ಬೆಂಗಳೂರು(ಫೆ.23): ಏರೋ ಇಂಡಿಯಾ ಶೋಗೆ ಒಂದಲ್ಲ ಒಂದು ವಿಘ್ನಗಳು ಅಡ್ಡಿಯಾಗುತ್ತಲೇ ಇದೆ. ಏರ್ ಶೋ ಆರಂಭಕ್ಕೂ 6 ತಿಂಗಳ ಮೊದಲೇ ಬೆಂಗಳೂರಿನಿಂದ ಲಕ್ನೋಗೆ ಸ್ಥಳಾಂತರ ಮಾಡಲು ಕೇಂದ್ರ ನಿರ್ಧರಿಸಿತ್ತು. ಹಲವು ಅಡೆ ತಡೆ ನಿವಾಸಿದ ಏರೋ ಇಂಡಿಯಾ ಆರಂಭಕ್ಕೂ ಮುನ್ನವೇ ಯುದ್ದವಿಮಾನಗಳ ಅಪಘಾತದಿಂದ ಒರ್ವ ಪೈಲೆಟ್ ಸಾವನ್ನಪ್ಪಿದ್ದರು. ಇದೀಗ ಏರೋ ಶೋ ಕಾರು ಪಾರ್ಕಿಂಗ್‌ನಲ್ಲಿ ಕಾಣಿಸಿಕೊಂಡ ಬೆಂಕಿಯಿಂದ 300ಕ್ಕೂ ಹೆಚ್ಚು ಕಾರುಗಳ ಸುಟ್ಟು ಬೂದಿಯಾಗಿದೆ. 

ಇದನ್ನೂ ಓದಿ: ಮಹಿಳೆಯ ಟೆಸ್ಟ್ ಡ್ರೈವ್‌ಗೆ ಶೋ ರೂಂ, ಐ20 ಕಾರು ಪುಡಿ ಪುಡಿ!

ಏರೋ ಇಂಡಿಯಾ ಶೋನಲ್ಲಿ ಇಂದು(ಫೆ.23) ಸಾರ್ವಜನಿಕರಿಗಾಗಿ ವೈಮಾನಿಕ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಹೀಗಾಗಿ ಹೆಚ್ಚಿನ ಸಂಖ್ಯೆಲ್ಲಿ ಸಾರ್ವಜನಿಕರು ಆಗಮಿಸಿದ್ದರು. ಹೀಗಾಗಿ ಗೇಟ್ ನಂ.5ರಲ್ಲಿ ಸಾರ್ವಜನಿಕರ ಕಾರು ಪಾರ್ಕಿಂಗ್‌ಗೆ ಅವಕಾಶ ನೀಡಲಾಗಿತ್ತು. ಆದರೆ ಬಯಲು ಪ್ರದೇಶದಲ್ಲಿನ ಹುಲ್ಲಿಗೆ ಬೆಂಕಿ ತಗುಲಿ ನಿಲ್ಲಿಸಿದ್ದ ಕಾರುಗಳಿಗೆ ಹತ್ತಿಕೊಂಡಿದೆ. ಇದರ ಪರಿಣಾಮ ದುಬಾರಿ ಬೆಲೆಯ ಕಾರುಗಳು ಬೆಂಕಿಗೆ ಆಹುತಿಯಾಗಿದೆ. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.

"

ಇದನ್ನೂ ಓದಿ: ಹೆಲ್ಮೆಟ್ ಹಾಕದ ವೋಕ್ಸ್‌‌ವ್ಯಾಗನ್ ಕಾರು ಚಾಲಕನಿಗೆ ದಂಡ!

ಕಣ್ಣೆದುರೆ ಕಾರು ಬೆಂಕಿಗೆ ಆಹುತಿಯಾಗೋದನ್ನ ನೋಡಿದ ಕಾರು ಮಾಲೀಕರ ನೋವು ಹೇಳತೀರದು. ಏರೋ ಇಂಡಿಯಾ ಕಾರು ಪಾರ್ಕಿಂಗ್‌ನಲ್ಲಿ ಬೆಂಕಿಗೆ ಆಹುತಿಯಾದ ಎಲ್ಲಾ ಕಾರಿಗೂ ವಿಮೆ ಮೊತ್ತ ದೊರಕಲಿದೆ. ಕಾರು ಬೆಂಕಿಗೆ ಆಹುತಿಯಾದಾಗ ಕಾರು ಮಾಲೀಕರು ಏನು ಮಾಡಬೇಕು ಅನ್ನೋ ವಿವರ ಇಲ್ಲಿದೆ.

