Asianet Suvarna News Asianet Suvarna News

Chitradurga: ಮಾದಾರ ಚನ್ನಯ್ಯ ಗುರುಪೀಠಕ್ಕೆ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಭೇಟಿ!

ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಇಂದು ಚಿತ್ರದುರ್ಗದ ಹೊರವಲಯದಲ್ಲಿರುವ ಮಾದಾರ ಚನ್ನಯ್ಯ ಗುರುಪೀಠಕ್ಕೆ ಆಗಮಿಸಿದರು‌‌. ಸೋಮವಾರ ರಾತ್ರಿ 7.30 ರ ಸುಮಾರಿಗೆ ಆಗಮಿಸಿದ ಅವರು ಸಕಲ ಭದ್ರತೆಯೊಂದಿಗೆ ಮಠಕ್ಕೆ ಆಗಮಿಸಿದರು.

rss chief mohan bhagwat will visit to sri madara channayya mutt at chitradurga gvd
Author
Bangalore, First Published Jul 12, 2022, 12:59 AM IST | Last Updated Jul 12, 2022, 12:59 AM IST

ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ (ಜು.12): ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಇಂದು ಚಿತ್ರದುರ್ಗದ ಹೊರವಲಯದಲ್ಲಿರುವ ಮಾದಾರ ಚನ್ನಯ್ಯ ಗುರುಪೀಠಕ್ಕೆ ಆಗಮಿಸಿದರು‌‌. ಸೋಮವಾರ ರಾತ್ರಿ 7.30 ರ ಸುಮಾರಿಗೆ ಆಗಮಿಸಿದ ಅವರು ಸಕಲ ಭದ್ರತೆಯೊಂದಿಗೆ ಮಠಕ್ಕೆ ಆಗಮಿಸಿದರು. ಈ ವೇಳೆ ಮಾದಾರ ಚನ್ನಯ್ಯ ಗುರುಪೀಠದ ಪೀಠಾಧಿಪತಿಗಳಾದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರನ್ನು ಅದ್ದೂರಿಯಾಗಿ ಸ್ವಾಗತ ಮಾಡಿಕೊಂಡರು. ಈ ಸಮಯದಲ್ಲಿ ಅಲ್ಲಿ ನೆರೆದಿದ್ದ ಸಂಘ ಪರಿವಾರದ ಕಾರ್ಯಕರ್ತರು ಭಾರತ್ ಮಾತಾಕಿ ಜೈ ಎನ್ನುವ ಘೋಷಣೆ ಕೂಗುವ ಮೂಲಕ ಭಾಗವತರನ್ನು ಅದ್ದೂರಿಯಾಗಿ ವೆಲ್ ಕಮ್ ಮಾಡಿಕೊಂಡರು.

ಈ ವೇಳೆ ಅವರಿಗೆ ವಿಶೇಷ ವಾದ್ಯ ಸ್ವರದೊಂದಿಗೆ ತಮ್ಮ ಮಠಕ್ಕೆ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಶ್ರೀಗಳು ಬರಮಾಡಿಕೊಂಡರು. ಇದೇ ಸಂದರ್ಭದಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವರಾದ ಬಿ.ಸಿ ಪಾಟೀಲ್, ಹಾಗೂ ಮತ್ತೋರ್ವ ಸಚಿವರಾದ ಬಿ. ಶ್ರೀರಾಮುಲು, ಮತ್ತು ಕೇಂದ್ರ ಸಚಿವರಾದ ಎ ನಾರಾಯಣಸ್ವಾಮಿಯನ್ನೊಳಗೊಂಡು ಜಿಲ್ಲೆಯ ಎಲ್ಲಾ ಶಾಸಕರು ಹಾಗೂ ಜನಪ್ರತಿನಿಧಿಗಳು ಹಾಜರಿದ್ದರು. ಮಠಕ್ಕೆ ಆಗಮಿಸಿ ಸ್ವಲ್ಪ ಕಾಲ ಮಾದಾರ ಚನ್ನಯ್ಯ ಶ್ರೀಗಳೊಂದಿಗೆ ಸಮಾಲೋಚನೆ ನಡೆಸಿದ ಮೋಹನ್ ಭಾಗವತ್ ಅವರು, ಸ್ವಲ್ಪ ಸಮಯ ಬಿಡುವು ಮಾಡಿಕೊಂಡರು‌. ನಂತರ ಮಠದ ಮುಂಭಾಗದಲ್ಲಿಯೇ ಇದ್ದಂತಹ ತಮ್ಮ ಸಂಘ ಪರಿವಾರದ ಕಾರ್ಯಕರ್ತರ ಬಳಿ ಬಂದು ಅವರಿಗೆ ನಮಸ್ಕಾರಗಳನ್ನು ತಿಳಿಸಿದರು‌. 

