Asianet Suvarna News Asianet Suvarna News

ನಂದಿ ಗಿರಿಧಾಮದಲ್ಲಿ ಮತ್ತೆ ಶುರು ರೂಂ ಬುಕಿಂಗ್‌

ಲಾಕ್ ಡೌನ್ ಹಾಗೂ ಕೊರೋನಾತಂಕ ಹಿನ್ನೆಲೆ ಬಂದ್ ಆಗಿದ್ದ ನಂದಿ ಗಿರಿಧಾಮದ ರೂಮ್ ಬುಕಿಂಗ್ ಸೇವೆ ಇದೀಗ ಮತ್ತೆ ಆರಂಭವಾಗಿದೆ. ಪ್ರವಾಸಿಗರ ಇದೀಗ ಮತ್ತೆ ನಂದಿ ಗಿರಿಧಾಮದ ವಿಹಾರಕ್ಕೆ ತೆರಳಲು ಅವಕಾಶ ಒದಗಿಸಲಾಗಿದೆ.

room Booking Service Begins in nandhi hills
Author
Bengaluru, First Published Aug 14, 2020, 2:39 PM IST

ಬೆಂಗಳೂರು (ಆ.14) : ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಕಳೆದ ಐದು ತಿಂಗಳಿಂದ ಸ್ಥಗಿತಗೊಂಡಿದ್ದ ನಂದಿ ಗಿರಿಧಾಮದ ಅತಿಥಿ ಗೃಹಗಳ (ಕಾಟೇಜ್‌, ಡೀಲಕ್ಸ್‌ ರೂಂ, ವಿವಿಐಪಿ ಸೂಟ್‌) ಬುಕಿಂಗ್‌ ಬುಧವಾರದಿಂದ ಪುನರಾರಂಭವಾಗಿದೆ.

ಕೊರೋನಾ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಪ್ರತಿದಿನ ಶೇ.50ರಷ್ಟುರೂಂಗಳ ಬುಕಿಂಗ್‌ಗೆ ಮಾತ್ರ ಅವಕಾಶ ನೀಡಲಾಗಿದೆ. 24 ತಾಸಿನ ಬಳಿಕ ಇನ್ನು ಉಳಿದ ಶೇ.50ರಷ್ಟುರೂಂಗಳ ಬುಕಿಂಗ್‌ಗೆ ಅವಕಾಶ ಕಲ್ಪಿಸಲಾಗುತ್ತದೆ.

ಬಿಜೆಪಿ ಸೇರೋದು ಖಚಿತ ಎಂದ್ರು ಜೆಡಿಎಸ್ ಮಾಜಿ ಶಾಸಕ...

ಪ್ರವಾಸಿಗರ ಸುರಕ್ಷತೆಗಾಗಿ ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರತಿ 24 ತಾಸಿಗೊಮ್ಮೆ ರೂಂಗಳನ್ನು ಸ್ಯಾನಿಟೈಸ್‌ ಮಾಡಲಾಗುತ್ತಿದೆ. ಹೀಗಾಗಿ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ (ಉದ್ಯಾನವನಗಳು, ತೋಟಗಳು ಮತ್ತು ಪುಷ್ಪಾಭಿವೃದ್ಧಿ) ಡಾ.ಎಂ.ಜಗದೀಶ್‌ ಹೇಳಿದರು.

ರೈತರಿಗೆ ರಾಜ್ಯ ಸರ್ಕಾರ ಬಂಪರ್ ಕೊಡುಗೆ...

ಗಿರಿಧಾಮಕ್ಕೆ ಸಾರ್ವಜನಿಕರು ಹಾಗೂ ಪ್ರವಾಸಿಗರ ಸಾಮಾನ್ಯ ಪ್ರವೇಶದ ನಿರ್ಬಂಧ ಮುಂದುವರಿಯಲಿದೆ. ಈ ಸಂಬಂಧ ಸರ್ಕಾರದ ಆದೇಶ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಪ್ರಸ್ತುತ ಸಾರ್ವಜನಿಕರು ಹಾಗೂ ಪ್ರವಾಸಿಗರು ಗಿರಿಧಾಮ ಅತಿಥಿ ಗೃಹಗಳನ್ನು (ಡಿಡಿಡಿ.್ಞa್ಞdಜಿhಜ್ಝ್ಝಿs್ಟಛಿsಛ್ಟಿvaಠಿಜಿಟ್ಞs.ಜ್ಞಿ) ಜಾಲತಾಣದ ಮೂಲಕ ಕಾಯ್ದಿರಿಸಬಹುದು ಎಂದು ತಿಳಿಸಿದ್ದಾರೆ.

Follow Us:
Download App:
  • android
  • ios