ಈಜು ಬಾರದಿದ್ದರೂ ಮಲಪ್ರಭಾ ನದಿಗೆ ಇಳಿದ ಬಾಲಕ ಆಳವಾದ ನೀರಲ್ಲಿ ಮುಳುಗಿ ದಾರುಣವಾಗಿ ಮೃತಪಟ್ಟ ಘಟನೆ ಬೆಳಗಾವಿಯ ಬೈಲಹೊಂಗಲ ತಾಲೂಕಿನ ವಕ್ಕುಂದ ಗ್ರಾಮದಲ್ಲಿ ನಡೆದಿದೆ. 15 ವರ್ಷದ ಮಹೇಶ್ ಗಣಾಚಾರಿ ಎಂಬ ಬಾಲಕನ ಸಾವಿಗೆ ಊರಿಗೆ ಊರೇ ಮರುಗಿದೆ.

ಬೆಳಗಾವಿ (ಜೂ.6): ಮಲಪ್ರಭಾ ನದಿಯಲ್ಲಿ ಈಜಲು ಹೋಗಿ 15 ವರ್ಷದ ಬಾಲಕ ದಾರುಣವಾಗಿ ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ವಕ್ಕುಂದ ಗ್ರಾಮದಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಹೇಶ ಗಣಾಚಾರಿ(೧೫) ಮೃತ ದುರ್ದೈವಿ ಬಾಲಕ. ಬಾಲಕನಿಗೆ ಈಜು ಬರುತ್ತಿರಲಿಲ್ಲ ಎನ್ನಲಾಗಿದೆ. ಆದರೂ ಸ್ನಾನಕ್ಕೆಂದು ನದಿಗೆ ಇಳಿದಿದ್ದಾ ಮೃತ ಬಾಲಕ.

ಇದನ್ನೂ ಓದಿ: ನಿಷೇಧಾಜ್ಞೆ ಜಾರಿ ಇದ್ದರೂ ಕಾವೇರಿ ನದಿಯಲ್ಲಿ ನಿತ್ಯ ಮಿಂದೇಳುತ್ತಿರುವ ಸಾವಿರಾರು ಪ್ರವಾಸಿಗರು!

ನದಿಗಿಳಿಯುತ್ತಿದ್ದಂತೆ ಇದ್ದಕ್ಕಿದ್ದಂತೆ ಮುಳುಗಿದ ಬಾಲಕ. ಬಾಲಕ ನೀರಲ್ಲಿ ಮುಳುಗಿರುವ ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಕರೆ ಮಾಡಿರುವ ಸ್ಥಳೀಯರು. ಬಳಿಕ ಸ್ಥಳಕ್ಕೆ ಬಂದ ಸಿಬ್ಬಂದಿ ಶೋಧ ಕಾರ್ಯ ಆರಂಭಿಸಿದರು. ಕೆಲವು ಗಂಟೆಗಳ ಹುಡುಕಾಟದ ನಂತರ ಬಾಲಕನ ಮೃತದೇಹ ಸಿಕ್ಕಿದೆ. ಸಿಬ್ಬಂದಿ ಬಾಲಕನ ಮೃತದೇಹ ಹೊರತರುತ್ತಿದ್ದಂತೆ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿತು.

ಬೆಳಗ್ಗೆ ಕಣ್ಮುಂದೆ ಮಗ ಈಗ ಇಲ್ಲ. ಎತ್ತಿ ಆಡಿ ಬೆಳಿಸಿದ ಮಗ, ಕಣ್ಮುಂದೆ ಶವವಾದನಲ್ಲ ಎಂದು ಪೋಷಕರನ್ನು ಕಣ್ಣೀರಲ್ಲಿ ಮುಳುಗಿಸಿತು. ನೆರೆಹೊರೆಯವರ ಕಣ್ಣು ತೇವಗೊಳಿಸಿತು. ಸದ್ಯ ಈ ಘಟನೆ ಸಂಬಂಧ ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.