ಭದ್ರಾ ಮೇಲ್ದಂಡೆ ಬಗ್ಗೆ ಡಿಕೆಶಿ ತಪ್ಪು ಗ್ರಹಿಕೆ: ಗೋವಿಂದ ಕಾರಜೋಳ

ಕೇಂದ್ರ ಜಲಸಂಪನ್ಮೂಲ ಇಲಾಖೆ 2021ರಲ್ಲಿ ಭದ್ರಾ ಮೇಲ್ದಂಡೆಯ 16 ಸಾವಿರ ಕೋಟಿ ಯೋಜನಾ ವೆಚ್ಚಕ್ಕೆ ಅನುಮೋದನೆ ನೀಡಿದ್ದು, ಕೇಂದ್ರ ಶೇ.60ರಷ್ಟು ಅಂದರೆ 9000 ಕೋಟಿ ಹಾಗೂ ಶೇ.40ರಷ್ಟು ಅಂದರೆ 7000 ಕೋಟಿ ರಾಜ್ಯ ಸರ್ಕಾರ ಭರಿಸಬೇಕು ಎಂದಿದೆ. ಆದರೆ, ಡಿ.ಕೆ.ಶಿವಕುಮಾರ್‌ ಇದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಕೇಂದ್ರ ಸರ್ಕಾರವೇ 16 ಸಾವಿರ ಕೋಟಿ ನೀಡಲಿದೆ ಎಂದಿದ್ದಾರೆ. ಇದು ವಾಸ್ತವವಲ್ಲ ಎಂದ ಕಾರಜೋಳ

DK Shivakumar Misconception about the Bhadra Upper Bank Project Says Govind Karjol grg

ಮುಧೋಳ(ಆ.10):  ಭದ್ರಾ ಮೇಲ್ದಂಡೆ ಯೋಜನೆ ಅನುದಾನದ ವಿಚಾರದಲ್ಲಿ ಉಪಮುಖ್ಯಮಂತ್ರಿ ಮತ್ತು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ತಪ್ಪು ಗ್ರಹಿಸಿದ್ದಾರೆ ಎಂದು ಮಾಜಿ ಡಿಸಿಎಂ ಮತ್ತು ಜಲಸಂಪನ್ಮೂಲ ಇಲಾಖೆ ಮಾಜಿ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ. 

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೇಂದ್ರ ಜಲಸಂಪನ್ಮೂಲ ಇಲಾಖೆ 2021ರಲ್ಲಿ ಭದ್ರಾ ಮೇಲ್ದಂಡೆಯ 16 ಸಾವಿರ ಕೋಟಿ ಯೋಜನಾ ವೆಚ್ಚಕ್ಕೆ ಅನುಮೋದನೆ ನೀಡಿದ್ದು, ಕೇಂದ್ರ ಶೇ.60ರಷ್ಟು ಅಂದರೆ 9000 ಕೋಟಿ ಹಾಗೂ ಶೇ.40ರಷ್ಟು ಅಂದರೆ 7000 ಕೋಟಿ ರಾಜ್ಯ ಸರ್ಕಾರ ಭರಿಸಬೇಕು ಎಂದಿದೆ. ಆದರೆ, ಡಿ.ಕೆ.ಶಿವಕುಮಾರ್‌ ಇದನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಕೇಂದ್ರ ಸರ್ಕಾರವೇ 16 ಸಾವಿರ ಕೋಟಿ ನೀಡಲಿದೆ ಎಂದಿದ್ದಾರೆ. ಇದು ವಾಸ್ತವವಲ್ಲ ಎಂದಿದ್ದಾರೆ. 

ತಿಮ್ಮಾಪೂರಗೆ ನೂರಂದ್ರು ಗೊತ್ತಿಲ್ಲ..ಸಾವಿರ ಅಂದ್ರೂ ಗೊತ್ತಿಲ್ಲ: ಗೋವಿಂದ ಕಾರಜೋಳ

ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯಾಗಿ ಪರಿಗಣಿಸಿ ಈಗಾಗಲೇ ಕೇಂದ್ರ ಸರ್ಕಾರ 5300 ಮಂಜೂರು ಮಾಡಿದ್ದು, ಇದರ ಬಿಡುಗಡೆಗೆ ರಾಜ್ಯ ಸರ್ಕಾರ ಪ್ರಯತ್ನಿಸಬೇಕು ಎಂದರು.

Latest Videos
Follow Us:
Download App:
  • android
  • ios