Asianet Suvarna News Asianet Suvarna News

'ಮಾಜಿ ಸಚಿವ ಸಾರಾ ಮಹೇಶ್‌ಗೆ ಪ್ರಚಾರದಲ್ಲಿರೋಕೆ ಆಸೆ': ಬಿಜೆಪಿ ಮುಖಂಡ

ಮಾಜಿ ಸಚಿವ ಸಾ.ರಾ. ಮಹೇಶ್‌ ಬಿಜೆಪಿ ಪಕ್ಷದ ಮುಖಂಡ ಎಚ್‌. ವಿಶ್ವನಾಥ್‌ ವಿರುದ್ಧ ವೃಥಾ ಆರೋಪ ಮಾಡುವ ಮೂಲಕ ಪ್ರಚಾರದಲ್ಲಿರಲು ಬಯಸಿದ್ದಾರೆ ಎಂದು ಹುಣಸೂರು ತಾಲೂಕು ಬಿಜೆಪಿ ಅಧ್ಯಕ್ಷ ಎಚ್‌.ಕೆ. ನಾಗಣ್ಣಗೌಡ ಆರೋಪಿಸಿದರು.

Sara mahesh trying to get attention by slamming vishwanath says bjp leader
Author
Bangalore, First Published Jun 7, 2020, 10:20 AM IST

ಮೈಸೂರು(ಜೂ.07): ಮಾಜಿ ಸಚಿವ ಸಾ.ರಾ. ಮಹೇಶ್‌ ಬಿಜೆಪಿ ಪಕ್ಷದ ಮುಖಂಡ ಎಚ್‌. ವಿಶ್ವನಾಥ್‌ ವಿರುದ್ಧ ವೃಥಾ ಆರೋಪ ಮಾಡುವ ಮೂಲಕ ಪ್ರಚಾರದಲ್ಲಿರಲು ಬಯಸಿದ್ದಾರೆ ಎಂದು ಹುಣಸೂರು ತಾಲೂಕು ಬಿಜೆಪಿ ಅಧ್ಯಕ್ಷ ಎಚ್‌.ಕೆ. ನಾಗಣ್ಣಗೌಡ ಆರೋಪಿಸಿದರು.

ರಾಜಕಾರಣದಲ್ಲಿ ಸಾಕಷ್ಟುಬೆಳೆಯಬೇಕಿರುವ ಸಾ.ರಾ. ಮಹೇಶ್‌ ರಾಜ್ಯದ ಮುತ್ಸದ್ಧಿ ರಾಜಕಾರಣಿ ವಿಶ್ವನಾಥ್‌ರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಪ್ರಚಾರದಲ್ಲಿರಲು ಬಯಸಿದ್ದಾರೆ. ಸೂಕ್ತ ದಾಖಲೆಯೊಂದಿಗೆ ಆರೋಪಿಸಿದಲ್ಲಿ ಅದಕ್ಕೊಂದು ಅರ್ಥವಿರುತ್ತದೆ. ಈ ಹಿಂದೆ ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿದ್ದ ವೇಳೆ ಹುಣಸೂರಿನಲ್ಲಿ ರೇಷ್ಮೆ ಮಾರುಕಟ್ಟೆಅಭಿವೃದ್ಧಿಪಡಿಸಲು ಸಾಕಷ್ಟುಅವಕಾಶಗಳಿದ್ದರೂ ಮೈಸೂರಿನಲ್ಲಿ ಜಾಗ ಹುಡುಕುತ್ತಿದ್ದರು. ತಾಲೂಕಿಗೆ ಇವರ ಕೊಡುಗೆಯೇನೂ ಇಲ್ಲ. ಹೀಗಿರುವಾಗ ನಮ್ಮ ನಾಯಕರನ್ನು ವೃಥಾ ಆರೋಪ ಮಾಡುವುದು ಸರಿಯಲ್ಲ. ಇದನ್ನು ನಿಲ್ಲಿಸಲಿ ಎಂದು ಸುದ್ದಿಗೋಷ್ಟಿಯಲ್ಲಿ ಆಗ್ರಹಿಸಿದರು.

