Asianet Suvarna News Asianet Suvarna News

ವಿಜಯಪುರದಲ್ಲಿ ಸ್ವಯಂ ಸೇವಕರ ಪಥಸಂಚಲನ!

ವಿಜಯಪುರ ನಗರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಥಸಂಚಲನ ನಡೆಯಿತು. ಗಣವೇಷದಲ್ಲಿ ಪಾಲ್ಗೊಂಡ ಸಾವಿರಾರು ಕಾರ್ಯಕರ್ತರು ಗಮನ ಸೆಳೆದರು. ನಗರದ ಹಲವೆಡೆ ಗಣವೇಷಧಾರಿಗಳನ್ನ ಸಾರ್ವಜನಿಕರು ಸ್ವಾಗತಿಸಿದ್ದು ವಿಶೇಷವಾಗಿತ್ತು. ನಗರದಲ್ಲಿ ನಡೆದ ಗಣವೇಷಧಾರಿಗಳ ಪಥಸಂಚಲನ ಜನಮನ ಸೆಳೆಯಿತು.

rss march past at vijayapura gow
Author
First Published Nov 6, 2022, 8:28 PM IST

ವರದಿ: ಷಡಕ್ಷರಿ‌ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ (ನ.6): ಗುಮ್ಮಟನಗರಿ ವಿಜಯಪುರ ನಗರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಥಸಂಚಲನ ನಡೆಯಿತು. ಗಣವೇಷದಲ್ಲಿ ಪಾಲ್ಗೊಂಡ ಸಾವಿರಾರು ಕಾರ್ಯಕರ್ತರು ಗಮನ ಸೆಳೆದರು. ನಗರದ ಹಲವೆಡೆ ಗಣವೇಷಧಾರಿಗಳನ್ನ ಸಾರ್ವಜನಿಕರು ಸ್ವಾಗತಿಸಿದ್ದು ವಿಶೇಷವಾಗಿತ್ತು. ನಗರದಲ್ಲಿ ನಡೆದ ಗಣವೇಷಧಾರಿಗಳ ಪಥಸಂಚಲನ ಜನಮನ ಸೆಳೆಯಿತು. ನಗರದ ಸೆಟಲೈಟ್‌ ಬಸ್‌ ನಿಲ್ದಾಣದಿಂದ ಶುರುವಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪಥಸಂಚಲನ ನಗರದ ಪ್ರಮುಖ ಏರಿಯಾಗಳಲ್ಲಿ ಸಂಚರಿತು. ಗೋದಾವರಿ ಹೊಟೇಲ್‌, ಶಿವಾಜಿ ವೃತ್ತ, ಡೊಬಲೆ ಗಲ್ಲಿ, ಉಪ್ಪಲಿ ಬುರ್ಜ್‌, ಸರಾಪ್‌ ಬಜಾರ್‌, ಗಾಂಧಿ ವೃತ್ತ, ಸಿದ್ದೇಶ್ವರ ದೇಗುಲ, ಕೋರಳ್ಳಿ ಚೌಕ್‌, ರಜಪೂತ ಓಣಿ ಮೂಲಕ ಸಾಗಿ ನಾಗೂರ್‌ ಕಾಲೇಜು ಆವರಣ ಪ್ರವೇಶಿಸಿತು. ನಾಗೂರು ಕಾಲೇಜು ಆವರಣದಲ್ಲಿ ಶಿಸ್ತು ಬದ್ಧವಾಗಿ ಸಂಘದ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ವೇದಿಕೆ ಕಾರ್ಯಕ್ರಮದಲ್ಲಿ ಸಂಘದ ಮುಖಂಡರು, ಸಂಚಾಲಕರು ಕಾರ್ಯಕರ್ತರನ್ನ ಉದ್ದೇಶಿಸಿ ಭಾಷಣ ಮಾಡಿದ್ರು..

ಪಥಸಂಚಲನದ ಉದ್ದಕ್ಕು ಪುಷ್ಪಾರ್ಚನೆ!
ಇನ್ನು ಒಂದು ಕಡೆಗೆ ಗಣವೇಷದಲ್ಲಿ ಸ್ವಯಂ ಸೇವಕ ಸಂಘದ ಸಿಪಾಯಿಗಳು ಸಾಗುತ್ತಿದ್ದರೇ, ಸಾರ್ವಜನಿಕರು ಪುಷ್ಪಾರ್ಚನೆ ಮಾಡಿ ಪಥಸಂಚಲ ಸ್ವಾಗತಿಸಿತ್ತು ವಿಶೇಷವಾಗಿತ್ತು. ಗಾಂಧಿ ವೃತ್ತ, ಶಿವಾಜಿ ಚೌಕ್‌ ಸೇರಿದಂತೆ ಹಲವೆಡೆ ಅಂಗಡಿ ಮಾಲಿಕರು, ವ್ಯಾಪಾರಸ್ಥರು ಪುಷ್ಪಾರ್ಚನೆ ಮಾಡಿ ಗಣವೇಷಧಾರಿಗಳನ್ನ ಗೌರವಿಸಿದ್ರು..

