Asianet Suvarna News Asianet Suvarna News

ಸಮಂತಾಳ ಯಶೋಧಾ ಸಿನಿಮಾ ರೀತಿ ಮಹಿಳೆಯರ ಗರ್ಭದಲ್ಲಿ ಮಕ್ಕಳನ್ನು ಬೆಳಸಿ, ಹೆರಿಗೆ ನಂತರ ಬೆಂಗಳೂರಲ್ಲಿ ಮಗು ಮಾರಾಟ!

ಬಹುಭಾಷಾ ನಟಿ ಸಮಂತಾ ಅವರ ಯಶೋಧಾ ಸಿನಿಮಾ ಮಾದರಿಯಲ್ಲಿ ಗರ್ಭಿಣಿಯರನ್ನು ಪ್ರತ್ಯೇಕವಾಗಿ ಕೂಡಿಟ್ಟು ಮಕ್ಕಳಾದ ನಂತರ ಮಾರಾಟ ಮಾಡುತ್ತಿದ್ದ ತಮಿಳುನಾಡಿನ ಗ್ಯಾಂಗ್ ಬೆಂಗಳೂರಿನಲ್ಲಿ ಅರೆಸ್ಟ್‌ ಆಗಿದೆ. 

Samantha Ruth Prabhu Yashoda movie model Tamil Nadu children selling gang arrest in Bangalore sat
Author
First Published Nov 28, 2023, 2:13 PM IST

ಬೆಂಗಳೂರು (ನ.28): ಬಹುಭಾಷಾ ನಟಿ ಸಮಂತಾ ರುತ್ ಪ್ರಭು ಅವರ ಯಶೋಧಾ ತೆಲುಗು ಸಿನಿಮಾ ಮಾದರಿಯಲ್ಲಿ ಬಾಡಿಗೆ ತಾಯ್ತನ ಹಾಗೂ ಹಣದ ಆಸೆಯೊಡ್ಡಿ ಮಹಿಳೆಯರ ಹೊಟ್ಟೆಯಲ್ಲಿ ಮಗುವನ್ನು ಬೆಳಸಿ ಹೆರಿಗೆಯಾದ ನಂತರ ಮಗುವನ್ನು 10 ಲಕ್ಷ ರೂ.ಗೆ ಮಾರಾಟ ಮಾಡುವ ತಮಿಳುನಾಡಿನ ಗ್ಯಾಂಗ್‌ ಅನ್ನು ಬೆಂಗಳೂರು ಪೊಲೀಸರು ಹೆಡೆಮುರಿ ಕಟ್ಟಿ ಜೈಲಿಗಟ್ಟಿದ್ದಾರೆ.'

