Asianet Suvarna News Asianet Suvarna News

ಏರೋ ಶೋನಲ್ಲಿ ಕಾರುಗಳು ಭಸ್ಮ, ವಾಹನ ಮಾಲೀಕರ ಅನುಕೂಲಕ್ಕಾಗಿ RTO ಸಹಾಯ ಕೇಂದ್ರ

ಬೆಂಗಳೂರಿನ ಯಲಹಂಕದ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ ಶೋ 2019ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ನೂರಾರು ಕಾರು, ಬೈಕ್ ಗಳು ಸುಟ್ಟು ಹೋಗಿದ್ದು, ವಾಹನ ಮಾಲೀಕರ ಅನುಕೂಲಕ್ಕಾಗಿ RTO ಸಹಾಯ ಕೇಂದ್ರ ತೆರೆದಿದೆ. ವಾಹನ ಕಳೆದುಕೊಂಡವರು ಈ ಸಹಾಯ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬುಹುದು.

RTO Help Center In Yelahanka For fire tragedy In aero show 2019
Author
Bengaluru, First Published Feb 23, 2019, 6:09 PM IST

ಬೆಂಗಳೂರು, [ಫೆ.23]: ಯಲಹಂಕದ ಏರೋ ಶೋ ವೇಳೆ ನಡೆದ ಅಗ್ನಿ ಅವಘಡದಲ್ಲಿ ನೂರಾರು ವಾಹನಗಳು ಭಸ್ಮಗೊಂಡಿವೆ. 

ಆಗಸದಲ್ಲಿ ವಿಮಾನಗಳ ಕಸರತ್ತು ನೋಡಲು ಬಂದವರು ಇದೀಗ ತಮ್ಮ ಕಾರುಗಳನ್ನು ಕಳೆದುಕೊಂಡು ಕಣ್ಣೀರಿಡುತ್ತಿದ್ದಾರೆ. ಕಾರು ಲಕ್ಷಾಂತರ ರೂಪಾಯಿಯ ಕಾರು ಕಳೆದುಕೊಂಡ ಸಂತ್ರಸ್ತ ನೆರವಿಗೆ ಬೆಂಗಳೂರಿನ RTO ಅಧಿಕಾರಿಗಳು ಧಾವಿಸಿದ್ದಾರೆ.

ಏರೋ ಇಂಡಿಯಾ 2019: ಬೆಂಕಿಯಲ್ಲಿ ಬೆಂದ ಕಾರು - ಇನ್ಶೂರೆನ್ಸ್ ಕಂಪನಿ ಹೇಳೊದೇನು?

ಲಕ್ಷಾಂತರ ರೂಪಾಯಿ ಮೌಲ್ಯದ ಕಾರುಗಳನ್ನ ಕಳೆದುಕೊಂಡ ಮಾಲೀಕರ ಸಹಾಯಕ್ಕಾಗಿ ಆರ್​​​​ಟಿಒ ಸಹಾಯ ಕೇಂದ್ರ ತೆರೆದಿದೆ. ಈ ಸಹಾಯ ಕೇಂದ್ರವು ನಾಳೆ ರಜಾ ದಿನವಾದ ಭಾನುವಾರವೂ ಕೆಲಸ ಮಾಡಲಿದ್ದು, ವಾಹನಗಳ ಮಾಲೀಕರಿಗೆ ವಿಶೇಷ ನೆರವು ನೀಡಲು ಮುಂದಾಗಿದೆ.

ಏರ್ ಶೋ ನಲ್ಲಿ ಮತ್ತೊಂದು ಆಘಾತ : ಭಾರಿ ಬೆಂಕಿ ಅವಘಡ

ಯಲಹಂಕದಲ್ಲಿ ಆರ್ ಟಿಓ ಸಹಾಯ ಕೇಂದ್ರ
ವಾಹನ ಮಾಲೀಕರ ಅನುಕೂಲಕ್ಕಾಗಿ ವಾಹನದ ನೊಂದಣಿ ಮತ್ತು ಚಾಲನಾ ಪತ್ರಗಳ ವಿವರಗಳನ್ನ ಪಡೆಯಲು ಬೇಕಾಗುವ ವಿಧಿ, ವಿಧಾನಗಳನ್ನ ತಿಳಿದುಕೊಳ್ಳಲು ಸಹಾಯವಾಣಿ ತೆರೆಯಲಾಗಿದೆ. 

ಸಾರಿಗೆ ಇಲಾಖಾ ವತಿಯಿಂದ ಪ್ರಾದೇಶಿಕ ಸಾರಿಗೆ ಕಚೇರಿ ಯಲಹಂಕದಲ್ಲಿ ಸಹಾಯ ಕೇಂದ್ರ ಪ್ರಾರಂಭಿಸಲಾಗಿದೆ. ಸಹಾಯ ಕೇಂದ್ರದ ಸಂಖ್ಯೆ
080-2972 9908, 2972 9909, ಮೊಬೈಲ್​ 94498 64050.

Follow Us:
Download App:
  • android
  • ios