ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್‌ ಸಿಟಿ ಕಾಮಗಾರಿಗೆ 817 ಕೋಟಿ ಬಿಡುಗಡೆಯಾಗಿದ್ದು, ಈಗಾಗಲೇ 780 ಕೋಟಿ ಖರ್ಚಾಗಿದೆ. ಸ್ಮಾರ್ಟ್‌ಸಿಟಿ ಕಾಮಗಾರಿ ಬಗ್ಗೆ ತೃಪ್ತಿ ಇದೆ ಎಂದು ಶಾಸಕ ಕೆ.ಎಸ್‌.ಈಶ್ವರಪ್ಪ ಹೇಳಿದರು. 

ಶಿವಮೊಗ್ಗ (ನ.18): ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್‌ ಸಿಟಿ ಕಾಮಗಾರಿಗೆ 817 ಕೋಟಿ ಬಿಡುಗಡೆಯಾಗಿದ್ದು, ಈಗಾಗಲೇ 780 ಕೋಟಿ ಖರ್ಚಾಗಿದೆ. ಸ್ಮಾರ್ಟ್‌ಸಿಟಿ ಕಾಮಗಾರಿ ಬಗ್ಗೆ ತೃಪ್ತಿ ಇದೆ ಎಂದು ಶಾಸಕ ಕೆ.ಎಸ್‌.ಈಶ್ವರಪ್ಪ ಹೇಳಿದರು. ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್‌ಸಿಟಿ ಕಾಮಗಾರಿಗಳ ಸ್ಥಳಕ್ಕೆ ಗುರುವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಬೆಳಗ್ಗೆಯಿಂದಲೇ ಸ್ಮಾರ್ಟ್‌ ಸಿಟಿ ಕಾಮಗಾರಿಗಳನ್ನು ಪಾಲಿಕೆ, ಸೂಡಾ, ನಗರಾಭಿವೃದ್ಧಿ ಅಧಿಕಾರಿಗಳ ಜೊತೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇನೆ. 

ಕಾಮಗಾರಿಗಳನ್ನು ಕಂಡು ಸಂತೃಪ್ತಿಪಟ್ಟಿದ್ದೇನೆ. ಕೆಲವು ಕಡೆ ಕಳಪೆ ಕಾಮಗಾರಿಯಾಗಿದೆ ಎಂದು ಪತ್ರಿಕೆಗಳಲ್ಲಿ, ದೃಶ್ಯಮಾಧ್ಯಮಗಳಲ್ಲಿ ಕೇಳಿದ್ದೆ. ಆದರೆ, ಖುದ್ದಾಗಿ ವೀಕ್ಷಣೆ ಮಾಡಿದಾಗ ಎಲ್ಲಿಯೂ ಕಳಪೆಯಾಗಿದೆ ಎಂದು ಅನಿಸಲಿಲ್ಲ. ಆದರೂ, ಅಕಸ್ಮಾತ್‌ ಕೆಲವು ಕಡೆ ಕಳಪೆಯಾಗಿದ್ದರೆ ಅದನ್ನು ನನ್ನ ಗಮನಕ್ಕೆ ತನ್ನಿ. ಕೂಡಲೇ ಸರಿಪಡಿಸುತ್ತೇನೆ ಎಂದರು. ನಗರದಲ್ಲಿ ಸುಮಾರು 110 ಕಿ.ಮೀ. ರಸ್ತೆ ಕಾಮಗಾರಿ ನಡೆಯುತ್ತಿದೆ. ಈಗಾಗಲೇ 104 ರಸ್ತೆ ಕಾಮಗಾರಿಗಳು ಮುಗಿದಿವೆ. ಎಲ್ಲ ಬಡಾವಣೆಗಳಲ್ಲೂ ಅಚ್ಚುಕಟ್ಟಾಗಿ ಕಾಮಗಾರಿ ನಡೆದಿದೆ. 