ಕಾರು ವಿಮೆ ಏನು ಹೇಳುತ್ತೆ?
ಏರೋ ಇಂಡಿಯಾ ಶೋ ಪಾರ್ಕಿಂಗ್‌‍ನಲ್ಲಿನ ಬೆಂಕಿ ಅವಘಡ ಆಕಸ್ಮಕವಾಗಿ ಸಂಭವಿಸಿದೆ. ಇದು ಕಾರಿನಿಂದಾಗಿ ಅಥವಾ ಮಾಲೀಕರಿಂದಾಗಿ ನಡೆದ ಅನಾಹುತವಲ್ಲ. ಈ ಕಾರುಗಳಿಗೆ OD(Own damage) ಅಥವಾ Natural Disasters ವಿಮೆ ಅಡಿಯಲ್ಲಿ ಮಾಲೀಕರಿಗೆ ಮೊತ್ತ ಸಿಗಲಿದೆ. 

ಕಾರು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದ್ದರೆ Total loss ವಿಭಾಗದಡಿ ಕಾರಿನ ಮೊತ್ತ ಸಿಗಲಿದೆ. ಅಥವಾ ಕಾರಿನ ಟಾಪ್, ಅಥವ ಇತರ ಬಿಡಿಭಾಗಗಳು ಬೆಂಕಿಗೆ ಆಹುತಿಯಾಗಿದ್ದರೆ partial loss ವಿಭಾಗದಡಿ ಹಣ ದೊರಕಲಿದೆ. ಆದರೆ ಆಯಾ ವಿಮಾ ಕಂಪೆನಿಗಳಲ್ಲಿ ಆಯಾ ನಿಯಮಗಳಿರುತ್ತೆ.  

ಇದನ್ನೂ ಓದಿ: ಸಾಬೀತಾಯ್ತು ಟಾಟಾ ನೆಕ್ಸಾನ್ ಕಾರು ಸುರಕ್ಷತೆ- ಪಿಲ್ಲರ್ ಬಿದ್ದರೂ ಪ್ರಯಾಣಿಕರು ಸೇಫ್!

ಕಾರು ಮಾಲೀಕರು ಆಯಾ ವಿಮಾ ಕಂಪೆನಿಯನ್ನ ಸಂಪರ್ಕಿಸಿದರೆ ವಿಮಾ ಕಂಪೆನಿಯ ವ್ಯಕ್ತಿಗಳು, ಸಂಪೂರ್ಣ ಬೆಂಕಿಗೆ ಆಹುತಿಯಾದ ಕಾರನ್ನ ವಶಕ್ಕೆ ಪಡೆದುಕೊಳ್ಳುತ್ತಾರೆ. ಬಳಿಕ ಫೋಟೋ ಹಾಗೂ ಇತರ ದಾಖಲೆಗಳನ್ನ ಪಡೆದು ಕಾರಿನ insured declared value(IDV) ಗರಿಷ್ಠ ಶೇಕಡಾ 90 ರಷ್ಟು ಮೊತ್ತ ಮಾಲೀಕರಿಗೆ ಸಿಗಲಿದೆ. 

ಕೆಲ ವಿಮಾ ಕಂಪೆನಿಗಳಿಗೆ ಮಾಲೀಕರು ಹಣ ಕ್ಲೈಮ್ ಮಾಡಲು ಕ್ಲೈಮ್ ಫಾರ್ಮ್ ಜೊತೆಗೆ FIR(First Information reprt) ಕಾಪಿ ಕೂಡ ನೀಡಬೇಕು. ಕಾರು ಮಾಲೀಕರು FIR ದಾಖಲಿಸಬೇಕು. ಬಳಿಕ ವಿಮೆ ಕಂಪೆನಿಗೆ ಕ್ಲೈಮ್ ಮಾಡಬೇಕು. ಆಯಾ ವಿಮಾ ಕಂಪೆನಿ ಇನ್ವಿಸ್ಟಿಗೇಶನ್ ನಡೆಸುತ್ತೆ. ಇದರ ಗರಿಷ್ಠ ಅವಧಿ 20 ರಿಂದ 30 ದಿನ. 30 ದಿನದ ಬಳಿಕ ವಿಮಾ ಕಂಪೆನಿ ಕಾರಿನ IDV ಮೊತ್ತದ ಗರಿಷ್ಠ 80 ರಿಂದ 90 ಶೇಕಡಾ ಮೊತ್ತವನ್ನ ಕಾರಿನ ಮಾಲೀಕರಿಗೆ ನೀಡುತ್ತೆ.