ದುಬಾರಿ ಫೀಸ್ ಕೀಳುವ ಖಾಸಗಿ ಶಾಲೆಗಳ ಮಧ್ಯೆ ಮಾದರಿಯಾದ ಸಿದ್ದಾಪುರದ ಖಾಸಗಿ ಶಾಲೆ

ಈ ವೇಳೆ ಮಾತನಾಡಿದ ಭಾಗವತರು, ಈ ಹಿಂದೆ ಮೂರ್ನಾಲ್ಕು ಸಲ ಮಾದಾರ ಚನ್ನಯ್ಯ ಶ್ರೀಗಳ ಭೇಟಿ ಮಾಡಿದ್ದೇನೆ. ನಾಗ್ಪುರ, ಕುಂಭಮೆಳದ ಕಾರ್ಯಕ್ರಮಗಳಲ್ಲಿ ಭೇಟಿ ಮಾಡಿದ್ದೆನು. ನಂತರದಲ್ಲಿ ಮಠಕ್ಕೆ ಆಗಮಿಸಲು ಸಾಧ್ಯವಾಗಿರಲಿಲ್ಲ. ಅದೇ ವೇಳೆಗೆ ಕೋವಿಡ್ ಕಾರಣದಿಂದ ಕಳೆದ ಎರಡು ವರ್ಷದಿಂದ ಮಠಕ್ಕೆ ಬರಲು ಆಗಿರಲಿಲ್ಲ‌. ಕಳೆದ ಜನವರಿಯಲ್ಲಷ್ಟೇ ಕೊಲ್ಲಾಪುರದ ಮಠದಲ್ಲಿ ಭೇಟಿ ಮಾಡಿದ್ದೆವು. ಅಲ್ಲಿ ಚನ್ನಯ್ಯ ಮಠಕ್ಕೆ ಭೇಟಿ ನೀಡಬೇಕೆಂದು ನಿರ್ಧಾರ ಮಾಡಿದೆವು. ಆದ್ರೆ ಇಂದು ಮಠಕ್ಕೆ ಭೇಟಿ ನೀಡಿ, ನಿಮ್ಮೆಲ್ಲರನ್ನು ನೋಡಿ ತುಂಬಾ ಆನಂದ ಆಗಿದೆ ಎಂದು ಅವರತ್ತ ಕೈ ಮುಗಿದು ನಮಸ್ಕಾರ ಹೇಳುವ ಮೂಲಕ ಮತ್ತೊಮ್ಮೆ ಮಠದ ಒಳಗೆ ತೆರಳಿದರು.

ಇಂದು ಮಠದಲ್ಲಿಯೇ ವಾಸ್ತವ್ಯ ಮಾಡಲಿರುವ ಭಾಗವತರು, ನಾಳೆ ವಿವಿಧ ಮಠಾಧೀಶರುಗಳ ಜೊತೆ ಸಭೆ ನಡೆಸಲಿದ್ದಾರೆ. ಯಾವ ಕಾರಣಕ್ಕೆ ಸಭೆ ನಡೆಸಲಿದ್ದಾರೆ ಎಂಬುದು ಗೌಪ್ಯವಾಗಿರುವಂತಹ ವಿಷಯವಾಗಿದೆ. ಬೆಳಗ್ಗೆ 10 ಗಂಟೆಯಿಂದ 13:30 ರವರೆಗೆ ದಲಿತ ಹಿಂದುಳಿದ ವರ್ಗಗಳ ಆಹ್ವಾನಿತ ಮಠಾಧೀಶರ ಜೊತೆ ಮಾತ್ರ ಸಂವಾದ ಕಾರ್ಯಕ್ರಮ ನಡೆಸಲಿದ್ದಾರೆ. ನಂತರ ಮಧ್ಯಾಹ್ನ ಪ್ರಸಾದ ಸ್ವೀಕರಿಸಿ, ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಬೆಂಗಳೂರಿಗೆ ತೆರಳಲಿದ್ದಾರೆ ಎಂದು ಮಠದ ಮೂಲಗಳು ತಿಳಿಸಿವೆ.

