Asianet Suvarna News Asianet Suvarna News

ಬೆಂಗಳೂರು ಜನರೇ ಎಚ್ಚರ: ಹಸುಗೂಸುಗಳನ್ನು ಮಾರಾಟ ಮಾಡುವ ಗ್ಯಾಂಗ್ ಎಲ್ಲೆಡೆ ಸಂಚಾರ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 15ರಿಂದ 20 ದಿನಗಳ ಹಸುಗೂಸುಗಳನ್ನು ಕದ್ದು ಮಾರಾಟ ಮಾಡುವ ಗ್ಯಾಂಗ್‌ ಸಕ್ರಿಯವಾಗಿದ್ದು, ಸಿಸಿಬಿ ಪೊಲೀಸರು ಒಂದು ತಂಡವನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. 

Bengaluru people beware children selling gangs are active in bangalore surrounding sat
Author
First Published Nov 27, 2023, 4:32 PM IST

ಬೆಂಗಳೂರು (ನ.27): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಜಗತ್ತಿನ ಪರಿಜ್ಞಾನವೇ ಇಲ್ಲದೇ ಆಗ ತಾನೇ ಜಗತ್ತನ್ನು ನೋಡಲು ಆರಂಭಿಸುವ ಹಾಲುಗಲ್ಲದ ಹಸುಗೂಸುಗಳನ್ನು ಕದ್ದು ಮಾರಾಟ ಮಾಡುವ ಗ್ಯಾಂಗ್‌ ಸಕ್ರಿಯವಾಗಿ ಓಡಾಡುತ್ತಿದೆ. ಮಕ್ಕಳಿಲ್ಲದವರಿಗೆ ಮಗುವನ್ನು ನೀಡುವುದಕ್ಕಾಗಿ ಆಸ್ಪತ್ರೆ, ಮನೆಗಳು ಹಾಗೂ ಒಬ್ಬಂಟಿ ಮಹಿಳೆಯರು ಇರುವಮನೆಗಳಿಂದ ಮಕ್ಕಳನ್ನು ಕಳ್ಳತನ ಮಾಡಿ ಮಾರಾಟ ಮಾಡುವ ಗ್ಯಾಂಗ್ ನಗರದಲ್ಲಿ ಓಡಾಡುತ್ತಿದೆ. ಈಗ ಪೊಲೀಸರು ಒಂದು ಗ್ಯಾಂಗ್ ಸೆರೆಹಿಡಿದು ಜೈಲಿಗಟ್ಟಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ಹಸುಗೂಸುಗಳ ಮಾರಾಟ ದಂಧೆ ಬಯಲಿಗೆ ಬಂದಿದೆ. ಹಾಲುಗಲ್ಲದ ಕಂದಮ್ಮಗಳನ್ನ ಲಕ್ಷ ಲಕ್ಷ ಹಣಕ್ಕೆ ಮಾರಾಟ ಮಾಡಲಾಗುತ್ತಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ನಡೆದಿರೊ ಘಟನೆ ಈಗ ಬೆಳಕಿಗೆ ಬಂದಿದೆ. ರಾಜರಾಜೇಶ್ವರಿ ನಗರದಲ್ಲಿ ಹಸುಗೂಸು ಮಾರಾಟ ಮಾಡುವ ತಂಡವನ್ನು ಸಿಸಿಬಿ ಪೊಲೀಸರು ರೆಡ್ ಹ್ಯಾಂಡ್‌ ಆಗಿ ವಶಕ್ಕೆ ಪಡೆದಿದೆ. ಈ ಖತರ್ನಾಕ್‌ ಗ್ಯಾಂಗ್ ಯಾರದ್ದೋ ಮಗುವನ್ನ ಯಾರದ್ದೋ ಮಡಿಲಿಗೆ ಸೇರಿಸುತ್ತಿದ್ದಾಗ ಅರೆಸ್ಟ್‌ ಆಗಿ ಜೈಲು ಸೇರಿದೆ.

