ಮೈಸೂರು(ಡಿ.17): ಉಪಚುನಾವಣೆಯ ನಂತರ ಹುಣಸೂರು ಪರಾಜಿತ ಬಿಜೆಪಿ ಅಭ್ಯರ್ಥಿ ಎಚ್‌. ವಿಶ್ವನಾಥ್‌ ವಿರುದ್ಧ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದಿದ್ದ ಶಾಸಕ ಸಾರಾ ಮಹೇಶ್‌ ಇದೀಗ ಹಳ್ಳಿ ಹಕ್ಕಿ ಬಗ್ಗೆ ಮೃದು ಧೋರಣೆ ತಳೆದಿದ್ದಾರೆ.

ಚಾಮುಂಡಿ ಸನ್ನಿಧಿಯಲ್ಲಿ ವಿಶ್ವನಾಥ್‌ಗೆ ಎರಡು ಸವಾಲೆಸೆದ ಸಾರಾ ಮಹೇಶ್!

ಮೈಸೂರಿನಲ್ಲಿ ಮಾತನಾಡಿದ ಅವರು ಅನರ್ಹ ಶಾಸಕ ಹೆಚ್.ವಿಶ್ವನಾಥ್ ಬಗ್ಗೆ ಸಾಫ್ಟ್ ಕಾರ್ನಾರ್ ತೋರಿದ್ದಾರೆ. ಚುನಾವಣೆ ನಂತರ ವಿಶ್ವನಾಥ್ ವಿರುದ್ಧ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಸಾ.ರಾ.ಮಹೇಶ್ ಹೇಳಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿ, ಸದ್ಯ ವಿಶ್ವನಾಥ್ ಅವರೇ ನೋವಿನಲ್ಲಿದ್ದಾರೆ. ಈ ಸಂದರ್ಭದಲ್ಲಿ ಅದೇಲ್ಲಾ ಬೇಡ. ಮುಂದೆ ನೋಡೋಣ‌ ಬಿಡಿ ಎಂದು ಹೇಳಿದ್ದಾರೆ.

'ಹೆಸರಿನ ಹಿಂದೆ ಸಾರಾ ಇದ್ದವರೆಲ್ಲ ನನ್ನ ಸಹೋದರರಲ್ಲ..'!

ಸಾಲಿಗ್ರಾಮ ಗಲಭೆ ಬಗ್ಗೆ ಮಾತನಾಡಿದ ಅವರು, ಇದರ ಸಂಬಂಧ ತಲೆ ಮರೆಸಿಕೊಂಡವರೆಲ್ಲ ಸಿಕ್ಕಿದ ಮೇಲೆ ಶಾಂತಿ ಸಭೆ ನಡೆಸುತ್ತೇವೆ ಎಂದಿದ್ದಾರೆ. ಇದೇ ಸಂದರ್ಭ ಹುಣಸೂರು ಪರಾಜಿತ ಅಭ್ಯರ್ಥಿ ಹೆಚ್.ವಿಶ್ವನಾಥ್ ಬಗ್ಗೆ ಶಾಸಕ‌ ಸಾರಾ.ಮಹೇಶ್ ಮರುಕ ತೋರಿಸಿದ್ದಾರೆ.

ಮತ್ತೆ ಚಾಮುಂಡೇಶ್ವರಿ ಬಳಿ ಹೋಗಿ ಕ್ಷಮೆ ಕೇಳಿದ ಸಾರಾ!.

ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ವಿಶ್ವನಾಥ್ ಸೋಲನುಭವಿಸಿದ್ದರೂ, ಅವರಿಗೂ ಸಚಿವ ಸ್ಥಾನ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ.

PSI ಹುದ್ದೆ ಕೊಡಿಸ್ತೀನಿ ಎಂದು 31 ಲಕ್ಷ ರೂಪಾಯಿಗೂ ಹೆಚ್ಚು ವಂಚನೆ