: ಪರವಾನಗಿ ಹಾಗೂ ದಾಖಲೆ ಇಲ್ಲದೆ ಸಂಚರಿಸುತ್ತಿದ್ದ 17 ಆಟೋಗಳನ್ನು ಆರ್‌ಟಿಒ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ವಶಕ್ಕೆ ತೆಗೆದುಕೊಂಡಿದ್ದಾರೆ.

ತುಮಕೂರು: ಪರವಾನಗಿ ಹಾಗೂ ದಾಖಲೆ ಇಲ್ಲದೆ ಸಂಚರಿಸುತ್ತಿದ್ದ 17 ಆಟೋಗಳನ್ನು ಆರ್‌ಟಿಒ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ವಶಕ್ಕೆ ತೆಗೆದುಕೊಂಡಿದ್ದಾರೆ.

ವಿವಿಧ ಆಟೋಚಾಲಕರ ಸಂಘದಿಂದ ದೂರು ಬಂದ ಹಿನ್ನೆಲೆ ಕಾರ್ಯಪ್ರವೃತ್ತರಾದ ಆರ್‌ಟಿಒ ಅಧಿಕಾರಿಗಳು ಪರವಾನಗಿ ಇಲ್ಲದೆ ಆಟೋಗಳನ್ನು ವಶಕ್ಕೆ ಪಡೆದು ಆಟೋ ಮಾಲಿಕರು ಹಾಗೂ ಚಾಲಕರಿಗೆ ಶಾಕ್ ನೀಡಿದ್ದಾರೆ.

ಈಗಾಗಲೇ ಹಲವು ಬಾರಿ ಚಾಲಕರಿಗೆ ಎಚ್ಚರಿಕೆ ಕೊಟ್ಟಿದ್ದರು. ಆಟೋ‌‌ದಲ್ಲಿ ಮೀಟರ್ ಇಲ್ಲದಿರುವುದು, ಇನ್ಸೂರೆನ್ಸ್ ಇಲ್ಲದೆ ವಾಹನಗಳ ಓಡಾಟ ಹಾಗೂ ರೂಲ್ಸ್ ಬ್ರೇಕ್ ಮಾಡುತ್ತಿದ್ದ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ಇನ್ನೂ‌ ಮುಂದೆ ರೂಲ್ಸ್ ಬ್ರೇಕ್ ಮಾಡಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

ಓಲಾ ಬೈಕ್ ಟ್ಯಾಕ್ಸಿ

ಬೆಂಗಳೂರು (ಸೆ.21): ನಗರದಲ್ಲಿ ಬೈಕ್‌ ಟ್ಯಾಕ್ಸಿ ಕಾರ್ಯಾಚರಣೆ ನಿಷೇಧಿಸುವಂತೆ ಆಟೋ, ಟ್ಯಾಕ್ಸಿ ಮಾಲಿಕರು ಮತ್ತು ಚಾಲಕರ ಸಂಘ ಸರ್ಕಾರವನ್ನು ಆಗ್ರಹಿಸುತ್ತಿರುವ ನಡುವೆಯೇ ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವಾ ಸಂಸ್ಥೆಯಾದ ಓಲಾ ಈಗ ಬೆಂಗಳೂರಿನಲ್ಲಿ ಬೈಕ್‌ ಟ್ಯಾಕ್ಸಿ ಸೇವೆಯನ್ನೂ ಆರಂಭಿಸಿದೆ. ಇದರಿಂದ ರಾಪಿಡ್‌, ಉಬರ್‌ ಬೈಕ್‌ ಟ್ಯಾಕ್ಸಿ ಸಾಲಿಗೆ ಇದೀಗ ಓಲಾ ಕೂಡ ಸೇರ್ಪಡೆಗೊಂಡಿದೆ. ಇದು ಬೈಕ್‌ ಟ್ಯಾಕ್ಸಿಯಿಂದ ಆದಾಯ ನಷ್ಟದ ಆತಂಕದಲ್ಲಿರುವ ಆಟೋ ಮತ್ತು ಟ್ಯಾಕ್ಸಿ ಚಾಲಕರು ಮತ್ತು ಮಾಲಿಕರನ್ನು ಮತ್ತಷ್ಟು ಕಂಗೆಡಿಸಿದೆ.

