Asianet Suvarna News Asianet Suvarna News

ಚಾಮುಂಡಿ ಸನ್ನಿಧಿಯಲ್ಲಿ ವಿಶ್ವನಾಥ್‌ಗೆ ಎರಡು ಸವಾಲೆಸೆದ ಸಾರಾ ಮಹೇಶ್!

ವಿಶಿ-ಸಾರಾ ಆಣೆ ಪ್ರಮಾಣಕ್ಕೆ ಇಂದು ಸಾಕ್ಷಿಯಾಗುತ್ತಾ ಚಾಮುಂಡಿಬೆಟ್ಟ?| ನಾನು ಸದನದಲ್ಲಿ ಹೇಳಿದ್ದನ್ನು ಚಾಮುಂಡಿ ಮುಂದೆ ಆಣೆ ಮಾಡಿದ್ದೇನೆ| ನಾನು ಸದನದಲ್ಲಿ ಹೇಳಿದ ಮಾತಿಗೆ ಈಗಲೂ ಬದ್ಧ - ಸಾ.ರಾ.ಮಹೇಶ್

Karnataka politics Sara mahesh Two Questions To H Vishwanath At Chamundi Temple
Author
Bangalore, First Published Oct 17, 2019, 9:51 AM IST

ಮೈಸೂರು[ಅ.17]: ತಾನು ಖರೀದಿಸ್ಪಟ್ಟಿದ್ದೇನೆ ಆರೋಪ ಮಾಡಿರುವ ಸಾ.ರಾ.ಮಹೇಶ್‌ ಚಾಮುಂಡಿ ಬೆಟ್ಟಕ್ಕೆ ಕರೆ ತರಲಿ ಎಂಬ ಅನರ್ಹ ಶಾಸಕ ಎಚ್‌.ವಿಶ್ವನಾಥ್‌ ಅವರ ಸವಾಲನ್ನು ಸ್ವೀಕರಿಸಿರುವ ಮಾಜಿ ಸಚಿವ ಸಾ.ರಾ. ಮಹೇಶ್‌ ಗುರುವಾರದಂದು ಚಾಮುಂಡಿಬೆಟ್ಟಕ್ಕೆ ಬಂದಿದ್ದಾರೆ. ಅಲ್ಲದೇ ನಾನು ಸದನದಲ್ಲಿ ಹೇಳಿದ್ದನ್ನು ಚಾಮುಂಡಿ ಮುಂದೆ ಆಣೆ ಮಾಡಿದ್ದೇನೆ. ನನ್ನ ಮಾತಿಗೆ ಈಗಲೂ ಬದ್ಧ ಎಂದಿದ್ದಾರೆ.

ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಾ. ರಾ ಮಹೇಶ್ 'ಯಾವುದೇ ಕಾರಣಕ್ಕೂ ಮಾತಲ್ಲಿ ಬದಲಾವಣೆ ಇಲ್ಲ. ವೈಯಕ್ತಿಕ ಆರೋಪ ಸಾಬೀತು ಮಾಡಿದ್ರೆ ಕ್ಷಮೆಯಾಚಿಸುವೆ’ ಎಂದಿದ್ದಾರೆ. ನಿನ್ನೆ ಬುಧವಾರ ವಿಶ್ವನಾಥ್ ವಿರುದ್ಧ 25 ಕೋಟಿ ಮಾರಾಟವಾಗಿದ್ದಾರೆಂದು ಮಹೇಶ್ ಆರೋಪಿಸಿದ್ದರು.

"

ಪ್ರಚಾರಕ್ಕಾಗಿ ರಾಜೀನಾಮೆ ವಿಚಾರ ತೇಲಿ ಬಿಟ್ಟರಾ ಸಾ.ರಾ.ಮಹೇಶ್?

ಇನ್ನು ಚಾಮುಂಡಿ ಸನ್ನಿಧಿಯಲ್ಲಿ ವಿಶ್ವನಾಥ್‌ಗೆ ಸವಾಲೆಸೆದಿರುವ ಸಾ.ರಾ.ಮಹೇಶ್ 'ನನ್ನ ವೈಯಕ್ತಿಕ ಜೀವನದ ಬಗ್ಗೆ ಟೀಕೆ ಮಾಡಿದ್ದು ಸತ್ಯವೇ..? ನಾನು ಹಣಕ್ಕೆ ಮಾರಾಟವಾಗಿಲ್ಲ ಎಂದು ಆಣೆ ಮಾಡ್ಲಿ ನೋಡೋಣ' ಎಂದು ಗುಡುಗಿದ್ದಾರೆ.

