Asianet Suvarna News Asianet Suvarna News

ಬಾದಾಮಿ: ಮೃತ ಪ್ರಥಮ ದರ್ಜೆ ಸಹಾಯಕನ ಖಾತೆಗೆ ವೇತನ..!

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಚಿಕ್ಕಮುಚ್ಚಳಗುಡ್ಡ ಗ್ರಾಮದ ಸರ್ಕಾರಿ ಆದರ್ಶ ಮಹಾವಿದ್ಯಾಲಯದಲ್ಲಿ ಇಂಥ ಪ್ರಸಂಗ ನಡೆದಿದೆ. ಒಂದು ವರ್ಷದ ಹಿಂದೆಯೇ (2022ರ ಜ.3ರಂದು) ಆದರ್ಶ ವಿದ್ಯಾಲಯದ ಪ್ರಥಮ ದರ್ಜೆ ಸಹಾಯಕ ಬಸವರಾಜ ಉಂಕಿ ಮೃತಪಟ್ಟಿದ್ದಾರೆ. ಆದರೆ, ಎಚ್‌ಆರ್‌ಎಂಎಸ್‌ ತಂತ್ರಾಂಶದಲ್ಲಿ ಮರಣ ಹೊಂದಿದ ಪ್ರ.ದ.ಸ.ನ ವೇತನ ನಮೂದು ಮಾಡಿದ್ದು, ಅವರ ಖಾತೆಗೆ 80634 ಜಮೆ. 

Salary on Account of Deceased FDA at Badami in Bagalkot grg
Author
First Published Aug 11, 2023, 8:47 PM IST

ಬಾದಾಮಿ(ಆ.11): ಆದರ್ಶ ಮಹಾವಿದ್ಯಾಲಯದ ಮೃತಪಟ್ಟ ಪ್ರಥಮ ದರ್ಜೆ ಸಹಾಯಕನ ಖಾತೆಗೆ ಒಂದು ತಿಂಗಳ ವೇತನ ಜಮೆಯಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ. ತಾಲೂಕಿನ ಚಿಕ್ಕಮುಚ್ಚಳಗುಡ್ಡ ಗ್ರಾಮದ ಸರ್ಕಾರಿ ಆದರ್ಶ ಮಹಾವಿದ್ಯಾಲಯದಲ್ಲಿ ಇಂಥ ಪ್ರಸಂಗ ನಡೆದಿದೆ. ಒಂದು ವರ್ಷದ ಹಿಂದೆಯೇ (2022ರ ಜ.3ರಂದು) ಆದರ್ಶ ವಿದ್ಯಾಲಯದ ಪ್ರಥಮ ದರ್ಜೆ ಸಹಾಯಕ ಬಸವರಾಜ ಉಂಕಿ ಮೃತಪಟ್ಟಿದ್ದಾರೆ. ಆದರೆ, ಎಚ್‌ಆರ್‌ಎಂಎಸ್‌ ತಂತ್ರಾಂಶದಲ್ಲಿ ಮರಣ ಹೊಂದಿದ ಪ್ರ.ದ.ಸ.ನ ವೇತನ ನಮೂದು ಮಾಡಿದ್ದು, ಅವರ ಖಾತೆಗೆ 80634 ಜಮೆಯಾಗಿದೆ.

ಬಸವರಾಜ ಉಂಕಿ ಮರಣ ಹೊಂದಿ 15 ತಿಂಗಳಾಗಿದ್ದು, ಎಚ್‌ಆರ್‌ಎಂಎಸ್‌ ತಂತ್ರಾಂಶದಲ್ಲಿ ಮರಣದ ದಾಖಲೆಯೊಂದಿಗೆ ವೇತನ ನಮೂದನ್ನು ಡಿಲೀಟ್‌ ಮಾಡಬೇಕಾಗಿತ್ತು. ಆದರೆ, ಶಾಲೆ ಮುಖ್ಯ ಶಿಕ್ಷಕರ ಬೇಜವಾಬ್ದಾರಿಯಿಂದ ಅದು ಹಾಗೇ ಉಳಿದಿದ್ದು, ಖಾತೆಗೆ ವೇತನ ಹಣ ಜಮೆಯಾಗಿ ಬಿಟ್ಟಿದೆ.