ವ್ಯವಸ್ಥಾಪಕರಿಗೆ ಕೊರೋನಾ, ಬ್ಯಾಂಕ್‌ ಸೀಲ್‌ ಡೌನ್‌

ಪಕ್ಷದ ಮುಖಂಡ ಸತ್ಯಪ್ಪ ಮಾತನಾಡಿ, ಸಾ.ರಾ. ಮಹೇಶ್‌ ತಮ್ಮ ಅಧಿಕಾರಾವಧಿಯಲ್ಲೂ ನಡೆದಿರುವ ಘಟನೆಗಳ ಕುರಿತು ಜನತೆಗೆ ತಿಳಿಸಲಿ. ಎಂಡಿಎ ಅಧ್ಯಕ್ಷ ಸ್ಥಾನಕ್ಕೆ ಒಬ್ಬರನ್ನು ಕರೆತಂದು 10 ಕೋಟಿ ಪಡೆದು ಆ ವ್ಯಕ್ತಿ ಒಂದು ಸಭೆಯನ್ನೂ ನಡೆಸದಂತೆ ಸರ್ಕಾರವೇ ಬಿದ್ದುಹೋಯಿತು. ಅವರ ಅಧಿಕಾರಾವಧಿಯಲ್ಲಿ ಹುಣಸೂರು ಲೋಕೋಪಯೋಗಿ ಇಲಾಖೆಯ ಇಇ ಸ್ಥಾನಕ್ಕೆ ತಮ್ಮ ಸಂಬಂಧಿಯೊಬ್ಬರನ್ನು ಕೂರಿಸಿ 40 ಲಕ್ಷ ಹಣ ಪಡೆದಿದ್ದಾರೆ ಎಂಬ ಆರೋಪವಿದೆ. ಕಳೆದ ವರ್ಷ ಕೊಡಗಿನ ಪ್ರವಾಹದಿಂದ ಮನೆ ಕಳಕೊಂಡವರಿಗೆ ಮನೆ ನಿರ್ಮಾಣಕ್ಕೆ ಕೆ.ಆರ್‌. ನಗರದ ಗುತ್ತಿಗೆದಾರರಿಗೆ ಗುತ್ತಿಗೆ ಕೊಡಿಸಿದ್ದಾರಲ್ಲ, ಅದಕ್ಕೆ ಪಡೆದ ಕಿಕ್‌ಬ್ಯಾಕ್‌ ಎಷ್ಟುಎಂದು ಜನರಿಗೆ ತಿಳಿಸಲಿ. ಮಹೇಶ್‌ ಅವರೆ ನೀವು ಇನ್ನೂ ರಾಜಕಾರಣದಲ್ಲಿ ಉತ್ತಮ ಸ್ಥಾನಕ್ಕೆ ಹೋಗಬೇಕಾಗಿದ್ದು ಈ ರೀತಿಯ ನಡೆ ಸರಿಯಲ್ಲ ಎಂದರು.

ಕಟೀಲು ದೇವಳ, ಉಡುಪಿ ಕೃಷ್ಣ ಮಠ ನಾಳೆ ತೆರೆಯುವುದಿಲ್ಲ

ರಾಜ್ಯ ಬಿಜೆಪಿ ಎಸ್ಸಿ ಮೋರ್ಚಾ ಉಪಾಧ್ಯಕ್ಷ ನಾಗರಾಜ ಮಲ್ಲಾಡಿ ಮಾತನಾಡಿ, ದಂದೆ ಎನ್ನುವ ಪದದ ಜನಕ ಈ ಸಾ.ರಾ. ಮಹೇಶ್‌ ಆಗಿದ್ದಾರೆ. ವರ್ಗಾವಣೆ ಎಲ್ಲ ಸರ್ಕಾರಗಳು ಬಂದಾಗ ನಡೆಯುವ ಸಹಜ ಪ್ರಕ್ರಿಯೆ. ಅದರಲ್ಲಿ ಕೋಟಿಗಟ್ಟಲೆ ಹಣ ನಡೆಯುತ್ತದೆ ಎಂದು ತಿಳಿದಿದ್ದೇ ಈ ವ್ಯಕ್ತಿ. ಸಮ್ಮಿಶ್ರ ಸರ್ಕಾರದ ಸಚಿವರಾಗಿದ್ದ ವೇಳೆ ಒಬ್ಬನೇ ಒಬ್ಬ ದಲಿತ ಅಧಿಕಾರಿಯನ್ನು ಜಿಲ್ಲೆಗೆ ಪ್ರವೇಶಿಸಲು ಬಿಡದ ದಲಿತ ವಿರೋಧಿ ಸಚಿವರಾಗಿದ್ದರು ಎಂದು ಕಿಡಿಕಾರಿದರು.

Follow Us:
Download App:
  • android
  • ios