Asianet Suvarna News Asianet Suvarna News

ರೈತರಿಗೆ ರಾಜ್ಯ ಸರ್ಕಾರ ಬಂಪರ್ ಕೊಡುಗೆ

ಕೊರೋನಾದಿಂದ ಕಂಗಾಲಾಗಿರುವ ರೈತರ ನೆರವಿಗೆ ನಿಂತಿರುವ ರಾಜ್ಯ ಸರ್ಕಾರ ಇದೀಗ ಬಂಪರ್  ಕೊಡುಗೆ ನೀಡುತ್ತಿದೆ.

Karnataka Govt Bumper gift to farmers
Author
Bengaluru, First Published Aug 13, 2020, 1:32 PM IST

ಚಿಕ್ಕಬಳ್ಳಾಪುರ (ಆ.13):  ಕೊರೊನಾ ಲಾಕ್‌ಡೌನ್‌ನಿಂದ ಸತತ 3- 4 ತಿಂಗಳ ಕಾಲ ಮಾರುಕಟ್ಟೆಇಲ್ಲದೇ ಬಂಡವಾಳ ಸುರಿದು ಬೆಳೆದ ಬೆಳೆಗೆ ಬೆಲೆ ಸಿಗದೇ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದ್ದ ಜಿಲ್ಲೆಯ ಹೂವು, ಹಣ್ಣು, ತರಕಾರಿ ಬೆಳೆಗಾರರಿಗೆ ರಾಜ್ಯ ಸರ್ಕಾರ ಘೋಷಿಸಿರುವ ಪರಿಹಾರ ಬರೋಬ್ಬರಿ 7.04 ಕೋಟಿ ಮೊತ್ತ ಜಿಲ್ಲೆಯ ಅನ್ನದಾತರ ಬ್ಯಾಂಕ್‌ ಖಾತೆಗೆ ಜಮೆ ಆಗಿದೆ.

ಕೃಷಿ ಪ್ರಧಾನ ಜಿಲ್ಲೆಯಲ್ಲಿ ಹೂ, ಹಣ್ಣು, ತರಕಾರಿ ಬೆಳೆಯುವರ ಪ್ರಮಾಣ ಅಧಿಕವಾಗಿದ್ದು ಕೊರೊನಾ ಸಂಕಷ್ಟದಿಂದ ಸರ್ಕಾರ ಸೋಂಕು ನಿಯಂತ್ರಿಸುವ ಉದ್ದೇಶದಿಂದ ಮೂರು ತಿಂಗಳ ಕಾಲ ಲಾಕ್‌ಡೌನ್‌ ಘೋಷಿಸಿತ್ತು. ಇದರಿಂದ ರೈತರಿಗೆ ತಾವು ಬೆಳೆದ ಹಣ್ಣುಮ, ತರಕಾರಿ, ಹೂವುಗೆ ಮಾರುಕಟ್ಟೆಸಿಗದೆ ತೀವ್ರ ತೊಂದರೆಗೆ ಸಿಲುಕಿದ್ದರು. ಸರ್ಕಾರ ಪ್ರತಿ ಹೆಕ್ಟೇರ್‌ ಹೂವು ಬೆಳೆಗೆ 25 ಸಾವಿರ ರು. ಹಾಗೂ ಹಣ್ಣು ತರಕಾರಿಗೆ ಪ್ರತಿ ಹೆಕ್ಟೇರ್‌ಗೆ ತಲಾ 15 ಸಾವಿರ ರು. ನಂತೆ ಪರಿಹಾರ ಘೋಷಿಸಿದ್ದರು.

ಹುಬ್ಬಳ್ಳಿ: ಕಟಬಾಕಿಯಾದ 350ಕ್ಕೂ ಹೆಚ್ಚು ರೈತರ ಬ್ಯಾಂಕ್ ಖಾತೆಗಳು ಬ್ಲಾಕ್‌!.

3,112 ಮಂದಿ ಹೂವು ಬೆಳೆಗಾರರು

ಜಿಲ್ಲೆಯಲ್ಲಿ ತರಹೇವಾರಿ ಹೂವು ಬೆಳೆಯುವ ಒಟ್ಟು 3,151 ರೈತರಿಗೆ ಪರಿಹಾರ ನೀಡಲಾಗಿದೆ. ಚಿಕ್ಕಬಳ್ಳಾಪುರ 1,941, ಗೌರಿಬಿದನೂರು 772, ಗುಡಿಬಂಡೆ 62, ಬಾಗೇಪಲ್ಲಿ 44, ಶಿಡ್ಲಘಟ್ಟ179, ಚಿಂತಾಮಣಿ 153 ಮಂದಿಗೆ ತಲಾ ಪ್ರತಿ ಹೆಕ್ಟೇರ್‌ಗೆ 25 ಸಾವಿರ ರೂ ನಂತೆ ಒಟ್ಟು 2.61 ಕೋಟಿ ಜಮೆ ಮಾಡಲಾಗಿದ್ದರೆ ತರಕಾರಿ ಬೆಳೆಯುವ ಒಟ್ಟು 3,112 ಮಂದಿಗೆ ಸರ್ಕಾರ ಪ್ರತಿ ಹೆಕ್ಟೇರ್‌ಗೆ 15 ಸಾವಿರ ರೂ, ಪರಿಹಾರ ಕೊಟ್ಟಿದ್ದು ಅದರಂತೆ ಚಿಂತಾಮಣಿ 753, ಬಾಗೇಪಲ್ಲಿ 825, ಚಿಕ್ಕಬಳ್ಳಾಪುರ 259, ಗೌರಿಬಿದನೂರು 650, ಗುಡಿಬಂಡೆ 237, ಶಿಡ್ಲಘಟ್ಟ338 ರೈತರಿಗೆ ಒಟ್ಟು 2.45 ಕೋಟಿ ಪರಿಹಾರ ಮೊತ್ತವನ್ನು ಜಮೆ ಮಾಡಲಾಗಿದೆ.

ರೈತರ ಬೆಳೆ ಸಮೀಕ್ಷೆಗೆ ಕೃಷಿ ಇಲಾಖೆಯಿಂದ ಆ್ಯಪ್‌ ಬಿಡುಗಡೆ...

ಹಣ್ಣು ಬೆಳೆಯುವ ಚಿಂತಾಮಣಿ 305, ಚಿಕ್ಕಬಳ್ಳಾಪುರ 1,486, ಗುಡಿಬಂಡೆ 80, ಬಾಗೇಪಲ್ಲಿ 53, ಶಿಡ್ಲಘಟ್ಟ303 ಹಾಗೂ ಚಿಂತಾಮಣಿ 51 ರೈತರು ಸೇರಿ ಒಟ್ಟು 2,283 ಮಂದಿಗೆ ಒಟ್ಟು 1.98 ಕೋಟಿ ನೀಡಲಾಗಿದೆ.

Follow Us:
Download App:
  • android
  • ios