗಳಿಗೆ ಸ್ವದೇಶಿ ಚಿಂತನೆ, ಸಾಂಸ್ಕೃತಿಕ ಪ್ರಜ್ಞೆ ಅಗತ್ಯ: ಡಾ.ಆಳ್ವ

ಮೂಡುಬಿದಿರೆ  ಸ್ಕೌಟ್ಸ್‌-ಗೈಡ್‌ ಭವನದಲ್ಲಿ ಭಾನುವಾರ ರಾಜ್ಯ  ರಾಜ್ಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ದಕ್ಷಿಣ ಕನ್ನಡ ಜಿಲ್ಲಾ ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ರಾಜ್ಯದ ಎಸ್‌ಎಸ್‌ಎಲ್‌ಸಿ  ಪ್ರತಿಭಾನ್ವಿತ ಸ್ಕೌಟ್ಸ್‌ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಅಭಿನಂದನೆ ಸಮಾರಂಭ ನಡೆಯಿತು

Students need Swadeshi thinking, cultural consciousness say Dr. Alva rav

ಮೂಡುಬಿದಿರೆ (ಜು.25) :  ವಿದ್ಯಾರ್ಥಿಗಳು ದೇಶದ ಬಗ್ಗೆ ಗೌರವ, ಸ್ವದೇಶಿ ಚಿಂತನೆ, ಕ್ರೀಡಾ ಮನೋಭಾವ ಹಾಗೂ ಸಾಂಸ್ಕೃತಿಕ ಪ್ರಜ್ಞೆ ಮೈಗೂಡಿಸಿಕೊಂಡರೆ ಅಪ್ರತಿಮರಾಗಿ ಬೆಳೆಯಲು ಸಾಧ್ಯ. ಪೋಷಕರು ಸತ್ೊ್ರಜೆಗಳನ್ನು ದೇಶಕ್ಕೆ ಕೊಡುಗೆ ನೀಡುವುದರೊಂದಿಗೆ ಉತ್ತಮ ಮನಸುಗಳನ್ನು ಕಟ್ಟುವತ್ತ ಪ್ರಯತ್ನ ಪಡಬೇಕು, ಮಕ್ಕಳಿಗೆ ವಿದ್ಯಾಭ್ಯಾಸದ ಸಾಧನೆಯ ಬಗ್ಗೆ ಹೆಮ್ಮೆ ಇರಲಿ ಆದರೆ ಭ್ರಮೆ ಬೇಡ ಎಂದು ಸ್ಕೌಟ್ಸ್‌ ಮತ್ತು ಗೈಡ್‌್ಸ ಜಿಲ್ಲಾ ಮುಖ್ಯ ಆಯುಕ್ತ ಹಾಗೂ ಆಳ್ವಾಸ್‌ ಎಜುಕೇಶನ್‌ ¶ೌಂಡೇಶನ್‌ ಅಧ್ಯಕ್ಷ ಡಾ. ಎಂ. ಮೋಹನ್‌ ಆಳ್ವ ಹೇಳಿದ್ದಾರೆ.

ಮೂಡುಬಿದಿರೆ(Mudubidire) ಸ್ಕೌಟ್ಸ್‌-ಗೈಡ್‌ ಭವನ(scout and guides Bhavan)ದಲ್ಲಿ ಭಾನುವಾರ ರಾಜ್ಯ ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್‌ ( Bharat Scout and guide)ದಕ್ಷಿಣ ಕನ್ನಡ ಜಿಲ್ಲಾ ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ನಡೆದ ರಾಜ್ಯದ ಎಸ್‌ಎಸ್‌ಎಲ್‌ಸಿ(SSLC) ಪ್ರತಿಭಾನ್ವಿತ ಸ್ಕೌಟ್ಸ್‌ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಅಭಿನಂದನೆ ಸಮಾರಂಭದಲ್ಲಿ ಅವರು ಮಾತನಾಡಿದರು.ಪಿಯುಸಿ : ಆಳ್ವಾಸ್‌ನ 190 ವಿದ್ಯಾರ್ಥಿಗಳಿಗೆ 600 ಅಂಕ

ದಕ್ಷಿಣ ಕನ್ನಡ ಜಿ. ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್‌ ಮಾತನಾಡಿ, ಸ್ಕೌಟ್ಸ್‌ - ಗೈಡ್‌್ಸ ಚಳವಳಿಯು ಬದುಕಿಗೆ ಬೇಕಾದ ಶಿಸ್ತು, ನೈತಿಕ ಪ್ರಜ್ಞೆ ಹಾಗೂ ಪ್ರಾಮಾಣಿಕತೆಯನ್ನು ಕಲಿಸುತ್ತದೆ. ಸುದ್ದಿಗಾಗಿ ಕಾರ್ಯ ಮಾಡದೆ ಸಮಾಜಕ್ಕೆ ಸತ್ೊ್ರಜೆಗಳನ್ನು ಕೊಡು ಮಗೆ ನೀಡುತ್ತಿದೆ. ಸನ್ಮಾನವು ಜವಬ್ದಾರಿಗಳನ್ನು ಹೆಚ್ಚಿಸುವಂತೆ ಮಾಡುತ್ತದೆ. ಮೊದಲು ಪೋಷಕರನ್ನು ಆದರ್ಶವಾಗಿ ಸ್ವೀಕರಿಸಿ ವಿದ್ಯಾರ್ಥಿಗಳು ತಾವು ಸಾಧಿಸಿರುವ ಸಾಧನೆಯನ್ನು ಉಳಿಸಿಕೊಂಡು ಹೋಗುವುದು ನಿಜವಾದ ಸಾಧನೆ ಎಂದರು.

ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್‌್ಸ ರಾಜ್ಯ ಮುಖ್ಯ ಆಯುಕ್ತ ಪಿ. ಜಿ. ಆರ್‌ ಸಿಂಧ್ಯ ಮಾತನಾಡಿ, ಸ್ಕೌಟ್ಸ್‌ - ಗೈಡ್‌್ಸ ತರಬೇತಿಗೆ ಜಿಲ್ಲಾಡಳಿತವು ಮಂಗಳೂರಿನಲ್ಲಿ ಈ ಹಿಂದೆ ನಿಗದಿಪಡಿಸಿದ್ದ ಸ್ಥಳವನ್ನು ಶೀಘ್ರವೇ ನೀಡುವಂತೆ ಮನವಿ ಮಾಡಿಕೊಂಡರು. ಭಾಷಣದಿಂದ ಸಮಾಜದ ಪರಿವರ್ತನೆ ಸಾಧ್ಯವಿಲ್ಲ, ವಿದ್ಯಾರ್ಥಿಗಳು ಕಲಿತ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡರಷ್ಟೇ ದೇಶಕ್ಕೆ ಉತ್ತಮ ಕೊಡುಗೆ ನೀಡಲು ಸಾಧ್ಯ ಎಂದರು.

ಆಳ್ವಾಸ್‌ನಿಂದ ವಿಶಿಷ್ಟ ಸಂಯೋಜನೆಯಲ್ಲಿ ಪತ್ರಿಕೋದ್ಯಮ ಪದವಿ ಕೋರ್ಸ್‌

ಕಾರ್ಯಕ್ರಮದಲ್ಲಿ 36 ಶೈಕ್ಷಣಿಕ ಜಿಲ್ಲೆಗಳಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ 625 ಅಂಕ ಗಳಿಸಿದ 19 ಸ್ಕೌಟ್ಸ್‌ ಮತ್ತು ಗೈಡ್‌್ಸ ವಿದ್ಯಾರ್ಥಿಗಳು ಹಾಗೂ 600ಕ್ಕಿಂತ ಅಧಿಕ ಅಂಕ ಪಡೆದ 450 ವಿದ್ಯಾರ್ಥಿಗಳನ್ನು ಗುರುತಿಸಿ ಅಭಿನಂದಿಸಲಾಯಿತು. ಸಾಧಕ ವಿದ್ಯಾರ್ಥಿಗಳಿಗೆ ಸ್ಕೌಟ್ಸ್‌ ಮತ್ತು ಗೈಡ್‌್ಸ ರಾಜ್ಯ ಸಂಸ್ಥೆಯಿಂದ ತಲಾ 3000 ರು. ಹಾಗೂ ಪ್ರಶಸ್ತಿ ಪತ್ರ, ಮೌಲ್ಯಾಧಾರಿತ ಪುಸ್ತಕ, ಸ್ಕಾಫ್‌ರ್‍ ಹಾಗೂ ಶಾಲಾ ಬ್ಯಾಗ್‌ ಬಹುಮಾನವಾಗಿ ನೀಡಲಾಯಿತು. ಭಾಗವಹಿಸಿದ ಸ್ಕೌಟ್ಸ್‌ ಮತ್ತು ಗೈಡ್‌್ಸ ವಿದ್ಯಾರ್ಥಿಗಳಿಗೆ ಪ್ರಯಾಣ ಭತ್ಯೆ ನೀಡಲಾಯಿತು. ಆಳ್ವಾಸ್‌ ಸಂಸ್ಥೆಯಿಂದ ತಲಾ 200 ರು. ನಗದು ನೀಡಿ ಪ್ರೋತ್ಸಾಹಿಸಲಾಯಿತು.

ಪುರಸಭಾ ಅಧ್ಯಕ್ಷ ಪ್ರಸಾದ್‌ ಕುಮಾರ್‌, ಕ್ಷೇತ್ರ ಶಿಕ್ಷಣಾಧಿಕಾರಿ ರಾಜಶ್ರೀ ಬಿ., ರಾಜ್ಯ ಆಯುಕ್ತ ಸಿಎಸ್‌ ರೆಡ್ಡಿ, ರಾಜ್ಯ ಕಾರ್ಯದರ್ಶಿ ಗಂಗಪ್ಪ ಗೌಡ, ರಾಜ್ಯ ಸಂಘಟನಾ ಆಯುಕ್ತ ಪ್ರಭಾಕರ್‌ ಭಟ್‌, ಉಡುಪಿ ಜಿಲ್ಲಾ ಗೈಡ್‌್ಸ ಆಯುಕ್ತೆ ಜ್ಯೋತಿ ಪೈ, ಖಾನ್‌ ¶ೌಂಡೇಶನ್‌ ಅಧ್ಯಕ್ಷ ಕ್ರಿಸ್‌ಮೂರ್ತಿ ಇನ್ನಿತರರು ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿ ಎಂ.ಜೆ. ಕಜೆ ಸ್ವಾಗತಿಸಿ, ರಾಜ್ಯ ತರಬೇತಿ ಆಯುಕ್ತ ನಾಗೇಶ್‌ ವಂದಿಸಿ, ಸ್ಥಳೀಯ ಸಂಸ್ಥೆ ಸಹ ಕಾರ್ಯದರ್ಶಿ ನವೀನ್‌ಚಂದ್ರ ಅಂಬೂರಿ ನಿರೂಪಿಸಿದರು.

Latest Videos
Follow Us:
Download App:
  • android
  • ios