Udupi: ದೇಶದಲ್ಲಿನ ಪ್ರತಿ ಸಮಸ್ಯೆಗಳಿಗೆ ಆರ್‌ಎಸ್‌ಎಸ್ ಸ್ಪಂದಿಸುತ್ತದೆ: ಡಾ.ಅವಿನಾಶ್ ಶೆಟ್ಟಿ
ಮಾನವ ಅಭಿವೃದ್ಧಿ ಸೂಚ್ಯಂಕ, ಜಾಗತಿಕ ಬಡತನ, ಉನ್ನತ ಶಿಕ್ಷಣ ಪಡೆವವರ ಸೂಚ್ಯಂಕದಲ್ಲಿ ಭಾರತ ಹಿಂದುಳಿದಿದ್ದು, ವಿದೇಶಿ ಪಲಾಯನ ತಡೆದು ದೇಶ ಲಾಭ ಪಡೆಯಬೇಕು. ವೈದ್ಯಕೀಯ ವೆಚ್ಚ ದೇಶದಲ್ಲಿ ಹೆಚ್ಚುತ್ತಿದ್ದು ವೈದ್ಯಕೀಯ ಸಲಕರಣೆ ಶೇ.80 ಆಮದಾಗುತ್ತಿರುವುದು ಇದಕ್ಕೆ ಕಾರಣವಾಗಿದೆ.
ಉಡುಪಿ (ಅ.14): ಮಾನವ ಅಭಿವೃದ್ಧಿ ಸೂಚ್ಯಂಕ, ಜಾಗತಿಕ ಬಡತನ, ಉನ್ನತ ಶಿಕ್ಷಣ ಪಡೆವವರ ಸೂಚ್ಯಂಕದಲ್ಲಿ ಭಾರತ ಹಿಂದುಳಿದಿದ್ದು, ವಿದೇಶಿ ಪಲಾಯನ ತಡೆದು ದೇಶ ಲಾಭ ಪಡೆಯಬೇಕು. ವೈದ್ಯಕೀಯ ವೆಚ್ಚ ದೇಶದಲ್ಲಿ ಹೆಚ್ಚುತ್ತಿದ್ದು ವೈದ್ಯಕೀಯ ಸಲಕರಣೆ ಶೇ.80 ಆಮದಾಗುತ್ತಿರುವುದು ಇದಕ್ಕೆ ಕಾರಣವಾಗಿದೆ. 2047ರ ಒಳಗೆ ಇದು ರಫ್ತಾಗುವ ಸ್ಥಿತಿ ಬರಬೇಕು ಎಂದು ಮಣಿಪಾಲ ಕೆಎಂಸಿ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಹೇಳಿದ್ದಾರೆ. ಅವರು ಪರ್ಕಳ ಪ್ರೌಢಶಾಲೆಯಲ್ಲಿ ಎಂಟು ದಿನಗಳ ಕಾಲ ನಡೆದ ಆರ್‌ಎಸ್‌ಎಸ್ ಉಡುಪಿ ಜಿಲ್ಲಾ ಪ್ರಾಥಮಿಕ ಶಿಕ್ಷಾ ವರ್ಗದ ಸಮಾರೋಪದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದೇಶದ ರಕ್ಷಣೆ, ಆಹಾರ ಕ್ಷೇತ್ರದಲ್ಲಿ ನಾವು ಸ್ವಾವಲಂಬಿಗಳಾದರೂ ಶಿಕ್ಷಣ, ಆರೋಗ್ಯ ಕ್ಷೇತ್ರದ ಸಹಿತ ಮೂಲಭೂತ ಸೌಲಭ್ಯ ಒದಗಿಸುವಲ್ಲಿ ಮತ್ತಷ್ಟು ಪ್ರಗತಿ ಸಾಧನೆಯಾಗಬೇಕು ಎಂದರು. ಆರ್‌ಎಸ್‌ಎಸ್ ರಾಷ್ಟ್ರ ಪ್ರೇಮದ ಸಂಘಟನೆಯಾಗಿದ್ದು, ದೇಶಕ್ಕೆ ಆಪತ್ತು ಬಂದಾಗ ಅನೇಕ ಸಂದರ್ಭಗಳಲ್ಲಿ ಭಾರತೀಯ ಸೇನೆಯ ಜೊತೆಗೆ ಕಾರ್ಯನಿರ್ವಹಿಸಿದೆ. ದೇಶದಲ್ಲಿನ ಪ್ರತಿ ಸಮಸ್ಯೆಗಳಿಗೆ ಆರ್‌ಎಸ್‌ಎಸ್ ಸ್ಪಂದಿಸುತ್ತದೆ ಎಂಬುದನ್ನು ಪುಸ್ತಕವನ್ನು ಓದಿ ಅರಿತುಕೊಂಡಿದ್ದೇನೆ ಎಂದರು. ಈ ದೇಶದಲ್ಲಿನ ಅತ್ಯುನ್ನತ ವಿದ್ಯಾಸಂಸ್ಥೆ ಐಐಟಿಯಿಂದ ಪ್ರತಿಭಾನ್ವಿತರು ಶಿಕ್ಷಿತರಾಗಿ ಹೊರಗೆ ಬರುತ್ತಾರೆ.ಆದರೆ ಅವರು ಸೇವೆಯನ್ನು ಮಾತ್ರ ವಿದೇಶದಲ್ಲಿ ನೀಡುತ್ತಾರೆ.
ಭಾರತದ ಮುಸ್ಲಿಂ ಮಹಿಳೆಯರಿಗೆ ಇರಾನ್ ಮಾದರಿಯಾಗಬೇಕು: ಶೋಭಾ ಕರಂದ್ಲಾಜೆ
ಈ ವಿದ್ಯಾರ್ಥಿಗಳಿಗೆ ಭಾರತದಲ್ಲಿಯೇ ಸೇವೆ ಸಲ್ಲಿಸಲು ಅವಕಾಶಗಳನ್ನು ಸೃಷ್ಟಿಸಬೇಕು ಎಂದು ಹೇಳಿದರು. ಆರ್‌ಎಸ್‌ಎಸ್‌ನ ಮಂಗಳೂರು ವಿಭಾಗ ಪ್ರಚಾರ ಪ್ರಮುಖ್ ಸುರೇಶ್ ಹೆಜಮಾಡಿ ಮಾತನಾಡಿ, ಜಗತ್ತು ಬೆಳಗಲು ಹಿಂದೂ ಸಂಸ್ಕೃತಿ ಉಳಿಯಬೇಕು, ಬೆಳೆಯಬೇಕು. ವಸುದೈವ ಕುಟುಂಬಕಂ ಧ್ಯೇಯವುಳ್ಳ ಹಿಂದೂ, ಆರ್‌ಎಸ್‌ಎಸ್ ಸಂಕುಚಿತ ಮನೋಭಾವ ಹೊಂದಿಲ್ಲ, ಯಾರ ವಿರುದ್ಧವೂ ಇಲ್ಲ, ಸಾಮರಸ್ಯಕ್ಕಾಗಿ ಶ್ರಮಿಸುತ್ತಿದೆ. ವೃಥಾ ಆರೋಪಗಳಿಗೆ ಕಿವಿಗೊಡಬೇಡಿ. ವ್ಯವಸ್ಥೆಯ ಪರಿವರ್ತನೆ, ಸಮಾಜದ ಕಟ್ಟಕಡೆಯ ವ್ಯಕ್ತಿಯ ಉದ್ಧಾರ, ಅಂತ್ಯೋದಯವೇ ಆರ್‌ಎಸ್‌ಎಸ್ ಧ್ಯೇಯ ಎಂದು ಹೇಳಿದರು.
