ಬಿ.ಎಲ್.ಸಂತೋಷ್ 4 ಶಾಸಕರನ್ನು ಕರೆಸಿಕೊಳ್ಳಲಿ ನೋಡೋಣ: ಸಚಿವ ಶಿವರಾಜ ತಂಗಡಗಿ
ಸರ್ಕಾರದ ಯಾವುದೇ ಇಲಾಖೆಗೂ ಗ್ಯಾರಂಟಿ ಯೋಜನೆಗಳಿಂದ ಕೊರತೆ ಉಂಟಾಗಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಸ್ಪಷ್ಟಪಡಿಸಿದರು.
ರಾಮನಗರ (ಸೆ.04): ಸರ್ಕಾರದ ಯಾವುದೇ ಇಲಾಖೆಗೂ ಗ್ಯಾರಂಟಿ ಯೋಜನೆಗಳಿಂದ ಕೊರತೆ ಉಂಟಾಗಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಸ್ಪಷ್ಟಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆ ಜನರಿಗೆ ಕೊಟ್ಟಚುನಾವಣಾ ಪೂರ್ವ ಭರವಸೆ. ಕೊಟ್ಟ 5 ಗ್ಯಾರಂಟಿ ಯೋಜನೆಗಳಲ್ಲಿ ನಾಲ್ಕು ಯೋಜನೆ ಅನುಷ್ಠಾನಕ್ಕೆ ತರಲಾಗಿದೆ. ಕೆಲವೊಂದು ಯೋಜನೆಗೆ ಅನುದಾನ ಕಡಿಮೆ ಆದರೂ ಪರವಾಗಿಲ್ಲ. ಬಡವರಿಗೆ ಮುಟ್ಟುವ ಯೋಜನೆ ಮಾಡಿದ್ದೇವೆ. ಗ್ಯಾರಂಟಿ ಯೋಜನೆ ಜಾರಿ ಬಳಿಕ ಬಿಜೆಪಿಯವರಿಗೆ ಕೆಲಸ ಕಡಿಮೆ ಆಗಿದೆ. ಲೋಕಸಭೆ ಚುನಾವಣೆ ನಂತರ ಬಿಜೆಪಿಗೆ ಕೆಲಸವೇ ಇರಲ್ಲ ಎಂದು ವ್ಯಂಗ್ಯವಾಡಿದರು.
ಕೇವಲ 4 ಶಾಸಕರನ್ನು ಕರೆಸಿಕೊಳ್ಳಲಿ: 40 ಕಾಂಗ್ರೆಸ್ ಶಾಸಕರು ಬಿಎಲ್.ಸಂತೋಷ್ ಸಂಪರ್ಕದಲ್ಲಿದ್ದಾರೆಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಆಪರೇಷನ್ ಮಾಡೋದೇ ಬಿಜೆಪಿ ಕೆಲಸ. ಯಾವ ವರ್ಷ 113 ಸ್ಥಾನದಲ್ಲಿ ಗೆದ್ದು ಬಿಜೆಪಿ ಸರ್ಕಾರ ಮಾಡಿರುವ ಉದಾಹರಣೆ ಇದೆ ಹೇಳಿ? ಬಿಜೆಪಿಯವರು ನಮಗೂ ಮೋಸ ಮಾಡಿದರು. ಬಿಜೆಪಿಯವರಿಗೆ ಹೇಳಿ ಮಾಡಿರುವಂತ ವ್ಯವಧಾನ ಇಲ್ಲ. ಹೇಳಿದಂತೆ ಯಾವತ್ತೂ ಮಾಡಿಲ್ಲ ಎಂದು ಕುಟುಕಿದರು.
ವಿಜಯಪುರದಲ್ಲಿ ಹೊಟೇಲ್ ಉದ್ಯಮಿಯನ್ನ ಯಾಮಾರಿಸಿದ ಸೈಬರ್ ಕಳ್ಳರು: 8 ಅಕೌಂಟ್‌ಗೆ ಕನ್ನ!
