ಮೈಸೂರು[ಅ.19]: ಅನರ್ಹ ಶಾಸಕ ಎಚ್‌. ವಿಶ್ವನಾಥ್‌ ಜೊತೆಗಿನ ರಾಜಕೀಯ ಸಂಘರ್ಷಕ್ಕಾಗಿ ಚಾಮುಂಡಿ ಬೆಟ್ಟ ಬಳಸಿಕೊಂಡ ಹಿನ್ನೆಲೆಯಲ್ಲಿ ಶುಕ್ರವಾರ ತಾಯಿ ಚಾಮುಂಡೇಶ್ವರಿ ಬಳಿ ಮಾಜಿ ಸಚಿವ ಸಾ.ರಾ.ಮಹೇಶ್‌ ಕ್ಷಮೆ ಯಾಚಿಸಿದರು.

'ವೈಶಂಪಾಯನ ಸರೋವರದಲ್ಲಿ ಅಡಗಿ ಕುಳಿತಂತೆ ಗುಡಿಯಲ್ಲೇಕೆ ಕುಳಿತೆ? ಬಾ...'

ಗುರುವಾರ ನಡೆದ ಆಣೆ, ಪ್ರಮಾಣದ ಹೈಡ್ರಾಮದಿಂದ ಬೇಸರಗೊಂಡಿದ್ದ ಅವರು ಶುಕ್ರವಾರ ಬೆಳಗ್ಗೆ ಚಾಮುಂಡಿಬೆಟ್ಟಕ್ಕೆ ಮತ್ತೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಗುರುವಾರ ನಡೆದ ಘಟನೆಯ ಬಗ್ಗೆ ದೇವರಲ್ಲಿ ಕ್ಷಮೆ ಕೋರಿದರು.

ಚಾಮುಂಡಿ ಸನ್ನಿಧಿಯಲ್ಲಿ ವಿಶ್ವನಾಥ್‌ಗೆ ಎರಡು ಸವಾಲೆಸೆದ ಸಾರಾ ಮಹೇಶ್!

ಬಳಿಕ ಮಾತನಾಡಿದ ಸಾ.ರಾ. ಮಹೇಶ್‌, ನಮ್ಮ ರಾಜಕಾರಣಕ್ಕೆ ತಾಯಿ ಸನ್ನಿಧಾನ ಬಳಸಿಕೊಂಡಿದ್ದು ತಪ್ಪು. ನಮ್ಮ ವೈಯಕ್ತಿಕ ವಿಚಾರಗಳಿಗೆ ತಾಯಿ ಸನ್ನಿಧಾನ ಬಳಸಿಕೊಂಡಿದ್ದಕ್ಕೆ ಚಾಮುಂಡೇಶ್ವರಿ ಮತ್ತು ನಾಡಿನ ಜನತೆ ಬಳಿ ಕ್ಷಮೆ ಕೋರುತ್ತೇನೆ. ನನ್ನನ್ನು ಕ್ಷಮಿಸು ತಾಯಿ ಎಂದು ಪ್ರಾರ್ಥಿಸಿದ್ದಾಗಿ ತಿಳಿಸಿದರು.