ಇದನ್ನೂ ಓದಿ: ಹೊತ್ತಿ ಉರಿಯಿತು ಚಲಿಸುತ್ತಿದ್ದ ಬೈಕ್ - ತನಿಖೆಗೆ ಮುಂದಾದ ಕಂಪೆನಿ!

ಒಂದು ವೇಳೆ ಕಾರು ಖರೀದಿಸುವಾಗ ವಿಮೆ ಜೊತೆಗೆ Return to Invoice (RTI) ಪಾಲಿಸಿ ಪಡೆದುಕೊಂಡಿದ್ದರೆ, ಬೆಂಕಿಗೆ ಆಹುತಿಯಾದ ಕಾರಿನ ಬದಲು  ವಿಮಾ ಕಂಪೆನಿ ಹೊಸ ಕಾರನ್ನ ನೀಡಲಿದೆ.  ಮಾಲೀಕರು ರಸ್ತೆ ತೆರಿಗೆ ಮಾತ್ರ ಪಾವತಿಸಿ ಹೊಸ ಕಾರನ್ನ ಪಡೆದುಕೊಳ್ಳಬಹುದು. 

ಏರೋ ಇಂಡಿಯಾ ಪಾರ್ಕಿಂಗ್‌ನಲ್ಲಿ ನಡೆದ ಅವಘಡ ಆಕಸ್ಮಕವಾಗಿ ನಡೆದ ಕಾರಣ ಬೆಂಕಿಗೆ ಆಹುತಿಯಾದ ಎಲ್ಲಾ ಕಾರಿಗೆ ವಿಮೆ ಮೊತ್ತ ಸಿಗಲಿದೆ. ಇನ್ನು ಕಾರಿನ ಬಿಡಿ ಭಾಗಗಳು ಬೆಂಕಿಗೆ ಆಹುತಿಯಾಗಿದ್ದರೆ, ಕಾರಿನ ರಿಪೇರಿ ಮೊತ್ತವನ್ನು ವಿಮಾ ಕಂಪೆನಿ ನೀಡಲಿದೆ. ಆದರೆ ಯಾವುದೇ ವಿಮಾ ಕಂಪನಿಗಳು ಕಾರಿನ ಮೊತ್ತವನ್ನು ಮಾತ್ರ ನೀಡಲಿದೆ.  ರಸ್ತೆ ತೆರಿಗೆ ಮೊತ್ತವನ್ನ ಯಾವುದೇ ವಿಮಾ ಕಂಪನಿ ನೀಡುವುದಿಲ್ಲ. ಹೀಗಾಗಿ ಬೆಂಕಿಗೆ ಆಹುತಿಯಾದ ಮಾಲೀಕರಿಗೆ ರಸ್ತೆ ತೆರೆಗೆ ಮೊತ್ತ ನಷ್ಟವಾಗಲಿದೆ.

ಇದನ್ನೂ ಓದಿ: ಗೇರ್ ಲಿವರ್ ಬದಲು ಬಿದಿರಿನ ಕೋಲು ಬಳಕೆ- ಸ್ಕೂಲ್ ಬಸ್ ಚಾಲಕ ಬಂಧನ!

ಮಾಲೀಕರ ತಪ್ಪಿನಿಂದ ಬೆಂಕಿಗೆ ಆಹುತಿಯಾಗಿದ್ದರೆ ವಿಮೆ ಸಿಗುವುದಿಲ್ಲ. ಉದಾಹರಣೆಗೆ  ಮಾಲೀಕ ಕಾರಿಗೆ ಹೆಲೋಜಿನ ಲೈಟ್, ಅಥವಾ ಇತರ ಲೈಟ್ ಅಳವಡಿಸಿದ ಕಾರಣ ಲೈಟ್ ಹೀಟ್ ಅಥವಾ ಶಾರ್ಟ್ ಸರ್ಕ್ಯೂಟ್‌ನಿಂದ  ಬೆಂಕಿ ಹೊತ್ತಿಕೊಂಡು ಕಾರು ಭಸ್ಮವಾಗಿದ್ದರೆ ವಿಮೆ ಅನ್ವಯವಾಗುವುದಿಲ್ಲ. ಆದರೆ ಯಾವುದೇ ಮಾಡಿಫಿಕೇಶನ್ ಮಾಡದೇ, ಕಾರು ತನ್ನಿಂದ ತಾನೆ ಶಾರ್ಟ್ ಸರ್ಕ್ಯೂಟ್ ಅಥವಾ ಇನ್ಯಾವುದೋ ಕಾರಣದಿಂದ ಬೆಂಕಿ ಹೊತ್ತಿಕೊಂಡರೆ ವಿಮೆ ಅನ್ವಯವಾಗಲಿದೆ.