Hubballi: ಇಂಧನ ಕೊರತೆಯ ವದಂತಿ: ಪೆಟ್ರೋಲ್ ಬಂಕ್‌ಗಳ ಮುಂದೆ ದೊಡ್ಡ ಸರದಿ ಸಾಲು!

* ನಾಳೆಯಿಂದ ಪೆಟ್ರೋಲ್ ಬಂಕ್ ಇಂಧನ ಕೊರತೆ ಆಗಲಿದೆ ಎಂಬ ವದಂತಿ!
* ಇಂಧನಕ್ಕಾಗಿ ಸರದಿ ಸಾಲಿನಲ್ಲಿ ನಿಂತ ವಾಹಮ ಸವಾರರು!
* ಜಿಲ್ಲೆಯಾದ್ಯಂತ ಬಿಸಿಮುಟ್ಟಿಸಿದ ಮುಷ್ಕರದ ನಿರ್ಧಾರ!

Rumors Of Petrol Shortage Overcrowded People in Hubballi gvd

ಹುಬ್ಬಳ್ಳಿ (ಮೇ.30): ನಾಳೆಯಿಂದ ಪೆಟ್ರೋಲ್ ಬಂಕ್ ಮಾಲೀಕರು ಮುಷ್ಕರ ನಡೆಸಲಿದ್ದು, ಪೆಟ್ರೋಲ್, ಡಿಸೇಲ್ ಕೊರತೆ ಉಂಟಾಗಲಿದೆ ಎಂಬ ಸುದ್ದಿ ಹರಿದಾಡಿದ ಹಿನ್ನೆಲೆಯಲ್ಲಿ ವಾಹನ ಸವಾರರು ಪೆಟ್ರೋಲ್, ಡಿಸೇಲ್ ತುಂಬಿಸಲು ಬಂಕ್ ಗಳ ಮುಂದೆ ಮುಗಿಬಿದ್ದ ಘಟನೆ ಹುಬ್ಬಳ್ಳಿ ಸೇರಿದಂತೆ ಧಾರವಾಡ ಜಿಲ್ಲೆಯಲ್ಲಿ ಹಲವೆಡೆ ನಡೆದಿದೆ. ಹುಬ್ಬಳ್ಳಿಯ ದೇಶಪಾಂಡೆ ನಗರ ಭಾರತ ಪೆಟ್ರೋಲ್ ಬಂಕ್‌ ಮುಂದೆ ಜನ ಪೆಟ್ರೋಲ್ ತುಂಬಿಸಲು ನಾ ಮುಂದು ತಾ ಮುಂದೆ ಅಂತ ಕ್ಯೂ ನಿಂತಿದ್ದರು.

ಬ್ಯಾಂಕಿಂಗ್ ವಹಿವಾಟಿನಲ್ಲಿ ಆಗುತ್ತಿರುವ ತೊಂದರೆ ತಪ್ಪಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ತೈಲ ಖರೀದಿ ನಿಲ್ಲಿಸುವ ಮೂಲಕ ಮೇ 31ರಂದು ಪ್ರತಿಭಟನೆ ನಡೆಸಲು ಪೆಟ್ರೋಲ್ ಬಂಕ್ ಮಾಲೀಕರು ನಿರ್ಧರಿಸಿದ್ದು, ಈ ವಿಚಾರ ತಪ್ಪಾಗಿ ಅರ್ಥೈಸಿಕೊಂಡು ಸಮಾಜಿಕ ಜಾಲತಾಣದಲ್ಲಿ ತೈಲ ಕೊರತೆ ಉಲ್ಬಣಿಸಲಿದೆ ಎಂದು ಬಿಂಬಿಸಲಾಗಿದ್ದು, ಇದರಿಂದ ವಾಹನ ಸವಾರರು ತಮ್ಮ ಗಾಡಿಗಳಿಗೆ ತೈಲ ತುಂಬಿಸಲು ಮುಗಿಬಿದ್ದಿದ್ದಾರೆ.

ಕಲಘಟಗಿ‌ ಸರ್ಕಾರಿ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯ, ಹೆರಿಗೆಗೆ ಬಂದ ಗರ್ಭಿಣಿ ಸಾವು

ಬೆಲೆ ಏರಿಳಿತದಿಂದ ಡೀಲರ್​ಗಳಿಗೆ ರಕ್ಷಣೆ ಒದಗಿಸಬೇಕು, ಬೇಡಿಕೆಯಷ್ಟು ತೈಲ ಪೂರೈಸಬೇಕು ಮತ್ತು ಬ್ಯಾಂಕಿಂಗ್ ವಹಿವಾಟಿನಲ್ಲಿ ಆಗುತ್ತಿರುವ ತೊಂದರೆ ತಪ್ಪಿಸಲು ಕ್ರಮತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ತೈಲ ಖರೀದಿ ನಿಲ್ಲಿಸುವ ಮೂಲಕ ಮೇ 31ರಂದು ಪ್ರತಿಭಟನೆ ನಡೆಸಲು ಪೆಟ್ರೋಲ್ ಬಂಕ್ ಮಾಲೀಕರು ನಿರ್ಧಾರ ಕೈಗೊಂಡಿದ್ದಾರೆ. ಬಿಪಿಸಿಎಲ್ ಮತ್ತು ಎಚ್‌ಪಿಸಿಎಲ್‌ ಕಂಪನಿಗಳ ನಿರ್ವಹಣೆಯಲ್ಲಿ ಆಗುತ್ತಿರುವ ವೈಫಲ್ಯದಿಂದಾಗಿ ಪೆಟ್ರೋಲ್ ಬಂಕ್ ಮಾಲೀಕರು ತೊಂದರೆಗೆ ಸಿಲುಕುವಂತಾಗಿದೆ ಎಂದು ಡೀಲರ್​ಗಳು ಹೇಳಿದ್ದಾರೆ.

ಎಸ್‌ಡಿಪಿಐ, ಪಿಎಫ್‌ಐ ಕಾಂಗ್ರೆಸ್‌ನ ಕೂಸು: ಕೇಂದ್ರ ಸಚಿವ ಜೋಶಿ

ಈಗಾಗಲೇ ಧಾರವಾಡ ಜಿಲ್ಲಾದ್ಯಂತ ಉತ್ತಮ ಮಳೆಯಾಗಿದ್ದು, ಮುಂಗಾರು ಚುರುಕುಗೊಂಡಿದೆ. ಜಿಲ್ಲೆಯ ನವಲಗುಂದ, ಕುಂದಗೋಳ, ಕಲಘಟಗಿ, ಅಳ್ನಾವರ, ಮುಂತಾದ ಕಡೆಗಳಲ್ಲಿ ಭೂಮಿಯನ್ನು ಹದ ಮಾಡಲಾಗುತ್ತಿದೆ. ಇನ್ನೂ ಬಿತ್ತನೆ ಕಾರ್ಯ ಸಹ ಮಾಡಲಾಗುತ್ತದೆ. ಆದರೆ ಬೆಳಿಗ್ಗೆಯಿಂದ ಹಿಡಿದು ಸಂಜೆಯವರೆಗೂ ಪೆಟ್ರೋಲ್ ಬಂಕ್ ಮುಂದೆ ನೂರಾರು ಟ್ರಾಕ್ಟರ್, ಲಾರಿ ಇತರ ವಾಹನಗಳು ಸಾಲು ಸಾಲು ನಿಲ್ಲುವ ದೃಶ್ಯಗಳು ಸಾಮಾನ್ಯವಾಗಿವೆ.

Latest Videos
Follow Us:
Download App:
  • android
  • ios