ಓಲಾ ಸಿಇಒ ಭವಿಷ್‌ ಅಗರ್ವಾಲ್‌ ಇತ್ತೀಚೆಗಷ್ಟೆ ಬೈಕ್‌ ಟ್ಯಾಕ್ಸಿ ಆರಂಭಿಸುತ್ತಿರುವ ಬಗ್ಗೆ ಅಧಿಕೃತವಾಗಿ ಘೋಷಿಸಿದ್ದರು. ಇದರ ಬೆನ್ನಲ್ಲೇ ಓಲಾ ಆ್ಯಪ್‌ನಲ್ಲಿ ಕಾರು, ಆಟೋ ಟ್ಯಾಕ್ಸಿ ಮಾದರಿಯಲ್ಲಿ ಗ್ರಾಹಕರು ಬೈಕ್‌ ಟ್ಯಾಕ್ಸಿ ಸೇವೆಯನ್ನು ಪಡೆಯಬಹುದಾಗಿದೆ. ಓಲಾ ಎಸ್‌1 ಎಲೆಕ್ಟ್ರಿಕ್‌ ಬೈಕ್‌ಗಳ ಮೂಲಕ ಬೈಕ್ ಟ್ಯಾಕ್ಸಿ ಆರಂಭಿಸಿದ್ದು, 5 ಕಿ.ಮೀ. ವರೆಗೆ ₹25 ಮತ್ತು 10 ಕಿ.ಮೀ. ವರೆಗೆ ₹50 ದರ ನಿಗದಿಪಡಿಸಿದೆ. ಓಲಾದಿಂದ ಬೈಕ್ ಟ್ಯಾಕ್ಸಿ ಸೇವೆ ಆರಂಭಿಸುವ ಪ್ರಯತ್ನ 2016ರಲ್ಲೇ ನಡೆದಿತ್ತಾದರೂ ವಿವಿಧ ಕಾರಣಗಳಿಂದ ಯಶಸ್ವಿಯಾಗಿರಲಿಲ್ಲ. ಇದೀಗ ಬೆಂಗಳೂರಿನಲ್ಲಿ ಈ ಸೇವೆ ಆರಂಭಿಸಿದ್ದು, ದೇಶದ ಪ್ರಮುಖ ನಗರಗಳಲ್ಲಿ ವಿಸ್ತರಿಸುವ ಗುರಿ ಹೊಂದಿರುವುದಾಗಿ ಅಗರ್ವಾಲ್‌ ಹೇಳಿದ್ದಾರೆ.

ಚೈತ್ರಾ ಕುಂದಾಪುರ ಕೇಸಲ್ಲಿ ತಮ್ಮ ಹೆಸರು ಬಳಕೆ: ಸಾಲುಮರದ ತಿಮ್ಮಕ್ಕ ದೂರು

ಮತ್ತೆ ಆಟೋ, ಟ್ಯಾಕ್ಸಿ ಚಾಲಕರ ಹೋರಾಟ?: ಬೈಕ್‌ ಟ್ಯಾಕ್ಸಿ ಸೇವೆಯಲ್ಲಿ ಮೋಟಾರು ವಾಹನ ಕಾಯ್ದೆಯ ಉಲ್ಲಂಘನೆಯಾಗುತ್ತಿದೆ. ವೈಟ್‌ ಬೋರ್ಡ್‌ ನಂಬರ್‌ ಫಲಕದ ಬೈಕ್‌ಗಳನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವುದು ನಿಯಮ ಉಲ್ಲಂಘಟನೆ. ಪ್ರಯಾಣಿಕರಿಗೆ ಸುರಕ್ಷತೆಯೂ ಇಲ್ಲ. ಕಡಿಮೆ ಪ್ರಯಾಣದ ದರದ ಕಾರಣದಿಂದ ನಮ್ಮ ಆದಾಯಕ್ಕೆ ಹೊಡೆತ ಬೀಳುತ್ತಿದೆ. ಹಾಗಾಗಿ ಈ ಸೇವೆಯನ್ನು ನಿಷೇಧಿಸಬೇಕು ಎಂಬುದು ಆಟೋ, ಟ್ಯಾಕ್ಸಿ ಚಾಲಕರು, ಮಾಲಿಕರ ಸಂಘದ ಆಗ್ರಹವಾಗಿದ್ದು, ಇದರ ವಿರುದ್ಧ ಮತ್ತೆ ಹೋರಾಟಕ್ಕಿಳಿಯುವ ಬಗ್ಗೆ ಚರ್ಚೆ ನಡೆಸುವುದಾಗಿ ಸಂಘದ ಪ್ರತಿನಿಧಿಗಳು ತಿಳಿಸಿದ್ದಾರೆ.