Asianet Suvarna News Asianet Suvarna News

ಚೈತ್ರಾ ಕುಂದಾಪುರ ಕೇಸಲ್ಲಿ ತಮ್ಮ ಹೆಸರು ಬಳಕೆ: ಸಾಲುಮರದ ತಿಮ್ಮಕ್ಕ ದೂರು

ಬಿಜೆಪಿ ಟಿಕೆಟ್‌ ವಂಚನೆ ಸಂಬಂಧ ಹಿಂದೂ ಪರ ಸಂಘಟನೆ ಕಾರ್ಯಕರ್ತೆ ಚೈತ್ರಾ ಕುಂದಾಪುರ ತಂಡದ ಬಂಧನ ಪ್ರಕರಣದಲ್ಲಿ ತಮ್ಮ ಹೆಸರನ್ನು ಬಳಸಿ ಸುಳ್ಳು ಸುದ್ದಿ ಹಬ್ಬಿಸಿ ತೇಜೋವಧೆ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ನಗರ ಪೊಲೀಸ್ ಆಯುಕ್ತರಿಗೆ ಪರಿಸರವಾದಿ ಹಾಗೂ ನಾಡೋಜ ಡಾ.ಸಾಲುಮರದ ತಿಮ್ಮಕ್ಕ ಬುಧವಾರ ಮನವಿ ಸಲ್ಲಿಸಿದರು. 

chaitra kundapur case saalumarada thimmakka reached filed complaint in bengaluru police commissioner office gvd
Author
First Published Sep 21, 2023, 7:43 AM IST

ಬೆಂಗಳೂರು (ಸೆ.21): ಬಿಜೆಪಿ ಟಿಕೆಟ್‌ ವಂಚನೆ ಸಂಬಂಧ ಹಿಂದೂ ಪರ ಸಂಘಟನೆ ಕಾರ್ಯಕರ್ತೆ ಚೈತ್ರಾ ಕುಂದಾಪುರ ತಂಡದ ಬಂಧನ ಪ್ರಕರಣದಲ್ಲಿ ತಮ್ಮ ಹೆಸರನ್ನು ಬಳಸಿ ಸುಳ್ಳು ಸುದ್ದಿ ಹಬ್ಬಿಸಿ ತೇಜೋವಧೆ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ನಗರ ಪೊಲೀಸ್ ಆಯುಕ್ತರಿಗೆ ಪರಿಸರವಾದಿ ಹಾಗೂ ನಾಡೋಜ ಡಾ.ಸಾಲುಮರದ ತಿಮ್ಮಕ್ಕ ಬುಧವಾರ ಮನವಿ ಸಲ್ಲಿಸಿದರು. 

ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಖುದ್ದು ತಿಮ್ಮಕ್ಕ ಅವರಿಂದ ಆಯುಕ್ತರ ಪರವಾಗಿ ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ಎಸಿಪಿ ವೇಣುಗೋಪಾಲ್ ಮನವಿ ಸ್ವೀಕರಿಸಿದರು.  ಬಿಜೆಪಿ ಟಿಕೆಟ್ ಹೆಸರಿನಲ್ಲಿ ಉದ್ಯಮಿಗೆ ವಂಚನೆ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಹಾಗೂ ಗಗನ್ ಕಡೂರು ಸೇರಿ ಇತರರು ಬಂಧಿತರಾಗಿದ್ದಾರೆ. ಆದರೆ ಈ ವಂಚನೆ ಕೃತ್ಯಕ್ಕೂ ನನಗೆ ಹಾಗೂ ನನ್ನ ಮಗ ಉಮೇಶ್‌ಗೆ ಯಾವುದೇ ಸಂಬಂಧವಿಲ್ಲ. 