ಭಾಗವತರು ಮಠಕ್ಕೆ ಭೇಟಿ ನೀಡುವ ಮುಂಚಿತವಾಗಿ ಈ ಕುರಿತು ಸಚಿವ ಗೋವಿಂದ ಕಾರಜೋಳ ಅವರನ್ನೇ ವಿಚಾರಿಸಿದಾಗ, ಶಿವಶರಣ ಮಾದಾರ ಚನ್ನಯ್ಯ ಮಠಕ್ಕೆ ಮೋಹನ್ ಭಾಗವತ್ ಭೇಟಿ ನೀಡ್ತಿದ್ದಾರೆ‌. ವಿವಿಧ ರಾಜ್ಯಗಳಿಗೆ ತೆರಳಿದಾಗ ಮಠ, ಮಂದಿರ ಅವರು ಭೇಟಿ ನೀಡುವುದು ಸಹಜ. ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಯಾವುದೇ ಜಾತಿ ಇಲ್ಲ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಧರ್ಮ ಆಧಾರಿ ಸಂಘಟನೆ. ಹಿಂದುಳಿದ , ದಲಿತ ಮಠಾಧೀಶರ ಭೇಟಿಯಲ್ಲಿ ವಿಶೇಷವೇನೂ ಇಲ್ಲ. ಎಲ್ಲಾ ವರ್ಗದ ಜನರನ್ನೂ ಮೋಹನ್ ಭಾಗವತ್ ಭೇಟಿ ಆಗುತ್ತಾರೆ. ದೇಶಭಕ್ತಿ ಮೊದಲು ಅನ್ನುವುದುಆರ್‌ಎಸ್‌ಎಸ್‌ ವಿಚಾರ ಎಂದು ತಿಳಿಸಿದರು.

ಪಂಚಾಯಿತಿ ಪರಮಾಧಿಕಾರಕ್ಕೆ ಬಿಜೆಪಿ ಕಂಟಕ: ಎಚ್.ಆಂಜನೇಯ

ಇನ್ನೂ ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ ಪಾಟೀಲ್ ಅವರನ್ನ ಕೇಳಿದರೆ, ನಾವು ಸಹ ಮಠಕ್ಕೆ ತೆರಳಿ ಮೋಹನ್ ಭಾಗವತ್ ಭೇಟಿ ಮಾಡುತ್ತೇವೆ. ಪರಿಶಿಷ್ಟ ಸಮುದಾಯದ ಮಾದಾರ ಚನ್ನಯ್ಯ ಮಠಕ್ಕೆ ಭೇಟಿ ನೀಡ್ತಿದ್ದಾರೆ. ಅಸ್ಪೃಶ್ಯರೆಂಬ ಕಾರಣಕ್ಕೆ ದೂರವಿಡುವ ಸಮುದಾಯದ ಮಠಕ್ಕೆ ಭಾಗವತರು ಭೇಟಿ ನೀಡ್ತಿದ್ದಾರೆ. ಮಾದಾರ ಚನ್ನಯ್ಯ ಮಠದಲ್ಲಿ ಇಂದು ಮೋಹನ್ ಭಾಗವತ್ ವಾಸ್ಯವ್ಯ ಮಾಡಲಿದ್ದಾರೆ. ನಾಳೆ ಹಿಂದುಳಿದ, ದಲಿತ ಮಠಾಧೀಶರ ಭೇಟಿ ಮಾಡಲಿದ್ದಾರೆ. ಎಲ್ಲಾ ಜಾತಿ, ಜನಾಂಗದ ಮೇಲೆ ಅವರಿಗಿರುವ ಪ್ರೀತಿ‌ ತೋರುತ್ತದೆ ಎಂದು ಹೇಳಿದರು.

Latest Videos
Follow Us:
Download App:
  • android
  • ios