ಮೋದಿ ಶ್ರಮದಿಂದ ಭಾರತ ಆರ್ಥಿಕವಾಗಿ ಸದೃಢ: ಕೆ.ಎಸ್‌.ಈಶ್ವರಪ್ಪ

ಅಕಸ್ಮಾತ್‌ ಗುಣಮಟ್ಟ ಕಡಿಮೆ ಆಗಿದ್ದರೆ ಬಡಾವಣೆಗಳ ನಿವಾಸಿಗಳು ಗಮನಿಸಿ ಹೇಳಿದರೆ ಅದನ್ನು ಸರಿಪಡಿಸಲಾಗುವುದು. ಹಾಗೆಯೇ ಈಗಾಗಲೇ 18 ಪಾರ್ಕ್‌ಗಳ ಅಭಿವೃದ್ಧಿಯಾಗಿದೆ. 113 ಕನ್ಸರ್ವೆನ್ಸಿ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದರು. ಸರ್ಕಾರಿ ಮೇನ್‌ ಮಿಡ್ಲ್‌ ಸ್ಕೂಲ್‌ ಕಾಮಗಾರಿ ಪೂರ್ಣಗೊಂಡಿದ್ದು, ಅದನ್ನು ಇಂದು ವಿದ್ಯಾ ಇಲಾಖೆಗೆ ವರ್ಗಾಯಿಸಲಾಗುವುದು. 

ಹಾಗೆಯೇ ಕೋಟೆ ಶಿವಪ್ಪ ನಾಯಕ ಅರಮನೆ ಕೆಲಸ ಕೂಡ ಸ್ವಲ್ಪ ನಿಧಾನಗತಿಯಲ್ಲಿ ಸಾಗಿದ್ದು, ತ್ವರಿತಗೊಳಿಸುವಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ ಮತ್ತು ಎಲ್ಲೆಲ್ಲಿ ಸಣ್ಣಪುಟ್ಟ ಕಾಮಗಾರಿಗಳು ಉಳಿದುಕೊಂಡಿವೆಯೋ ಅದನ್ನು ಕೂಡ ಪೂರ್ಣಗೊಳಿಸುವಂತೆ ಸೂಚಿಸಿದ್ದೇನೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸೂಡಾ ಅಧ್ಯಕ್ಷ ನಾಗರಾಜ್‌, ಪಾಲಿಕೆ ಆಯುಕ್ತ ಮಾಯಣ್ಣ ಗೌಡ, ಉಪಮೇಯರ್‌ ಲಕ್ಷ್ಮೀ ಶಂಕರ್‌ ನಾಯ್ಕ್‌, ಸದಸ್ಯರಾದ ಸುವರ್ಣಾ ಶಂಕರ್‌, ಪ್ರಭು, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

ಈಶ್ವರಪ್ಪಗೆ ಸಚಿವ ಸ್ಥಾನ ನೀಡಿ: ಹಿಂದುಳಿದ ಒಕ್ಕೂಟ ಒತ್ತಾಯ

ಮತಾಂತರ ಕಾಯಿದೆ ಮತ್ತಷ್ಟು ಬಿಗಿಗೊಳಿಸಲಾಗುವುದು. ಈಗಾಗಲೇ ಸುಪ್ರೀಂ ಕೋರ್ಟ್‌ ಮತಾಂತರ ಕಾಯಿದೆ ಜಾರಿಗೆ ಬಿಗಿಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದೆ. ವಿಪಕ್ಷದವರು ಈಗ ಬಾಯಿ ಮುಚ್ಚಿಕೊಂಡಿದ್ದಾರೆ. ರಣದೀಪ್‌ ಸುರ್ಜೆವಾಲರು ಆರೋಪಿಸಿದಂತೆ ಮತದಾರರ ಪಟ್ಟಿಯನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿಲ್ಲ. ಚುನಾವಣಾ ಆಯೋಗದ ಸೂಚನೆ ಮೇರೆಗೆ ಈ ಪಟ್ಟಿತಯಾರಿಸಲಾಗಿದೆ. ಆಧಾರ್‌ ಲಿಂಕ್‌ ಬಳಸಿ ಮೂರು ನಾಲ್ಕು ಕಡೆ ಇದ್ದ ಮತದಾರರ ಹೆಸರು ಒಂದೇ ಕಡೆ ಬರುವಂತೆ ಮಾಡಲಾಗಿದೆ
- ಕೆ.ಎಸ್‌.ಈಶ್ವರಪ್ಪ, ಶಾಸಕ