ಅಯ್ಯಪ್ಪ ಮಾಲಾಧಾರಿಗಳಿಗೆ ಕೆಎಸ್ಆರ್‌ಟಿಸಿ ಗುಡ್‌ನ್ಯೂಸ್ : ಶಬರಿಮಲೆಗೆ ವೋಲ್ವೋ ಬಸ್ ಸೇವೆ ಆರಂಭ

ಬೆಂಗಳೂರಿನಲ್ಲಿ ಮಕ್ಕಳಾಗದ ಹಾಗೂ ಒಬ್ಬಂಟಿ ಮಕ್ಕಳನ್ನು ಕಳೆದುಕೊಂಡ ಶ್ರೀಮಂತ ದಂಪತಿಗಳನ್ನು ಟಾರ್ಗೆಟ್‌ ಮಾಡುತ್ತಿದ್ದ ಈ ಖತರ್ನಾಕ್‌ ಗ್ಯಾಂಗ್ ಸುಲಭವಾಗಿ ಮೋಸದ ಹಾದಿಯ ಮೂಲಕ ಲಕ್ಷ ಲಕ್ಷ ರೂಪಾಯಿ ಹಣವನ್ನು ಗಳಿಕೆ ಮಾಡುತ್ತಿತ್ತು. ಸುಮಾರು 15 ರಿಂದ 20 ದಿನದ ಹಸುಗೂಸುಗಳನ್ನು ಎತ್ತಿಕೊಂಡು ಬರುತ್ತಿದ್ದ ಈ ಖದೀಮರು ಮೊಲದೇ ಹಣ ಫಿಕ್ಸ್ ಮಾಡಿಕೊಂಡ ದಂಪತಿಗೆ ಮಗುವನ್ನು ಮಾರಾಟ ಮಾಡಿ ಹೋಗುತ್ತಿದ್ದರು. ಹೀಗೆ ಸಮಾಜಬಾಹಿರ ಕೆಲಸ ಮಾಡುತ್ತಿದ್ದ ಗ್ಯಾಂಗ್ ಆರ್ ಆರ್ ನಗರದಲ್ಲಿ ಸಿಸಿಬಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದೆ.

ಕೊರೊನಾ ಮಾದರಿಯಲ್ಲೇ ಮತ್ತೊಂದು ಮಾರಕ ಚೀನಾ ವೈರಸ್ ಪತ್ತೆ: ದಿಢೀರ್ ತಜ್ಞರ ಸಭೆ ಕರೆದ ಸರ್ಕಾರ

ತಮಿಳುನಾಡು ಮೂಲದ ಕಣ್ಣನ್ ರಾಮಸ್ವಾಮಿ, ಮುರುಗೇಶ್ವರಿ, ಹೇಮಲತಾ, ಶರಣ್ಯ ಎಂಬುವರ ಬಂಧನ ಮಾಡಲಾಗಿದೆ. ರೆಡ್ ಕಲರ್ ಶಿಫ್ಟ್ ಕಾರಿನಲ್ಲಿ ಮಗು ಮಾರಾಟಕ್ಕೆ ಬಂದ ವೇಳೆ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. ಮಹಾಲಕ್ಷ್ಮಿ ಎಂಬುವರು ಮಗು ಮಾರಿಸಲು ಕರೆಸಿದ್ದರು ಅಂತಾ ಆರೋಪಿಗಳು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ. ಇನ್ನೂ ಹೆಚ್ಚಿನ ಮಕ್ಕಳನ್ನ ಮಾರಿರೊ ಶಂಕೆಯಿದ್ದು ಪೊಲೀಸರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಸದ್ಯ ಆರೋಪಿಗಳ ಬಳಿಯಿದ್ದ 20 ದಿನದ ಗಂಡು ಮಗುವನ್ನು ರಕ್ಷಣೆ ಮಾಡಲಾಗಿದೆ. ಇನ್ನು ಮಗುವನ್ನು ಎಲ್ಲಿ ಕದಿಯಲಾಗಿದೆ ಅಥವಾ ಎಲ್ಲಿಂದ ಕರೆತರಲಾಗಿದೆ ಎಂಬುದರ ಬಗ್ಗೆ ಪೊಲೀಸರು ಮೂಲವನ್ನು ಪತ್ತೆ ಮಾಡುತ್ತಿದ್ದಾರೆ.

Latest Videos
Follow Us:
Download App:
  • android
  • ios