ಈ ಪ್ರಶ್ನೆಗಳಿಗೆ ವಿಶ್ವನಾಥ್ ಉತ್ತರಿಸುತ್ತಾರಾ? ಆಣೆ ಪ್ರಮಾಣಕ್ಕೆ ಚಾಮುಂಡಿಬೆಟ್ಟ ಸಾಕ್ಷಿಯಾಗುತ್ತಾ? ಕಾದು ನೋಡಬೇಕಷ್ಟೇ

ಪ್ರಚಾರಕ್ಕಾಗಿ ರಾಜೀನಾಮೆ ವಿಚಾರ ತೇಲಿ ಬಿಟ್ಟರಾ ಸಾ.ರಾ.ಮಹೇಶ್?

ನಿನ್ನೆ ಬುಧವಾರ ಏನೇನಾಯ್ತು? 

ಸಾ.ರಾ. ಒಪ್ಪಿಗೆ:

ವಿಶ್ವನಾಥ್‌ ಬಗ್ಗೆ ನಾನು ಹೇಳಿರುವುದು ಸತ್ಯವೆಂದು ಪ್ರಮಾಣ ಮಾಡಲು ನಾನು ಗುರುವಾರ ಬೆಳಗ್ಗೆ 9 ಗಂಟೆಗೆ ಚಾಮುಂಡಿ ಬೆಟ್ಟಕ್ಕೆ ಹೋಗುತ್ತೇನೆ. ಆ ಸಂದರ್ಭದಲ್ಲಿ ನನ್ನ ಆರೋಪ ಸುಳ್ಳೆಂದು ವಿಶ್ವನಾಥ್‌ ಚಾಮುಂಡಿ ಸನ್ನಿಧಿಯಲ್ಲಿ ಪ್ರಮಾಣ ಮಾಡಿದರೆ ನಾನು ರಾಜ್ಯದ ಜನರ ಕ್ಷಮೆ ಯಾಚಿಸುತ್ತೇನೆ ಎಂದರು. ಇದೇವೇಳೆ ‘ಅವರು ಎಷ್ಟಕ್ಕೆ ಖರೀದಿಸಿದವರು ಎಂಬುದನ್ನು ಅವರೇ ಹೇಳಬೇಕು. ಅವರ ರಾಜೀನಾಮೆಯಿಂದ ಯಾರು ಮುಖ್ಯಮಂತ್ರಿಯಾಗಿದ್ದಾರೆ ಎಂಬುದು ಜನರಿಗೆ ಗೊತ್ತಿದೆ. ಅವರನ್ನು ಕರೆತರುವ ಅವಶ್ಯಕತೆಯಿಲ್ಲ, ವಿಶ್ವನಾಥ್‌ ಒಬ್ಬರೇ ಬಂದು ಆಣೆ ಮಾಡಲಿ’ ಎಂದಿದ್ದಾರೆ. ಈ ಮೂಲಕ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧವೂ ಪರೋಕ್ಷ ಆರೋಪ ಮಾಡಿದ್ದಾರೆ.

ಖದೀದಿಸಿದವನೂ ಬರಲಿ:

ಸಾ.ರಾ.ಮಹೇಶ್‌ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿರುವ ವಿಶ್ವನಾಥ್‌, ನಾಳೆ(ಗುರುವಾರ) ನಾನು ಬೆಟ್ಟಕ್ಕೆ ಹೋಗಿ ಪೂಜೆ ಮಾಡಿಸಿ ಅವರಿಗಾಗಿ ಕಾಯುತ್ತೇನೆ. ಅವರೊಂದಿಗೆ ನನ್ನನ್ನು ಖರೀದಿಸಿದವರೂ ಬರಲಿ. ಅವರೊಬ್ಬರೇ ಬೆಟ್ಟಕ್ಕೆ ಬಂದರೆ ಅವರ ಆರೋಪ ಸುಳ್ಳು ಅಂತ ಸಾಬೀತಾಗಲಿದೆ. ಆರೋಪ ಮಾಡಿದವರ ಮುಂದೆ ಹೋಗಿ ಆಣೆ ಮಾಡೋದೆ ಕೆಲಸವಾ ನನಗೆ ಎಂದು ಪ್ರಶ್ನಿಸಿದ್ದಾರೆ.

Follow Us:
Download App:
  • android
  • ios