ಗ್ಯಾರಂಟಿ ಆಮಿಷ-ಸಿದ್ದರಾಮಯ್ಯ ಸರ್ಕಾರ ವಜಾ ಮಾಡಿ: ಎಚ್‌.ಡಿ.ಕುಮಾರಸ್ವಾಮಿ

ಹೀಗಿದ್ದರೂ ಆ ಪ್ರಕರಣಕ್ಕೂ ನನ್ನ ಹಾಗೂ ನನ್ನ ಮಗನಿಗೂ ಸಂಬಂಧ ಇದೆ ಎಂದು ಅವಹೇಳನ ಮಾಡುತ್ತಿರುವುದು ಮನಸ್ಸಿಗೆ ನೋವುಂಟಾಗಿದೆ ಎಂದು ತಿಮ್ಮಕ್ಕ ನೊಂದು ನುಡಿದಿದ್ದಾರೆ. ಪರಿಸರ ಸಂರಕ್ಷಣೆಗೆ ನಮ್ಮ ಜೀವನ ಮುಡುಪಾಗಿಟ್ಟಿದ್ದೇವೆ. ಯಾರಿಗೂ ಮೋಸ ಮಾಡಿಲ್ಲ. ಸರ್ಕಾರದ ಸವಲತ್ತು ಸಹ ದುರ್ಬಳಕೆ ಮಾಡಿಕೊಂಡಿಲ್ಲ. ನಮ್ಮ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಿರುವ ದುಷ್ಕರ್ಮಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದ್ದಾರೆ.

ಹಾಲಶ್ರೀ ಮಠದಲ್ಲಿ ₹56 ಲಕ್ಷ ಬ್ಯಾಗ್‌ ಪತ್ತೆ?: ಬಿಜೆಪಿ ಎಂಎಲ್‌ಎ ಟಿಕೆಟ್‌ಗಾಗಿ ಚೈತ್ರಾ ಕುಂದಾಪುರ ಮತ್ತು ತಂಡದವರ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಾಲಶ್ರೀ ಮಠದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ₹56 ಲಕ್ಷ ಹಣದ ಬ್ಯಾಗ್‌ ಇಟ್ಟುಹೋಗಿದ್ದಾನೆಂದು ತಿಳಿದುಬಂದಿದೆ. ಈ ಕುರಿತು ವಿಡಿಯೋ ವೈರಲ್‌ ಆಗಿದೆ. ಈ ವಿಡಿಯೋದಲ್ಲಿ ಅಪರಿಚಿತ ವ್ಯಕ್ತಿಯೋರ್ವರು ಮಾತನಾಡಿ, ಈ ಪ್ರಕರಣದ ಎ3 ಆರೋಪಿಯಾಗಿರುವ ಅಭಿನವ ಹಾಲವೀರಪ್ಪಜ್ಜ ಸ್ವಾಮೀಜಿ ಅವರು ಮೈಸೂರಿನಲ್ಲಿ ಅವರ ಕಾರು ಚಾಲಕನ ಮೂಲಕ ₹60 ಲಕ್ಷ ನೀಡಿದ್ದರು. 

ಕಾವೇರಿ ವಿಚಾರದಲ್ಲಿ ಒಗ್ಗಟ್ಟಿಂದ ಮಾತನಾಡಿ: ಸಚಿವ ದಿನೇಶ್ ಗುಂಡೂರಾವ್‌

ಇದರಲ್ಲಿ ಕೇಸು ನಡೆಸುವ ವಕೀಲರಿಗೆ ₹4 ಲಕ್ಷ ಹಣ ನೀಡಲು ಕಾರು ಚಾಲಕ ತೆಗೆದುಕೊಂಡಿದ್ದು, ಉಳಿದ ₹56 ಲಕ್ಷವನ್ನು ಶ್ರೀಮಠಕ್ಕೆ ಅರ್ಪಿಸಲು ಹೊರಟಿದ್ದೇನೆಂದು ಹಾಗೂ ಮಠದಲ್ಲಿನ ಪಲ್ಲಕ್ಕಿಯಲ್ಲಿ ಹಣ ಇಟ್ಟಿರುವ ಕುರಿತು ಅಪರಿಚಿತ ವ್ಯಕ್ತಿಯೋರ್ವರು ಮಾತನಾಡಿರುವ ವಿಡಿಯೋ ವೈರಲ್‌ ಆಗಿದೆ. 56 ಲಕ್ಷ ಹಣವನ್ನು ಹಾಲಸ್ವಾಮಿ ಮಠಕ್ಕೆ ಬಂದು ನೀಡುತ್ತಿರುವುದಾಗಿ ಅಪರಿಚಿತ ವ್ಯಕ್ತಿ ಹೇಳಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆಂಬ ಮಾಹಿತಿ ಇದೆ.

Follow Us:
Download App:
  • android
  • ios