ಮನೆ ಎದುರು ರಂಗೋಲಿ ಮೂಲಕ ಸ್ವಾಗತ!
ಡೋಪಳೆ ಗಲ್ಲಿ, ರಜಪೂತ್‌ ಗಲ್ಲಿ, ಉಪ್ಪಲಿ ಪುರ್ಜ್‌ ಮೂಲಕ ಪಥಸಂಚಲ ಸಾಗುವಾಗ ವಿಶೇಷ ರಂಗೋಲಿಗಳು ಗಮನ ಸೆಳೆದವು. ದೇಶಭಕ್ತಿಯ ಉಕ್ಕಿಸುವ ರಂಗೋಲಿಗಳು ವಿಶೇಷವೆನಿಸಿದವು. ಇನ್ನು ಹೆಣ್ಣುಮಕ್ಕಳು- ಗೃಹಿಣಿಯರು ಸಹ ಪಂಥಸಂಚಲನ ಮನೆ ಎದುರು ಬರತ್ತಿದ್ದಂತೆ ಪುಷ್ಪಾರ್ಚನೆ ಮಾಡಿದ್ದು ಜನರ ಪ್ರೀತಿಯನ್ನ ಸಾಕ್ಷಿಕರಿಸಿತು.

ಸಿಎಂ ಬೊಮ್ಮಾಯಿ ಒರಿಜಿನಲ್ RSS ಅಲ್ಲ; ಮುಸ್ಲಿಂ ಮೀಸಲಾತಿ ಕಡಿಮೆ ಮಾಡಲು ಸಾಧ್ಯವಿಲ್ಲ: CM Ibrahim

ಆರ್‌ ಎಸ್‌ ಎಸ್‌ ಪಥಸಂಚಲನ ಹಿನ್ನೆಲೆ ಬಿಗಿ ಭದ್ರತೆ!
ನಗರದ ಪ್ರಮುಖ ಕಡೆಗಳಲ್ಲಿ ಆರ್‌ ಎಸ್‌ ಎಸ್‌ ಪಥಸಂಚಲನ ಹಿನ್ನೆಲೆ ಪೊಲೀಸ್‌ ಇಲಾಖೆ ಬಿಗಿ ಭದ್ರತೆಯನ್ನ ಕೈಗೊಂಡಿತ್ತು. ಅಹಿತಕರ ಘಟನೆಗಳು ನಡೆಯದಂತೆ ಸಾಕಷ್ಟು ಮುನ್ನೆಚ್ಚರಿಕೆಗಳನ್ನ ಎಸ್ಪಿ ಆನಂದಕುಮಾರ್‌ ತೆಗೆದುಕೊಂಡಿದ್ದರು.  ಭದ್ರತೆಗಾಗಿ 2 ಡಿಎಸ್ಪಿ, 5 ಸಿಪಿಐ, 10 ಪಿಎಸೈ, 100 ಸಿಬ್ಬಂದಿ, ಜೊತೆಗೆ ಜಿಲ್ಲಾ ಮೀಸಲು ಪಡೆಯ ಮೂರು ತುಕುಡಿ, ಕೆಎಸ್‌ಆರ್ಪಿಯ 2 ತುಕುಡಿಗಳನ್ನ ನಿಯೋಜಿಸಲಾಗಿತ್ತು. ಸೂಕ್ಷ್ಮ ಪ್ರದೇಶಗಳಲ್ಲಿ, ಆಯಕಟ್ಟಿನ ಜಾಗಗಳಲ್ಲಿ ಹೆಚ್ಚಿನ ಪೊಲೀಸ್‌ ಬಂದೋಬಸ್ತ ಕೈಗೊಳ್ಳಲಾಗಿತ್ತು ಎಂದು ಆನಂದಕುಮಾರ ಏಷ್ಯಾನೆಟ್‌ ಸುವರ್ಣ ನ್ಯೂಸ್.ಕಾಮ್‌ ಗೆ ಮಾಹಿತಿ ನೀಡಿದ್ರು.

ತಮಿಳುನಾಡಿನಲ್ಲಿ ಆರೆಸ್ಸೆಸ್‌ ಮೆರವಣಿಗೆ ಮುಂದೂಡಿಕೆ, ಕೋರ್ಟ್‌ ಆದೇಶದ ವಿರುದ್ಧ ಮೇಲ್ಮನವಿ!

ಸಾವಿರಾರು ಗಣವೇಷಧಾರಿಗಳು ಭಾಗಿ!
ಕೋವಿಡ್‌ ಕಾರಣದಿಂದ ಕಳೆದೆರೆಡು ವರ್ಷದಿಂದ ಆರ್‌ ಎಸ್‌ ಎಸ್‌ ಪಥಸಂಚಲನ ನಡೆದಿರಲಿಲ್ಲ. ಕೋವಿಡ್‌ ಬಳಿಕ ಈ ಬಾರಿ ಅದ್ದೂರಿಯಾಗಿ ಪಥಸಂಚಲನ ನಡೆಯಿತು. ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಪಾಲಿಕೆ ಸದಸ್ಯ ಶಿವರುದ್ರ ಬಾಗಲಕೋಟ, ನಗರ ಕಾರ್ಯಭಾರದ ಸಂಚಾಲಕ ಡಾ. ಸಂಜೀವ ಜೋಶಿ, ನಗರ ಕಾರ್ಯಭಾರದ ಸಹ ಸಂಚಾಲಕ ವಿಶಾಲ್‌ ಪಾಟೀಲ್‌, ಸಚಿವ ಕಾರಜೋಳ ಪುತ್ರ ಉಮೇಶ ಕಾರಜೋಳ ಸೇರಿದಂತೆ ಅನೇಕ ಮುಖಂಡರು ಪಾಲ್ಗೊಂಡಿದ್ದರು.

Follow Us:
Download App:
  • android
  • ios