ಡಿಪ್ಲೋಮಾ ಓದಿ ಆರಂಭಿಸಿದ ಮುಸ್ಲಿಮ್ ಯುವಕರ ಟೀ ಶಾಪಿಗೆ ಜನರು ಫಿದಾ!

2022ರ ಜನವರಿಯಿಂದ 2023ರ ಮಾಚ್‌ರ್‍ವರೆಗೆ ಯಾವುದೇ ಹಣ ಜಮೆಯಾಗಿಲ್ಲ. ಆದರೆ, ಏಪ್ರಿಲ್‌ 2023ರ ವೇತನ ಮಾತ್ರ ಜಮೆಯಾಗಿದೆ. ಮುಖ್ಯಾಧ್ಯಾಪಕರು ಮೃತನ ಪತ್ನಿಗೆ ಲಿಖಿತ ಪತ್ರ ಕಳಿಸಿದ್ದು, ಅಚಾತುರ್ಯದಿಂದ ವೇತನ ನಿಮ್ಮ ಪತಿಯ ಖಾತೆಗೆ ಜಮೆಯಾಗಿದ್ದು, ಅದನ್ನು ಮರಳಿ ಭರಿಸಿ ಎಂದು ಕೋರಿದ್ದಾರೆ.

ಇತ್ತ, ಶಾಲೆ ಎಸ್‌ಡಿಎಂಸಿಯವರು ಮುಖ್ಯ ಶಿಕ್ಷಕರು ಬೇಜವಾಬ್ದಾರಿ ತೋರಿದ್ದರಿಂದ ವೇತನ ಬಟಾವಡೆಯಾಗಿದ್ದು, ಮು.ಶಿಕ್ಷಕ ರಾಮಚಂದ್ರ ಭಜಂತ್ರಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಇಲಾಖೆ ಹಿರಿಯ ಅಧಿಕಾರಿಗಳ ಗಮನ ಸೆಳೆದಿದ್ದಾರೆ.

ಭದ್ರಾ ಮೇಲ್ದಂಡೆ ಬಗ್ಗೆ ಡಿಕೆಶಿ ತಪ್ಪು ಗ್ರಹಿಕೆ: ಗೋವಿಂದ ಕಾರಜೋಳ

ಬಾದಾಮಿ ತಾಲೂಕಿನ ಬಿಇಒ ಶಾಲೆಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿ ಅವರಿಂದ ನೈಜ ವರದಿ ಪಡೆದು, ಬೇಜವಾಬ್ದಾರಿ ಕಂಡು ಬಂದರೆ ಇಲಾಖೆ ನಿಯಮಾನುಸಾರ ಕ್ರಮ ಜರುಗಿಸಲು ಮೇಲಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುವುದು ಎಂದು ಡಿಡಿಪಿಐ ದೊಡ್ಡಬಸಪ್ಪ ನೀರಲಕೇರಿ ಪ್ರತಿಕ್ರಿಯಿಸಿದ್ದಾರೆ.

ಸರ್ಕಾರದ ಹಣವನ್ನು ದುರುದ್ದೇಶದಿಂದ ಜಮೆ ಮಾಡಿಲ್ಲ. ಚುನಾವಣಾ ಸಂದರ್ಭದಲ್ಲಿ ಕೆ 2 ತಂತ್ರಾಂಶದಲ್ಲಿ ಆದ ವ್ಯತ್ಯಾಸದಿಂದಾಗಿ ಹೀಗಾಗಿದೆ. ಆ ಒಂದು ತಿಂಗಳ ವೇತನ ಹಣ ಮರಳಿ ಭರಿಸುವಂತೆ ಬಸವರಾಜ ಉಂಕಿ ಅವರ ಪತ್ನಿಗೆ ಪತ್ರ ಬರೆಯಲಾಗಿದೆ. ಅವರ ಪತ್ನಿಯವರಿಂದ ಹಣ ಭರಿಸಿಕೊಳ್ಳಲು ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದು ಚಿಕ್ಕಮುಚ್ಚಳಗುಡ್ಡ ಆದರ್ಶ ವಿದ್ಯಾಲಯ ಮುಖ್ಯ ಶಿಕ್ಷಕ ರಾಮಚಂದ್ರ ಭಜಂತ್ರಿ ತಿಳಿಸಿದ್ದಾರೆ.  

Follow Us:
Download App:
  • android
  • ios