ಬಿ.ಎಲ್.ಸಂತೋಷ್ 40 ಮಂದಿ ಬರುತ್ತಾರೆ ಅಂತಿದ್ದಾರಲ್ಲ, 4 ಮಂದಿಯನ್ನಾದರೂ ಕರೆಸಿಕೊಳ್ಳಲಿ ನೋಡೋಣ. ಈ ಹಿಂದೆ ನರೇಂದ್ರ ಮೋದಿಯವರೂ ಬಂದು ಬಹಳಷ್ಟುಸುಳ್ಳು ಹೇಳಿ ಹೋಗಿದ್ದಾರೆ. ಮಾತಾಡೊದೊಂದೇ ಬಿಜೆಪಿ ಚಟ. ಪ್ರಧಾನಿ ಮೋದಿ ಮೈಸೂರು, ಮಂಡ್ಯ, ರಾಮನಗರಕ್ಕೆ ಬಂದು ಸುಳ್ಳು ಹೇಳಿ ಹೋಗಿದ್ದಾರೆ. ನಾವು ಹಾಗಲ್ಲ, ನುಡಿದರೆ ನಡಿದ್ದೀವಿ. ಕಾಂಗ್ರೆಸ್‌ನಿಂದ ಆಪರೇಶನ್ ಹಸ್ತ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾವು 136 ಜನ ಇದೀವಿ, ನಮಗೆ ಅದರ ಅವಶ್ಯಕತೆ ಇಲ್ಲ. ಕಾಂಗ್ರೆಸ್ ಗ್ಯಾರಂಟಿ ಕೊಟ್ಟಿರೋ ಕಾರಣಕ್ಕೆ ಅವರು ಯಾಕೆ ಬಂದು ಮೀಟ್ ಮಾಡುತ್ತಾ ಇದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿಗೆ ಅಸ್ತಿತ್ವ ಇಲ್ಲ. ಅದಕ್ಕಾಗಿ ಅವರು ಕಾಂಗ್ರೆಸ್ ಸೇರಿಕೊಳುತ್ತಿದ್ದಾರೆ ಎಂದರು.
ಗ್ಯಾಸ್ ಬೆಲೆ ಇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಬಿಜೆಪಿಯವರು ಚುನಾವಣಾ ಗಿಮಿಕ್ ಮಾಡುತ್ತಾ ಇದ್ದಾರೆ. 10 ವರ್ಷ ಆಗುತ್ತಾ ಇದೆ ಅವರು ಅಧಿಕಾರಕ್ಕೆ ಬಂದು. ರೈತರಿಗೆ ಒಂದು ಎಕರೆ ನೀರಾವರಿ ಮಾಡಿದ್ದಾರಾ? ಒಂದು ಉದಾಹರಣೆ ಕೊಡಿ? ನಾವು ಮಾಡಿದ್ದ ಯೋಜನೆಯನ್ನು ತಾವು ಹೇಳಿಕೊಂಡು ಹೋಗುತ್ತಾ ಇದ್ದಾರೆ. ನಾವು ಕಟ್ಟಿದ ರೈಲ್ವೇ ಸ್ಟೇಷನ್ ಮಾರುತ್ತಾ ಇದ್ದಾರೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.
ರಾಜೀವ್ ಗಾಂಧಿ ಮೆಡಿಕಲ್ ಕಾಲೇಜು ಇಲ್ಲೇ ಇರಲಿದೆ: ಶಾಸಕ ಇಕ್ಬಾಲ್ ಹುಸೇನ್
ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮುನ್ನ ಪ್ರಧಾನಿ ನರೇಂದ್ರ ಮೋದಿ, ಅಧಿಕಾರಕ್ಕೆ ಬಂದ ಕೂಡಲೇ ವಿದೇಶದಲ್ಲಿರುವ ಕಪ್ಪು ಹಣ ತರುತ್ತೇವೆ. ಎರಡು ಕೋಟಿ ಯುವಕರಿಗೆ ಉದ್ಯೋಗ ನೀಡುತ್ತೇವೆ ಎಂದೆಲ್ಲ ಜನತೆಗೆ ಸುಳ್ಳು ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದರು. ಅದೆಲ್ಲ ಆಶ್ವಾಸನೆಯಾಗಿಯೇ ಉಳಿದಿದೆ. ವಿಧಾನಸಭಾ ಚುನಾವಣೆಯಲ್ಲಿ ಜನತೆ ಬಿಜೆಪಿಗರಿಗೆ ತಕ್ಕಪಾಠ ಕಲಿಸಿದರೂ ಆ ಪಕ್ಷದ ಮುಖಂಡರಿಗೆ ಬುದ್ದಿಬಂದಂತೆ ಕಾಣುತ್ತಿಲ್ಲ. ಆಪರೇಷನ್ ಕಮಲ ಮಾಡುವ ಕನಸು ಕಾಣುತ್ತಿದ್ದಾರೆ.
- ಶಿವರಾಜ ತಂಗಡಗಿ, ಸಚಿವ