ಈ ರಾಷ್ಟ್ರ, ಈ ಭೂಮಿ ನನ್ನದು ಎನ್ನುವ ನೆಲೆಯಲ್ಲಿ ಸಮಾಜದ ಸಂಘಟನೆಗಾಗಿ ಸ್ವಾರ್ಥ ತೊರೆದು ಸಂಸ್ಕಾರ ಪ್ರಧಾನ ಶಿಕ್ಷಣವೇ ಬದುಕಿನ ಗುರಿ. ದೇಹದ ಆರೋಗ್ಯಕ್ಕಿಂತ ದೇಶದ ಆರೋಗ್ಯಕ್ಕೆ ಚಿಕಿತ್ಸೆ ಅಗತ್ಯವಿದ್ದು ದೇಶ ಪರಮ ವೈಭವ ಸ್ಥಿತಿ ಹೊಂದಬೇಕೆನ್ನುವುದೇ ಆರ್‌ಎಸ್‌ಎಸ್ ಗುರಿಯಾಗಿದೆ, ವ್ಯಕ್ತಿಗತ ಚಾರಿತ್ರ್ಯ, ರಾಷ್ಟ್ರೀಯ ಚಾರಿತ್ರ್ಯ ನಿರ್ಮಾಣದಲ್ಲಿ ತೊಡಗಿದೆ ಎಂದರು. ಆರ್‌ಎಸ್‌ಎಸ್ ಉಡುಪಿ ಜಿಲ್ಲಾ ಸಂಘಚಾಲಕ್ ಡಾ.ನಾರಾಯಣ ಶೆಣೈ ಉಪಸ್ಥಿತರಿದ್ದರು. ವರ್ಗಾಧಿಕಾರಿ ಕೃಷ್ಣ ಪ್ರಸಾದ್ ಶೆಟ್ಟಿ ಶಿಬಿರದ ವರದಿ ಮಂಡಿಸಿದರು.
ಅಪಘಾತಗೊಂಡು ಮೆದುಳು ನಿಷ್ಕ್ರೀಯ, ಅಂಗದಾನದ ಮೂಲಕ ಸಾರ್ಥಕತೆ ಮೆರೆದ ಎಂಐಟಿ ವಿದ್ಯಾರ್ಥಿ
ಗರಿಗೆದರಿದೆ ಹಿಂದುತ್ವವು ಇಂದು ಧ್ಯೇಯವಾಕ್ಯದಡಿ ಶಿಸ್ತುಬದ್ಧ, ಸಮಯಬದ್ಧವಾಗಿ ನಡೆದ ಶಿಕ್ಷಾ ವರ್ಗದಲ್ಲಿ 310 ಶಿಬಿರಾರ್ಥಿಗಳಿದ್ದರು. ಧ್ವಜಾರೋಹಣ,ಧ್ವಜ ಪ್ರಣಾಮದ ಬಳಿಕ ನಮಸ್ತೆ ಸದಾ ವತ್ಸಲೆ ಸಂಘ ಗೀತೆ ಹಾಡಲಾಯಿತು. ಶಿಬಿರಾರ್ಥಿಗಳು ದಂಡ ಪ್ರದರ್ಶನ, ನಿಯುದ್ಧ ಸ್ವಯಂ ರಕ್ಷಣೆ ಕಲೆ, ಯೋಗಾಸನ ಸಹಿತ ಶಾರೀರಿಕ ವ್ಯಾಯಾಮದ ಪ್ರದರ್ಶನ ನೀಡಿದರು.ಕಾರ್ಯಕ್ರಮದಲ್ಲಿ ಹಿರಿಯ ಪ್ರಚಾರಕರು, ರಾಜಕೀಯ ಮುಖಂಡರು, ಸಮಾಜ ಸೇವಕರು, ಸ್ಥಳೀಯ ಮಹಿಳೆಯರು,ಮಕ್ಕಳು ಭಾಗವಹಿಸಿದ್ದರು.