Asianet Suvarna News Asianet Suvarna News

ಶಿರಾ ಜೆಡಿಎಸ್ ಟಿಕೆಟ್ ಇವರಿಗೆ ಖಚಿತ : ಎಚ್‌ಡಿಕೆ ಸುಳಿವು

ಜೆಡಿಎಸ್ ಟಿಕೆಟ್ ಇವರಿಗೆ ನೀಡುವುದು ಬಹುತೇಕ ಖಚಿತವಾದಂತಾಗಿದೆ. ಈ ಬಗ್ಗೆ ಎಚ್ ಡಿಕೆ ಸುಳಿವನ್ನು ನೀಡಿದ್ದಾರೆ

Sathyanarayana Wife Likely To get JDS Ticket To Shira snr
Author
Bengaluru, First Published Oct 6, 2020, 8:00 AM IST
  • Facebook
  • Twitter
  • Whatsapp

ಶಿರಾ (ಅ.06): ಈ ಹಿಂದೆ ಜೆಡಿಎಸ್‌ ಪಕ್ಷದಿಂದ ಅಧಿಕಾರದಲ್ಲಿದ್ದು ಮೃತಪಟ್ಟಿದ್ದಂತಹ ಸಂದರ್ಭದಲ್ಲಿ ಅವರ ಪತ್ನಿಯವರಿಗೆ ಟಿಕೆಟ್‌ ನೀಡಿದ್ದೇವೆ. ಅದನ್ನೇ ಈಗಲೂ ಮುಂದುವರೆಸುತ್ತಿದ್ದೇವೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದರು. 

ಇದಕ್ಕೆ ಸ್ಥಳೀಯ ಮುಖಂಡರು ಸಹಕಾರ, ಬೆಂಬಲ ನೀಡಬೇಕು. ನಿಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇದ್ದರೂ ಅದನ್ನು ಬದಿಗೊತ್ತಿ ಜೆಡಿಎಸ್‌ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ. ಇನ್ನೆರಡು ದಿನದಲ್ಲಿ ಟಿಕೆಟ್‌ ಘೋಷಣೆ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳುವ ಮೂಲಕ ದಿವಂಗತ ಶಾಸಕ ಬಿ.ಸತ್ಯನಾರಾಯಣ ಅವರ ಪತ್ನಿಗೆ ಟಿಕೆಟ್‌ ನೀಡುವ ಸುಳಿವು ನೀಡಿದ್ದಾರೆ.

ರಾಜಕಾರಣ ಬಿಟ್ಟು ದೊಡ್ಡದೊಂದು ಹಕ್ಕೊತ್ತಾಯ ಮಾಡಿದ HDK ...

ಸೋಮವಾರ ಜೆಡಿಎಸ್‌ ಕಾರ್ಯಕರ್ತ ಸಭೆಯಲ್ಲಿ ಮಾತನಾಡಿದ ಅವರು, ಶಿರಾ ಕ್ಷೇತ್ರದ ಜನರು ತಮ್ಮ ಕೈಯಿಂದ ಹಣ ಖರ್ಚು ಮಾಡಿ ಬಿ.ಸತ್ಯನಾರಾಯಣ ಅವರನ್ನು ಗೆಲ್ಲಿಸಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲು ಮತ್ತೊಮ್ಮೆ ಜೆಡಿಎಸ್‌ ಅಭ್ಯರ್ಥಿಯನ್ನು ಗೆಲ್ಲಿಸಿ. ಜೆಡಿಎಸ್‌ ಪಕ್ಷ ಗೆಲ್ಲುವ ಅನಿವಾರ್ಯತೆ ಇದೆ ಎಂದರು.

Follow Us:
Download App:
  • android
  • ios