ಸಮಂತಾ ಅವರ ಯಶೋಧಾ ಸಿನಿಮಾ ನೋಡಿದವರಿಗೆ ಬಡ ಹಾಗೂ ಮಧ್ಯಮ ವರ್ಗದ ಹುಡುಗಿಯರು, ಮಹಿಳೆಯರಿಗೆ ಲಕ್ಷಾಂತರ ರೂ. ಹಣವನ್ನು ಕೊಟ್ಟು ಕರೆದುಕೊಮಡು ಹೋಗಿ ಅವರ ಹೊಟ್ಟೆಯಲ್ಲಿ ಮಗುವಿನ ಭ್ರೂಣ ಬೆಳೆಸಲಾಗುತ್ತಿತ್ತು. ಎಲ್ಲ ಗರ್ಭಿಣಿಯರನ್ನು 9 ತಿಂಗಳು ಗುಪ್ತ ಸ್ಥಳದಲ್ಲಿ ಆರೈಕೆ ಮಾಡಿ ಸಿಸೇರಿಯನ್ ಹೆರಿಗೆ ಮಾಡಿ ಮಹಿಳೆಯರನ್ನು ಕೊಲೆ ಮಾಡಲಾಗುತ್ತಿತ್ತು. ಆದರೆ, ಮಕ್ಕಳನ್ನು ಮಾತ್ರ ಸಂಗ್ರಹಿಸಲಾಗುತ್ತಿತ್ತು. ಈ ಸಿನಿಮಾದ ಮಾದರಿಯಲ್ಲಿಯೇ ಸ್ವಲ್ಪ ವಿಭಿನ್ನವಾಗಿ ತಮಿಳುನಾಡಿನ ಗ್ಯಾಂಗ್‌ ಒಂದು ಮಹಿಳೆಯರನ್ನು ಪುಸಲಾಯಿಸಿ ಅವರ ಹೊಟ್ಟೆಯಲ್ಲಿ ಮಕ್ಕಳನ್ನು ಬೆಳೆಸಿ ಹೆರಿಗೆಯಾದ ನಂತರ ಅವರಿಗೆ 2 ಲಕ್ಷ ರೂ. ಹಣವನ್ನು ಕೊಟ್ಟು ಕಳುಹಿಸಲಾಗುತ್ತಿತ್ತು. ಇನ್ನು ಮಗುವನ್ನು ಬೆಂಗಳೂರಿನಲ್ಲಿ ಮಕ್ಕಳಿಲ್ಲದವರಿಗೆ 10 ಲಕ್ಷ ರೂ. ವರೆಗೆ ಮಾರಾಟ ಮಾಡಲಾಗುತ್ತಿತ್ತು. 

ಬೆಂಗಳೂರು ಜನರೇ ಎಚ್ಚರ: ಹಸುಗೂಸುಗಳನ್ನು ಮಾರಾಟ ಮಾಡುವ ಗ್ಯಾಂಗ್ ಎಲ್ಲೆಡೆ ಸಂಚಾರ

ಇನ್ನು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ 20 ದಿನದ ಮಗುವನ್ನು ಮಾರಾಟ ಮಾಡಲು ಮುಂದಾಗಿದ್ದ ಗ್ಯಾಂಗ್ ಅನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದರು. ಈಗ ಪ್ರಕರಣ ಬೇಧಿಸಿದ ನಂತರ ಮಗುವನ್ನು ಎಲ್ಲಿಂದ ತರಲಾಗುತ್ತಿತ್ತು ಎಂಬುದರ ಮಾಹಿತಿ ಸಂಪೂರ್ಣವಾಗಿ ಲಭ್ಯವಾಗಿದೆ. ಈ ಕಳೆದ ಮೂರು ವರ್ಷಗಳ ಹಿಂದೆ ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆಯುತ್ತಿದ್ದ ಈ ಖತರ್ನಾಕ್ ಗ್ಯಾಂಗ್‌ ಬಾಡಿಗೆ ತಾಯ್ತನದ ನಿಯಮ ಕಠಿಣವಾಗುತ್ತಿದ್ದಂತೆ ಮತ್ತೊಂದು ವಾಮ ಮಾರ್ಗವನ್ನು ಹುಡುಕಿಕೊಂಡಿದ್ದಾರೆ. ಯಶೋಧಾ ಸಿನಿಮಾದ ಮಾದರಿಯಲ್ಲಿಯೇ ಮಕ್ಕಳನ್ನು ಮಹಿಳೆಯರ ಹೊಟ್ಟೆಯಲ್ಲಿ ಬೆಳೆಸಿ, ಹೆರಿಗೆಯ ನಂತರ ಮಕ್ಕಳನ್ನು ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಮಕ್ಕಳ ಮಾರಾಟದ ಗ್ಯಾಂಗ್‌ನಿಂದ 2021ರಿಂದಲೂ ಈ ದಂಧೆಯನ್ನು ಮಾಡಲಾಗುತ್ತಿದೆ. 2021ಕ್ಕಿಂತ ಮೊದಲು ಬಾಡಿಗೆ ತಾಯಿಯಾಗಿ ಮಕ್ಕಳನ್ನು ಕೊಡಿಸೋ ಏಜೆಂಟ್ ಗಳಾಗಿ ಕೆಲಸ ಮಾಡುತ್ತಿದ್ದರು.ಆದ್ರೆ 2021 ರ‌ ನಂತರ ಬಾಡಿಗೆ ತಾಯಿ ಕೊಡಿಸೋದ್ರ ಕಾನೂನು ಕಠಿಣ ಮಾಡಲಾಗುತ್ತದೆ. ನಂತರ ಇವರ ವ್ಯವಹಾರದ ರೀತಿ ಬದಲಾಗುತ್ತದೆ. ಯಾರು ಅಬಾರ್ಷನ್ ಮಾಡಿಸೋಕೆ ಅಂತ ಆಸ್ಪತ್ರೆಗೆ ಬರ್ತಾರೆ ಅವರನ್ನ ಸಂಪರ್ಕ ಮಾಡಿ ಅವರಿಗೆ ಅಬಾರ್ಷನ್ ಮಾಡಿಸಬೇಡಿ, ನಾವು ನೋಡಿಕೊಳ್ತೀವಿ ಮಗುವನ್ನು ನಮಗೆ ಕೊಡಿ ಅಂತ ಮನವೊಲಿಕೆ ಮಾಡುತ್ತಿದ್ದರು.

