ಭ್ರೂಣ ಲಿಂಗ ಪತ್ತೆ ಪ್ರಕರಣ; 2 ವರ್ಷದಲ್ಲಿ ಬರೋಬ್ಬರಿ 900 ಭ್ರೂಣ ಹತ್ಯೆ ಮಾಡಿರುವ ಪಾಪಿಗಳು!

ಭ್ರೂಣಲಿಂಗ ಪತ್ತೆ ಹಚ್ಚಿ ಭ್ರೂಣ ಹತ್ಯೆ ಮಾಡಿಸುತ್ತಿದ್ದ ಖತರ್ನಾಕ್ ಗ್ಯಾಂಗ್‌ವೊಂದನ್ನು ಬೈಯಪ್ಪನಹಳ್ಳಿ ಪೊಲೀಸರು ಬಯಲಿಗೆಳೆದಿದ್ದಾರೆ. ಎರಡು ವರ್ಷದಲ್ಲಿ ಬರೋಬ್ಬರಿ 900ಹೆಚ್ಚು ಭ್ರೂಣಲಿಂಗ ಹತ್ಯೆ ಮಾಡಿಸಿರುವ ಗ್ಯಾಂಗ್ ಪೊಲೀಸರೇ ದಂಗಾಗಿದ್ದಾರೆ.

Baiyappanahalli police arrested the accused who were finding and killing the fetus at bengaluru rav

ಬೆಂಗಳೂರು (ನ.25): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭ್ರೂಣ ಲಿಂಗ ಪತ್ತೆ ದಂಧೆ ನಡೆಸುತ್ತಿದ್ದ ಜಾಲವನ್ನು ಬೆಂಗಳೂರಿನ ಬೈಯಪ್ಪನಹಳ್ಳಿ ಪೊಲೀಸರು ಭೇದಿಸಿದ್ದಾರೆ. ಈ ಗ್ಯಾಂಗ್ ಎಂಥಾ ಖತರ್ನಾಕ್ ಎಂದರೆ ಮೊದಲಿಗೆ ಗರ್ಭಿಣಿಯರನ್ನು ಹುಡುಕುತ್ತಿದ್ದ ಗ್ಯಾಂಗ್ ಬಳಿಕ  ಗರ್ಭಿಣಿಯರ ಭ್ರೂಣ ಲಿಂಗ ಪತ್ತೆ ಹಚ್ಚಿ, ಹೆಣ್ಣು ಮಗು ಎಂದು ಗೊತ್ತಾದರೆ ಸಾಕು ಗರ್ಭಪಾತ ಮಾಡಿಸಲು ಸ್ಕೆಚ್‌ ಹಾಕುತ್ತಿದ್ದ ಗ್ಯಾಂಗ್ ಈ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಆರೋಪಿಗಳ ಮನೆಹಾಳ ಕೃತ್ಯಕ್ಕೆ ಪೊಲೀಸರೇ ದಂಗಾಗಿದ್ದಾರೆ.

ಪ್ರಕರಣದಲ್ಲಿ ವೈದ್ಯರೂ ಭಾಗಿ:

ಮೊದಲಿಗೆ ಭ್ರೂಣ ಲಿಂಗ ಪತ್ತೆ ಪ್ರಕರಣದ ಬೆನ್ನುಹತ್ತಿದ ಪೊಲೀಸರು, ಮೊದಲಿಗೆ  ಶಿವನಂಜೇಗೌಡ. ವೀರೇಶ್ ,ನವೀನ್ ಮತ್ತು ನಯನ್ ಎಂಬುವವರನ್ನು ಅರೆಸ್ಟ್ ಮಾಡಲಾಗಿತ್ತು ಈ ಗ್ಯಾಂಗ್ ವಿಚಾರಣೆ ಬಳಿಕ ಈ ಪ್ರಕರಣದಲ್ಲಿ ವೈದ್ಯರೂ ಸಹ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಚನ್ನೈ ಮೂಲದ ಡಾ ತುಳಸಿರಾಮ್, ಮೈಸೂರಿನ ಖಾಸಗಿ ಆಸ್ಪತ್ರೆಯ ರಿಸಪ್ಷನಿಷ್ಟ್ ರೀಜ್ಮಾ, ಡಾ.ಚಂದನ್ ಬಲ್ಲಾಳ್ (ಮೈಸೂರಿನ ಮಾತಾ ಅಸ್ಪತ್ರೆಯ ಮಾಲಿಕ) ಡಾ‌‌.ಚಂದನ್ ಬಲ್ಲಾಳ್ ಪತ್ನಿ ಮೀನಾ, ಲ್ಯಾಬ್ ಟೆಕ್ನೀ಼ಶಿಯನ್ ನಿಸ್ಸಾರ್ ಅರೆಸ್ಟ್ ಮಾಡಲಾಗಿದೆ.

