ಜುಲೈ 23 ರಂದು ಪದ್ಮಶ್ರೀ ಸಾಲು ಮರದ ತಿಮ್ಮಕ್ಕ ಉಡುಪಿಗೆ, 15 ಸಾವಿರ ಸಸಿ ವಿತರಣೆ
ಉಡುಪಿಯಲ್ಲಿ ಉತ್ತಮ ತಳಿಯ ಕಸಿ ಸಸ್ಯಗಳು, ಹೂವು - ಹಣ್ಣು - ಹಂಪಲು, ಅರಣ್ಯ ಸಂಪತ್ತಿನ ಎಲ್ಲಾ ಜಾತಿಯ ಗಿಡಗಳ ಉಚಿತ ವಿತರಣಾ ಮೇಳ ಸಸ್ಯೋತ್ಸವ 2023 ಕಾರ್ಯಕ್ರಮ ನಡೆಯಲಿದ್ದು, ಪದ್ಮಶ್ರೀ ಸಾಲು ಮರದ ತಿಮ್ಮಕ್ಕ ಭಾಗವಹಿಸಿದ್ದಾರೆ.
ಉಡುಪಿ (ಜು.21): ಶಿವಪ್ರೇರಣಾ ಚಾರಿಟೇಬಲ್ ಟ್ರಸ್ಟ್ ಸರಳೇಬೆಟ್ಟು ಮಣಿಪಾಲ ಮತ್ತು ಪರಿವಾರ್ ಚಾರಿಟೇಬಲ್ ಟ್ರಸ್ಟ್ ಉಡುಪಿ ಹಾಗು ಸ್ನೇಹ ಸಂಗಮ ಸರಳೇಬೆಟ್ಟು ಮಣಿಪಾಲ ಇವರ ಸಹಭಾಗಿತ್ವದಲ್ಲಿ ಉತ್ತಮ ತಳಿಯ ಕಸಿ ಸಸ್ಯಗಳು, ಹೂವು - ಹಣ್ಣು - ಹಂಪಲು, ಅರಣ್ಯ ಸಂಪತ್ತಿನ ಎಲ್ಲಾ ಜಾತಿಯ ಗಿಡಗಳ ಉಚಿತ ವಿತರಣಾ ಮೇಳ ಸಸ್ಯೋತ್ಸವ 2023 ಕಾರ್ಯಕ್ರಮವನ್ನು ಜುಲೈ 23 ರಂದು ಬೆಳಗ್ಗೆ 8.30 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಸಂಜೀವ ಕಲಾ ಮಂಡಲದ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಮಾಜಿ ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.
ಶುಕ್ರವಾರ ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಪದ್ಮಶ್ರೀ ಸಾಲು ಮರದ ತಿಮ್ಮಕ್ಕನವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಶಾಸಕ ಯಶ್ಪಾಲ್ ಸುವರ್ಣ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಅಂದು 15,000 ಗಿಡಗಳನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಉಡುಪಿ ಜಿಲ್ಲೆಯಲ್ಲಿ ಗೃಹಲಕ್ಷ್ಮೀ ಯೋಜನೆಗೆ 2.58 ಲಕ್ಷ ಫಲಾನುಭವಿಗಳು
ಈ ಸಸ್ಯೋತ್ಸವದಲ್ಲಿ ತೋಟಗಾರಿಕಾ ಇಲಾಖೆಯ ಎಲ್ಲಾ ಪ್ರಕಾರದ ಹೂವಿನ ಗಿಡಗಳು, ಕಸಿ ಮಾವಿನ ಗಿಡಗಳು ಸೇರಿದಂತೆ ಸಾಗುವಾನಿ, ಶ್ರೀಗಂಧ ರಕ್ತ ಚಂದನ, ಬಿಲ್ಪತ್ರೆ ಮುಂತಾದ ಗಿಡಗಳು ಉಚಿತವಾಗಿ ವಿತರಣೆಯಾಗಲಿದೆ ಎಂದವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಶಿವಪ್ರೇರಣಾ ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷ ಮಹೇಶ್ ಠಾಕೂರ್, ಸ್ನೇಹ ಸಂಗಮ ಸರಳೇಬೆಟ್ಟು ಮಣಿಪಾಲ ಅಧ್ಯಕ್ಷ ಗುರುರಾಜ್ ಭಂಡಾರಿ ಸರಳೇಬೆಟ್ಟು, ಪ್ರ.ಕಾರ್ಯದರ್ಶಿ ಸಂದೇಶ್ ಪ್ರಭು ಉಪಸ್ಥಿತರಿದ್ದರು. ಉಡುಪಿಯ ಇಂದ್ರಾಳಿಯ ಉಪವನ ನರ್ಸರಿ ಸಂಸ್ಥೆಯು ಈ ಕಾರ್ಯಕ್ರಮದ ಸಹಭಾಗಿತ್ವ ವಹಿಸಿ ಎಲ್ಲಾ ಸಸ್ಯಗಳ ಪೂರೈಕೆಯನ್ನು ಮಾಡುತ್ತಿದೆ.
ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಮಹಿಳೆ ಕೊಡಗಿನ ಮಗಳು, 10 ವರ್ಷದ