ಭ್ರೂಣ ಲಿಂಗ ಪತ್ತೆ ಪ್ರಕರಣ; 2 ವರ್ಷದಲ್ಲಿ ಬರೋಬ್ಬರಿ 900 ಭ್ರೂಣ ಹತ್ಯೆ ಮಾಡಿರುವ ಪಾಪಿಗಳು!

ಮಕ್ಕಳನ್ನು ಕೊಡುವುದಾಗಿ ಮುಂದೆ ಬರುವ ಗರ್ಭಿಣಿಯರನ್ನು ಅವರಿಗೆ ಮಗು ಆಗೋವರೆಗೂ ಕೇರ್ ಟೇಕ್ ಮಾಡ್ತಾ ಇದ್ದರು.ಇನ್ನು ಕೆಲವರನ್ನು ಅವರ ಸ್ವಂತ ಮನೆಯಲ್ಲಿ ಇರಲು ಆಗದವರಿಗೆ ಇವರೇ ವಾಸ್ತವ್ಯಕ್ಕೂ ವ್ಯವಸ್ಥೆ ಮಾಡುತ್ತಿದ್ದರು. ಮಗು ಜನಿಸಿದ ಬಳಿಕ‌ ಮಗುವನ್ನು ಪಡೆದು ಅವರಿಗೆ ಹಣವನ್ನು ಕೊಟ್ಟು ಕಳುಹಿಸುತ್ತಿದ್ದರು. ಒಂದು ಮಗುವಿಗೆ 2 ಲಕ್ಷ ಹಣ ಕೊಡುತ್ತಿದ್ದರು. ಆದರೆ, ಮಹಿಳೆಯರಿಂದ ಪಡೆದ ಮಗುವನ್ನು ಪಡೆದ ಬಳಿಕ ಬೇರೆಯವರಿಗೆ 8-10 ಲಕ್ಷಕ್ಕೆ ಮಾರಾಟ ಮಾಡುತ್ತಿದ್ದರು. ಮಕ್ಕಳ ಬಣ್ಣ, ಲಿಂಗದ ಆಧಾರದ ಮೇಲೆ ದರ ನಿಗದಿ (Rate Fix) ಮಾಡುತ್ತಿದ್ದರು. ಇನ್ನು ಹೆಣ್ಣು ಮಕ್ಕಳಾದ್ರೆ 4-5 ಲಕ್ಷ ರೂ. ಹಾಗೂ ಗಂಡು  ಮಕ್ಕಳಾದರೆ 8-10 ಲಕ್ಷ ರೂ. ದರ ನಿಗದಿ ಮಾಡುತ್ತಿದ್ದರು.

Follow Us:
Download App:
  • android
  • ios