ಕಾನೂನುಬಾಹಿರವಾಗಿ ಹೆಣ್ಣು ಭ್ರೂಣಲಿಂಗ ಪತ್ತೆ: ಯಶ್‌ ಹಾಸ್ಪಿಟಲ್‌ಗೆ ನೋಟಿಸ್‌

ಒಟ್ಟು ಒಂಬತ್ತು ಜನರು ಸೇರಿ ಸಿಂಡಿಕೇಟ್ ಮಾಡಿಕೊಂಡು ವ್ಯವಸ್ಥಿತವಾಗಿ ಕೃತ್ಯ ಎಸಗುತಿದ್ದ ಗ್ಯಾಂಗ್. ಆರೋಪಿಗಳು ಕೇವಲ ತಿಂಗಳಲ್ಲಿ 20-25 ಭ್ರೂಣ ಹತ್ಯೆ ಮಾಡ್ತಿದ್ದ ಬಗ್ಗೆ ಮಾಹಿತಿ ಸಿಕ್ಕಿದೆ. ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಕೃತ್ಯ ಎಸಗುತಿದ್ದು ಪೊಲೀಸ್ ತನಿಖೆ ವೇಳೆ ಬೆಳಕಿಗೆ ಬಂದಿದೆ. ಮೈಸೂರಿನ ಉದಯಗಿರಿಯಲ್ಲಿನ ಮಾತಾ ಆಸ್ಪತ್ರೆ ಮತ್ತು ರಾಜ್ ಕುಮಾರ್ ರಸ್ತೆಯ ಆಯುರ್ವೇದಿಕ್ ಫೈಲ್ಸ್ ಡೇ ಕೇರ್ ಸೆಂಟರ್ ಸೀಜ್ ಮಾಡಿದ ಪೊಲೀಸರು. ಹೆಣ್ಣು ಭ್ರೂಣ ಹತ್ಯೆಯನ್ನು ಇದೇ ಡೇ ಕೇರ್‌ನಲ್ಲಿ ನಡೆಸುತ್ತಿದ್ದ ಗ್ಯಾಂಗ್.

ಎರಡು ವರ್ಷಗಳಲ್ಲಿ 900 ಹೆಣ್ಣು ಭ್ರೂಣ ಹತ್ಯೆ:

ಈ ಗ್ಯಾಂಗ್ ಕಳೆದ ಎರಡು ವರ್ಷಗಳಲ್ಲಿ ಸುಮಾರು 900 ಹೆಣ್ಣು ಭ್ರೂಣ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಪೊಲೀಸ್ ತನಿಖೆ ವೇಳೆ ಬೆಳಕಿಗೆ ಬಂದಿದೆ. ಹೆಚ್ಚಿನ ತನಿಖೆ ಮುಂದುರೆಸಿರುವ ಬೈಯಪ್ಪನಹಳ್ಳಿ ಪೊಲೀಸರು ಕಳೆದ ಅಕ್ಟೋಬರ್ ನಲ್ಲಿ ಪ್ರಕರಣ ಸಂಬಂಧ ಮೊದಲ ಕೇಸ್ ದಾಖಲು ಮಾಡಿದ್ದ ಪೊಲೀಸರು.  ತನಿಖೆ ವೇಳೆ ಪೊಲೀಸರಿಗೆ ಸಿಕ್ಕ  ಒಂದು ಮಾಹಿತಿ ಆಧರಿಸಿ ಕಾರ್ಯಚರಣೆ ನಡೆಸಿದ್ದ ಪೊಲೀಸರು. ಮೊದಲಿಗೆ ನಾಲ್ವರು  ಆರೋಪಿಗಳು ಸಹಿತ ಸ್ಕ್ಯಾನಿಂಗ್ ಮಿಷಿನ್ ಗಳನ್ನು ವಶಕ್ಕೆ ಪಡೆಯಲಾಗಿತ್ತು. ಒಂದು ಭ್ರೂಣ ಪತ್ತೆ ಮಾಡಲಿಕ್ಕೆ 20 ರಿಂದ 25  ಸಾವಿರ ಹಣ ಪಡೆಯುತ್ತಿದ್ದ ಖದೀಮರು. ಒಟ್ಟು ಐವತ್ತು ಸಾವಿರಕ್ಕೆ ಒಂದು ಭ್ರೂಣ ಹತ್ಯೆ ಮಾಡ್ತಿದ್ದರು. ಈ ಗ್ಯಾಂಗ್‌ನಲ್ಲಿ ಎರಡು ವರ್ಗ ಮಾಡಿಕೊಂಡಿದ್ದರು. ಮೊದಲನೆ ಗ್ಯಾಂಗ್ ಭ್ರೂಣ ಪತ್ತೆ ಮಾಡುವ ಗ್ಯಾಂಗ್, ಇನ್ನೊಂದು ಭ್ರೂಣ ಹತ್ಯೆ ಮಾಡುತ್ತಿದ್ದ ಗ್ಯಾಂಗ್. ಎರಡು ಗ್ಯಾಂಗ್ ಆಗಿ ಕೆಲಸ ಮಾಡ್ತಿದ್ದ ಅರೋಪಿಗಳು. ಮುಂದಿನ ತನಿಖೆ ವೇಳೆ ಉಳಿದ ಐವರು ಅರೆಸ್ಟ್ ಆಗಿದ್ದಾರೆ. ಇಬ್ಬರು ವೈದ್ಯರೂ ಸೇರಿ ಒಂಬತ್ತು ಜನರನ್ನು ಅರೆಸ್ಟ್ ಮಾಡಿಸಿರುವ ಬೈಯಪ್ಪನಹಳ್ಳಿ ಪೊಲೀಸರು. 

