ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಧಾರವಾಡದ ಹೈದರ್‌ಶಾವಲಿ ದರ್ಗಾ ಅಭಿವೃದ್ಧಿಗೆ ₹ 25 ಲಕ್ಷ ಅನುದಾನ ಬಿಡುಗಡೆ ಮಾಡಿದೆ ಎಂದು ಹೆಸ್ಕಾಂ ಅಧ್ಯಕ್ಷ ಅಜೀಮಫೀರ್‌ ಖಾದ್ರಿ ತಿಳಿಸಿದ್ದಾರೆ. ಹಜರತ್ ಸಯ್ಯದ್ ಶಾ ದರ್ಗಾ ಆವರಣದಲ್ಲಿ ನಡೆದ ಭೂಮಿಪೂಜೆ ಸಮಾರಂಭ ನಡೆಯಿತು.

ಧಾರವಾಡ: ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇಲ್ಲಿನ ಹೈದರ್‌ಶಾವಲಿ ದರ್ಗಾ ಅಭಿವೃದ್ಧಿಗೆ ₹ 25 ಲಕ್ಷ ಅನುದಾನ ಬಿಡುಗಡೆ ಮಾಡಿದೆ ಎಂದು ಹೆಸ್ಕಾಂ ಅಧ್ಯಕ್ಷ ಅಜೀಮಫೀರ್‌ ಖಾದ್ರಿ ಹೇಳಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪಟ್ಟಣದ ಹರಭಟ್ ಹೈಸ್ಕೂಲ್ ಹತ್ತಿರವಿರುವ ಹಜರತ್ ಸಯ್ಯದ್ ಶಾ ದರ್ಗಾ ಆವರಣದಲ್ಲಿ ದರ್ಗಾದ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ದರ್ಗಾ, ದೇವಸ್ಥಾನಗಳ ಅಭಿವೃದ್ಧಿಗೆ ಅಗತ್ಯ ಅನುದಾನ ಬಿಡುಗಡೆ

ವಸತಿ ಮತ್ತು ವಕ್ಫ್‌ ಸಚಿವ ಜಮೀರ್‌ ಅಹ್ಮದ್ ಅವರು ರಾಜ್ಯಾದ್ಯಂತ ಹಲವು ದರ್ಗಾ, ದೇವಸ್ಥಾನಗಳ ಅಭಿವೃದ್ಧಿಗೆ ಅಗತ್ಯ ಅನುದಾನ ಬಿಡುಗಡೆ ಮಾಡುವ ಮೂಲಕ ಮಾದರಿಯಾಗಿದ್ದಾರೆ. ಬಿಡುಗಡೆಯಾದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ತಿಳಿಸಿದರು.

ಪಂಚ ಗ್ಯಾರಂಟಿ ಸಮಿತಿ ಮಾಜಿ ಅಧ್ಯಕ್ಷ ಶಿವಾನಂದ ಬೆಂತೂರ, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಜಗದೀಶ ಉಪ್ಫಿನ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಚಂದ್ರಶೇಖರ ಜುಟ್ಟಲ್ ಮಾತನಾಡಿದರು.

ಅಂಜುಮನ್ ಸಂಸ್ಥೆಯ ಅಧ್ಯಕ್ಷ ಖೈಯೀಮ್ ನಾಲಬಂದ, ಪಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಕಿರೇಸೂರ, ನಗರ ಕಾಂಗ್ರೆಸ್ ಘಟಕದ ಅಧ್ಯಕ್ಷ‌ ಸಲೀಂ ಕ್ಯಾಲಕೊಂಡ, ತೈಯಬ್ ಜಂಗ್ಲಿ ಬಾಬಾ, ರಸೂಲ್ ಅಲ್ಲಾ ಮುಲ್ಲಾ, ಖಾದರಸಾಬ್‌ ದಾದಿಮನಿ, ಮಲಿಕ್ ಶಿರೂರ, ಛಾಯಪ್ಪ ಹೊಸಮನಿ, ಹಾಲಪ್ಪ ತಡಹಾಳ, ಮಲ್ಲೇಶ ಬೆಳವಡಿ ಸೇರಿದಂತೆ ಹಲವರಿದ್ದರು.