ಭ್ರೂಣಲಿಂಗ ಪತ್ತೆ ಕೇಂದ್ರಗಳ ಮೇಲೆ ದಾಳಿಗೆ ಹೈಕೋರ್ಟ್‌ ಆದೇಶ

ಪೂರ್ವ ವಿಭಾಗದ ಡಿಸಿಪಿ ದೇವರಾಜ್‌ ಹೇಳೋದೇನು?

ಭ್ರೂಣ ಹತ್ಯೆ ಪ್ರಕರಣ ಸಂಬಂಧ ಕಳೆದ ಹದಿನೈದು ದಿನಗಳ ಹಿಂದೆ ಬೈಯಪ್ಪನಹಳ್ಳಿಯಲ್ಲಿ ಒಂದು ಕೇಸ್ ದಾಖಲಾಗಿತ್ತು. ಮಂಡ್ಯ ಮೂಲದ ನಾಲ್ವರು ವ್ಯಕ್ತಿಗಳು ಬೆಂಗಳೂರಿನ ಆಸ್ಪತ್ರೆಗಳಿಗೆ ಭ್ರೂಣ ಪತ್ತೆ ಗೆ ಬರುವವರ ಮಾಹಿತಿ ಕಲೆಹಾಕಿದ್ರು. ಈ ಮಾಹಿತಿ ತಿಳಿದ ಪೊಲೀಸರು ಆ ನಾಲ್ವರನ್ನು  ಬಂಧಿಸಿ ವಿಚಾರಣೆ ನಡೆಸಿದ್ರು. ಭ್ರೂಣ ಪತ್ತೆಗೆ ಮಂಡ್ಯದ ಕಬ್ಬಿನ ಗದ್ದೆಯಲ್ಲಿ ಶೀಟ್ ಮನೆ ಮಾಡಿಕೊಂಡು ಅದರಲ್ಲಿ ಸ್ಕ್ಯಾನಿಂಗ್ ಮಾಡಿದ್ರು. ಪೊಲೀಸರು ದಾಳಿ ನಡೆಸಿ ಸ್ನ್ಕಾನಿಂಗ್ ಮೆಷಿನ್ ಸೇರಿದಂತೆ ಕೆಲ ವಸ್ತುಗಳನ್ನು ವಶಕ್ಕೆ ಪಡೆದಿದ್ರು. ಬಳಿಕ ಹೆಚ್ಚಿನ ವಿಚಾರಣೆ ವೇಳೆ ಕೆಲ ಆಸ್ಪತ್ರೆ ಗಳು ಮತ್ತು ವೈದ್ಯರು ಭಾಗಿಯಾಗಿರೋದು ಗೊತ್ತಾಗಿತ್ತು. ಭ್ರೂಣ ಪತ್ತೆಯ ಜೊತೆಗೆ ಹತ್ಯೆ ಕೂಡ ಮಾಡ್ತಿರೋದು ಬೆಳಕಿಗೆ ಬಂತು. ಮೈಸೂರು ಮಾತಾ ಆಸ್ಪತ್ರೆಯ ಚಂದನ್ ಬಲ್ಲಾಳ್ ಮತ್ತು ಪತ್ನಿ ಮೀನಾ ಬಲ್ಲಾಳ್,  ಮತ್ತೊಬ್ಬ ವೈದ್ಯ ಡಾ, ತುಳಸಿರಾಮ್ , ರಿಸ್ಜ್ಮಾ  ಮಧ್ಯವರ್ತಿ ಯಾಗಿ ಕೆಲಸ ಮಾಡಿ ಭ್ರೂಣ ಪತ್ತೆ ಮತ್ತು ಹತ್ಯೆ ಮಾಡ್ತಿದ್ರು. ಕಳೆದ ಎರಡು ಮೂರು ವರ್ಷಗಳಿಂದ ಈ ಗ್ಯಾಂಗ್ ಈ ರೀತಿ ಕೃತ್ಯವೆಸಗ್ತಿರೋದು ಗೊತ್ತಾಗಿದೆ. ಸದ್ಯ ಈ ಪ್ರಕರಣದ ತನಿಖೆ ಮುಂದುವರೆಸಿದ್ದೇವೆ, ಬೇರೆ ಆಸ್ಪತ್ರೆಗಳು ಭಾಗಿಯಾಗಿದ್ದಾವ ಅನ್ನೋ ಬಗ್ಗೆ ಪರಿಶೀಲನೆ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios